ಮೀನು ಕುಡಿದ ಕಡಲು

Author : ಕೀರ್ತಿ ಪಿ. (ಸೂರ್ಯ ಕೀರ್ತಿ)

Pages 82

₹ 100.00
Year of Publication: 2022
Published by: ಅಲ್ಲಮ ಪ್ರಕಾಶನ
Address: ಬೆಂಗಳೂರು- 19.

Synopsys

ಮೀನು ಕುಡಿದ ಕಡಲು ಕವನಸಂಕಲನವನ್ನು ಲೇಖಕ ಸೂರ್ಯಕೀರ್ತಿ ಅವರು ರಚಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಕಾವ್ಯ, ಪುರಾಣಗಳಲ್ಲಿ ಮೈತಳೆದ ಹಲವು ಪ್ರಸಿದ್ಧ ಪಾತ್ರಗಳ ಜೊತೆಗೆ ಕವಿ ಅನುಸಂಧಾನ ನಡೆಸುತ್ತಾರೆ. ಈ ಕವನ ಸಂಕಲನದಲ್ಲಿ ಗೌರಿ ಉತ್ತ ನೆಲ ಪದ್ಯ ಗಮನ ಸೆಳೆಯುತ್ತದೆ. ಗೌರಿ ಅನ್ನುವ ದೇವತೆಯು ನಮ್ಮ ಹಳ್ಳಿಯ ಸಾಮಾನ್ಯ ಹೆಣ್ಣುಮಕ್ಕಳಂತೆ ಗಂಡ ಮಕ್ಕಳೊಂದಿಗೆ ಸಾಂಸಾರಿಕ ಬದುಕಿನಲ್ಲಿ ಏಗುವುದನ್ನು ಚಿತ್ರಿಸಲಾಗಿದೆ. ಭಾರತ ದೇಶದ ಪುರಾಣ ಜಗತ್ತಿನ ತಲ್ಲಣಗಳನ್ನು ಈ ಸಂಕಲನದ ಹಲವಾರು ಕವಿತೆಗಳು ನಮ್ಮೆದುರು ಕಟ್ಟಿಕೊಡುತ್ತವೆ ಎಂದು ಕೃತಿಯ ಕುರಿತಾಗಿ ಹೇಳಲಾಗಿದೆ.

About the Author

ಕೀರ್ತಿ ಪಿ. (ಸೂರ್ಯ ಕೀರ್ತಿ)
(29 January 1994)

ಕೀರ್ತಿ ಪಿ. ಅವರು ಮೂಲತಃ ತುಮಕೂರಿನವರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೆಟ್ಟಹಳ್ಳಿ ಅವರ ಹುಟ್ಟೂರು.  'ಸೂರ್ಯಕೀರ್ತಿ' ಎನ್ನುವ  ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿರುವ ಕೀರ್ತಿ, ಕನ್ನಡದ ಭರವಸೆಯ ಕವಿ. ಗ್ರಾಮೀಣ ಬದುಕಿನ ವಿಸ್ತಾರಗಳನ್ನುಅವರ ಬರಹಗಳಲ್ಲಿ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಪಡೆದಿರುವ ಕೀರ್ತಿ, ಸಾಹಿತ್ಯದ ಆಸಕ್ತಿಯಿಂದ ಈಗ ಕನ್ನಡ ಎಂ.ಎ ಓದುತ್ತಿದ್ದಾರೆ. ಜೊತೆಗೆ ಹಲವು ರಾಷ್ಟ್ರೀಯ ಮತ್ತು ಅಂತರ  ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.  2017 ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ " ಚೈತ್ರಾಕ್ಷಿ" ಎಂಬ ಕವಿತಾ ಸಂಕಲನ ಧನ ...

READ MORE

Related Books