ಮಣ್ಣ ಕಂಪಿನ ಹಾಡು

Author : ಹೆಬಸೂರ ರಂಜಾನ್

Pages 140

₹ 150.00




Year of Publication: 2021
Published by: ಉತ್ತರ ಪ್ರಕಾಶನ
Address: ಕೃಷ್ಣಾ ನಗರ, ಎ.ಪಿ.ಎಂ.ಸಿ ಹತ್ತಿರ, ಜಕ್ಕನಕಟ್ಟಿ. ಶಿಗ್ಗಾಂವಿ ತಾಲೂಕು, ಹಾವೇರಿ ಜಿಲ್ಲೆ, 581205,
Phone: 8953981113

Synopsys

ಕವಿ ಹೆಬಸೂರ ರಂಜಾನ್ ಸಂಪಾದಕತ್ವದ ’ ಮಣ್ಣ ಕಂಪಿನ ಹಾಡು’ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಲ್.ಎನ್ ಮುಕುಂದರಾಜ್ ‘ಕನ್ನಡದ ಸಂಸ್ಕೃತಿಯ ಬೆರಗನ್ನು ಸದಾ ಮಣ್ಣಿನ ಘಮಲಾಗಿ ಹೊದ್ದಿರುವ ಧಾರವಾಡ ಜಿಲ್ಲೆ ಕವಿಗಳ ತವರು ಜಿಲ್ಲೆ ಎಂದು ಖ್ಯಾತಿ ಪಡೆದಿದೆ. ಬತ್ತಲಾರದ ಬೆರಗಿನ ಈ ನೆಲದಲ್ಲಿ ಇಂದಿಗೂ ಕಾವ್ಯದ ಹೊಸ ಹೊಸ ನೆಲೆಗಳು ಹುಟ್ಟಿಕೊಳ್ಳುವುದರ ಸಾಕ್ಷಿಯಾಗಿ ಈ ಕವನ ಸಂಕಲನ ಹೊರಬರುತ್ತಿದೆ. ಅಂತರ್ಜಾಲದ ಮೂಲಕ ಪರಿಚಯವಾದ ಹೆಬಸೂರ ರಂಜಾನ್ ಈ ಸಂಕಲನ ಸಂಪಾದಿಸಿರುವುದರ ಮೂಲಕ ಮಣ್ಣ ಕಂಪಿನ ಹಾಡುಗಳನ್ನು ಹಳೆ ಬೇರನ್ನು ಹೊಸ ಚಿಗುರಿನ ಜೊತೆ ಸಮ್ಮೀಳನಗೊಳಿಸಿದ್ದಾರೆ. ಕಣವಿಯವರಿಂದ ಮೊದಲ್ಗೊಂಡು ಹೊಸ ತಲೆಮಾರಿನ ಹತ್ತಾರು ಕವಿಗಳನ್ನು ಬಹಳ ಶ್ರದ್ಧೆಯಿಂದ ಹೆಬಸೂರ ರಂಜಾನ್ ಕಾವ್ಯದರಳಿಕಟ್ಟೆಯಲ್ಲಿ ಒಟ್ಟಿಗೆ ಸೇರಿಸಿದ್ದಾರೆ. ಧಾರವಾಡ ಜಿಲ್ಲೆಯೊಂದರ ಸಾಂಸ್ಕೃತಿಕ ಜೀವಾತ್ಮವನ್ನು, ಸೃಜನಶೀಲ ಚೈತನ್ಯವನ್ನು ಕಾವ್ಯ ಪ್ರೇಮಿಗಳು ಗ್ರಹಿಸಲು ಈ ಸಂಕಲನ ನೆರವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಹೆಬಸೂರ ರಂಜಾನ್
(22 July 1981)

ಕವಿ ಹೆಬಸೂರ ರಂಜಾನ್ ಅವರು (ಜನನ: 1981 ಜುಲೈ 22) ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರಿನವರು. ಹುಟ್ಟೂರಿನಲ್ಲಿ ಪ್ರಾಥಮಿಕ ದಿಂದ ಪ.ಪೂ. ಶಿಕ್ಷಣ ನಂತರ ಹುಬ್ಬಳ್ಳಿಯ  ಶ್ರೀ ಕಾಡಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ, ಕ.ವಿ.ವಿ.ದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಶಿಗ್ಗಾಂವ್ ಪ.ಪೂ.ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ‘ನೆನಪು ತಂತಿ ಮೀಟುತ್ತಿತ್ತು’ ಅವರ ಮೊದಲ (2006) ಕವನ ಸಂಕಲನ. ‘ಅಂತರಂಗದ ಮೃದಂಗ’ ಅವರ ಎರಡನೇ ಕವನ ಸಂಕಲನ. ಹಾವೇರಿ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ‘ಮಂಜಿನೊಳಗಣ ಕೆಂಡ’ ಅವರ ಇತ್ತಿಚಿನ ಕೃತಿ. ...

READ MORE

Related Books