ತೆರಕೊಂಡ ಆಕಾಶ

Author : ಸತ್ಯನಾರಾಯಣರಾವ್ ಅಣತಿ

Pages 100

₹ 60.00




Year of Publication: 2003
Published by: ಋಜುವಾತು ಪ್ರಕಾಶನ
Address: # 498 6ನೇ ಮೈನ್, ಆರ್.ಎಮ್. ವಿ 2ನೇ ಸ್ಟೇಜ್, ಬೆಂಗಳೂರು -560094
Phone: 0803415125

Synopsys

ಲೇಖಕ ಸತ್ಯನಾರಾಯಣರಾವ್ ಅಣತಿ ಅವರ ಕವಿತೆಗಳ ಸಂಕಲನ ‘ತೆರಕೊಂಡ ಆಕಾಶ’. ಕೃತಿಗೆ ಮುನ್ನುಡಿ ಬರೆದ, ಎನ್.ಮನು ಚಕ್ರವರ್ತಿಯವರು, ‘ಅಣತಿಯವರಲ್ಲಿ ನಮ್ಮ ಕಾಲದ ಐತಿಹಾಸಿಕ ಒತ್ತಡಗಳನ್ನು ಪ್ರತಿಬಿಂಬಿಸುವ ಹೊಸ ನುಡಿಗಟ್ಟನ್ನು ಹುಡುಕುವ ಹೋರಾಟವಿದೆ. ವಿಶೇಷವಾಗಿ ಸಾಂಸ್ಕೃತಿಕ ಮತ್ತು ರಾಜಕೀಯ ನೆಲೆಗಳಲ್ಲಿ, ನಮ್ಮ ಕಾಲದ ಬದಲಾದ ಸ್ವರೂಪದ ಸೂಚಕವಾಗಿದೆ. ಅಂದರೆ, ಒಂದು ಕಾವ್ಯ ಸಂಪ್ರದಾಯದ ಒಳಗೆ ಕೆಲಸ ಮಾಡುತ್ತಿರುವ ಒಬ್ಬ ಗಂಭೀರ ಕವಿ, ತನ್ನ ಕಾಳಜಿಗಳನ್ನು ಮತ್ತು ನಮ್ಮ ಕಾಲದ ಅನೇಕ ಬಿಕ್ಕಟ್ಟುಗಳನ್ನು ಬಿಂಬಿಸಬಲ್ಲ ಸಮರ್ಥವಾದ ಒಂದು ನುಡಿಗಟ್ಟನ್ನು ಹುಡುಕುವ ಪ್ರಯತ್ನದಲ್ಲಿರುತ್ತಾನೆ. ಅಣತಿಯವರು, ಸಾಂಪ್ರದಾಯಿಕ ಸಾಂಸ್ಕೃತಿಕ ಗತಕಾಲವನ್ನು ಆಧುನಿಕ ವಿಚಾರವಾದಿ ಧರ್ಮ ನಿರಪೇಕ್ಷ ವರ್ತಮಾನದೊಂದಿಗೆ ಬೆಸೆಯಲು ಕಷ್ಟಪಟ್ಟು ಹೋರಾಡುವ ಕವಿ. ಇದನ್ನೂ ಮೀರುವ ಅವರ ಶ್ಲಾಘನೀಯ ಪ್ರಯತ್ನವೇನೆಂದರೆ, ಮಾರ್ಗ ಪದ್ದತಿಯನ್ನು ಸ್ಥಳೀಯ, ದೇಶಿ ಜೀವನಕ್ರಮಗಳೊಂದಿಗೆ ಬೆಸೆಯುವುದು. ಈ ಅರ್ಥದಲ್ಲಿ ಅಣತಿಯವರು ಮಾರ್ಗದ ಮೂಲಕ ದೇಸಿಗೆ ಚಲಿಸುತ್ತಾರೆ. ಈ ಕಾರಣಕ್ಕಾಗಿಯೆ, ಅವರ ಕಾವ್ಯ ಸಂಸ್ಕೃತಿ ಪ್ರಪಂಚದ ಆಚಿಗಿರುವ ಮೂಲಗಳಿಂದ ಬರುವ ಸೂಚಕಗಳಿಂದ ತುಂಬಿದೆ.’ ಎಂದು ಪ್ರಶಂಸಿದ್ದಾರೆ.

 

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books