ಬಾವಿಗ್ಯಾನವ ಮರೆತು

Author : ಇಂದ್ರಕುಮಾರ್‌ ಎಚ್.ಬಿPublished by: ಇಂಪನಾ ಪುಸ್ತಕ
Address: ದಾವಣಗೆರೆ- 577002
Phone: 09986465530

Synopsys

ಲೇಖಕ ಇಂದ್ರಕುಮಾರ್‌ ಎಚ್.ಬಿ. ಅವರ ಕವನ ಸಂಕಲನ ಕೃತಿ ʻಬಾವಿಗ್ಯಾನವ ಮರೆತುʼ. ಪುಸ್ತಕದ ಬೆನ್ನುಡಿಯಲ್ಲಿ ಮಮತಾ ಆರ್.‌ ಅವರು, “ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತಾ ಪ್ರೇಮ, ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾಧ್ಯಾತ್ಮ ಸ್ಥಾಪಿತವಾಗುವ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ಧ್ವನಿಸುತ್ತವೆ. ಸಂಕಲನದ ಪ್ರಾತಿನಿಧಿಕ ಕವನವಾದ 'ಬಾವಿಗ್ಯಾನವ ಮರೆತು' ಕವಿತೆಯಲ್ಲಿ ಅವಳ ನಿರಾಕರಣೆಯು ಆತ್ಮವಂಚನೆಯನ್ನು ನೀಗಿಕೊಳ್ಳುವುದರ ಜೊತೆ ಸುಪ್ತವಾಗಿರುವುದನ್ನು ಅನಾವರಣಗೊಳಿಸುವ ಮಾದರಿಯಾಗುತ್ತದೆ” ಎಂದು ಹೇಳಿದ್ದಾರೆ.

About the Author

ಇಂದ್ರಕುಮಾರ್‌ ಎಚ್.ಬಿ

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’.  ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.  ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ...

READ MORE

Related Books