ನಾನು ಮಲ್ಲಿಗೆ ಮತ್ತು ದೇವರು

Author : ಮಂಜು ಕೋಡಿಉಗನೆ

Pages 100

₹ 80.00
Published by: ಜೋಳಿಗೆ ಪ್ರಕಾಶನ, ಚಾಮರಾಜ ನಗರ
Phone: 9845993527

Synopsys

ಒಡಲ ಕುಲುಮೆಯಿಂದೆದ್ದ ಸಾಲುಗಳು, ನೋವುಗಳು ಇಲ್ಲಿ ಕವಿತೆಯ ರೂಪ ಪಡೆದಿದೆ. ಎಲ್ಲ ಆಕ್ರೋಶದ ಸದ್ದುಗಳ ನಡುವೆಯೂ, ಬುದ್ಧ, ಅಂಬೇಡ್ಕರ್, ತಾಯಿಯ ಕುರಿತಂತೆ ಬರೆಯುವಾಗ ಪುಂಗಿಯ ನಾದಕ್ಕೆ ತಲೆಯಾಡಿಸುವ ಹಾವಿನಂತೆ ಸಾಲುಗಳು ಬಳುಕುತ್ತವೆ. ತಾಯಿ ಕರುಳ ಕುಡಿಯು ನೀನು ಕರುಳ ಮಾಲೆ ಪ್ರೀತಿ ಬಂಧ ಒಡಲ ತೊಗಲ ಅನುಬಂಧ ಹೃದಯ ಕಮಲ ಕರುಣ ಮಾಲೆ ಪ್ರೀತಿಗೆ ಮೂಲ ಹೆತ್ತ ತಾಯಿ ದ್ವೇಷಕ್ಕೆ ಇರುವರ ಯಾರಾದರೂ ತಾಯಿ?” ಎಂಬ ಪ್ರಶ್ನೆಯನ್ನಿಡುವ ಅವರ ಕವಿತೆಯಲ್ಲಿ ಪ್ರೀತಿಯ ತಹತಹಿಕೆಯಷ್ಟೇ ಇದೆ. ಅವರ ಕವಿತೆಗಳ ಸಿಟ್ಟಿನ ಮೂಲವೂ ಪ್ರೀತಿಯ ಹಪಹಪಿಕೆಯೇ ಆಗಿದೆ. ಇಲ್ಲಿನ ಹೆಚ್ಚಿನ ಕವಿತೆಗಳು ಅಸ್ಪಶ್ಯತೆ, ಜಾತೀಯತೆಯ ಸುತ್ತ ಸುತ್ತುತ್ತವೆ. ಹಾಗೆಯೇ ಮೇಲುಕೀಳುಗಳ ವಿರುದ್ಧ ಧ್ವನಿಯೆತ್ತಿದ ಬುದ್ಧ, ಅಂಬೇಡ್ಕರ್‌ರ ಸೆರಗು ಹಿಡಿದು ಓಡಾಡುತ್ತವೆ. ಇಲ್ಲಿನ ಕವಿತೆಗಳ ಹಲವು ಸಾಲುಗಳಲ್ಲಿ ಜಾನಪದೀಯ ಲಯಗಳಿದ್ದು ಭಾಷೆಗಳು ಆ ಲಯಕ್ಕೆ ಪೂರಕವಾಗಿವೆ.

About the Author

ಮಂಜು ಕೋಡಿಉಗನೆ

.ಕತೆಗಾರ, ಕವಿ ಮಂಜು ಕೋಡಿಉಗನೆ ಮೂಲತಃ ಚಾಮರಾಜನಗರದವರು. ತಂದೆ ಎಂ. ಚನ್ನಂಜಯ್ಯ, ತಾಯಿ ನಾಗಮ್ಮ. ಕನ್ನಡ ಉಪನ್ಯಾಸಕರಾಗಿ ‘ಸರ್ಕಾರಿ ಪದವಿ ಪೂರ್ವ’ ಕಾಲೇಜುಗಳಲ್ಲಿ ಸೇವೆ. ತಮ್ಮ ನೆಲ ಮೂಲದ ಸಂಸ್ಕೃತಿಯನ್ನು ಚಿತ್ರಿಸುವ ‘ನೆಲದ  ಜೀವ’ ಕತಾ ಸಂಕಲನ 2002ರಲ್ಲಿ ಪ್ರಕಟಣೆ ಕಂಡಿತು. ‘ಮಾರಿಕೋಳ’ ಅವರ ಕವನ ಸಂಕಲನ. ‘ಶೂದ್ರ ಸಂವಾದ’, ‘ನಾನು, ಮಲ್ಲಿಗೆ ಮತ್ತು ದೇವರು’, ‘ಬೆಟ್ಟ ಬೇಗೆ’ ಅವರ ಮತ್ತಿತರ ಕೃತಿಗಳು. ‘ಚಪ್ಪೋಡು’ ಅವರ ಇತ್ತಿಚಿನ ಕೃತಿ. ಅಲ್ಲದೆ ಅನುವಾದದಲ್ಲು ತಮ್ಮ ಚಾಪನ್ನು ಮೂಡಿಸಿರುವ ಮಂಜು ಅವರು ಕಬೀರರ ಪದ್ಯಗಳನ್ನು ‘ಕುರುಡಿಗೆ ಬೆಳಕು ನೆಪವಲ್ಲ’ ಎಂಬ ...

READ MORE

Related Books