ನವಿಲುಗರಿ

Author : ಕೆ. ಸೀತಾರಾಮ ಭಟ್

Pages 72

₹ 90.00
Year of Publication: 2020
Published by: ಸಿವಗಂಗ ಪ್ರಕಾಶನ
Address: ನಂ. 33/86, ಮಹಾಮನೆ, ವಿಶ್ವೇಶ್ವರಯ್ಯ ಲೇಔಟ್ 1ನೇ ಹಂತ, ಕೆಂಗೇರಿ ಉಪನಗರ, ಬೆಂಗಳೂರು - 560 060
Phone: 9448970731

Synopsys

ಕಾಮನಬಿಲ್ಲಿನ ಬಣ್ಣಗಳನ್ನು ಕಂಡು ತಮ್ಮ ಅನುಭವದ ನೆಲೆಯಲ್ಲಿ ಅದ್ದಿ ‘ನವಿಲುಗರಿಯ’ ಕವಿತೆಗಳನ್ನು ವಿಸ್ತರಿಸಿದ್ದಾರೆ ಕವಿ ‘ಕೆ. ಸೀತಾರಾಮ್ ಭಟ್‌’.

“ಕನ್ನಡ ಸಾಹಿತ್ಯದ ಅಪಾರವಾದ ಸಾಗರದಲ್ಲಿ ನನ್ನ ಕವಿತೆಗಳು ಈಗ ತಾನೆ ಹರಿಯಲು ಬಿಟ್ಟಿರುವ ಸಣ್ಣ ತೊರೆಗಳು" ಎಂದು ಅವರು ಹೇಳಿಕೊಂಡಿದ್ದು ಕವಿ ಆರಂಭದ ಹೆಜ್ಜೆಗಳನ್ನು ಇಡುವಲ್ಲಿ ಕಾಣಿಸಿಕೊಳ್ಳುವ ಅಳುಕು ಮತ್ತು ಇರಬೇಕಾದ ವಿನಯ ಎರಡನ್ನೂ ಒಟ್ಟಿಗೇ ಸೂಚಿಸುತ್ತವೆ.

About the Author

ಕೆ. ಸೀತಾರಾಮ ಭಟ್

ಕೆ. ಸೀತಾರಾಮ ಭಟ್ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕಾಡೂರುನವರು. ಅವರ ಮನೆ ಭಾಷೆ ಮಲೆಯಾಳಂ. ಆದರೂ, ಕನ್ನಡ ಸಾಹಿತ್ಯದಲ್ಲಿ ಒಲವುಳ್ಳವರು. ಮೈಸೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, I.I.T. ಮದ್ರಾಸ್‌ನಿಂದ ಪಿಎಚ್‌.ಡಿ ಪದವಿ ಪಡೆದಿದ್ಧಾರೆ. ಸುಮಾರು 30 ವರುಷಗಳಿಂದ ಕೇಂದ್ರದ ರಕ್ಷಣಾ ಇಲಾಖೆಯ ಡಿ.ಆರ್.ಡಿ.ಒ.ದಲ್ಲಿ ಕೆಲಸ ಮಾಡಿ, 2016ರಲ್ಲಿ ನಿವೃತ್ತರಾದರು. ಅವರ ವೈಜ್ಞಾನಿಕ ಸಾಧನೆಗಳನ್ನು ಗುರುತಿಸಿ ಕೇಂದ್ರ ಸರಕಾರ ಎರಡು ಸಲ ರಾಷ್ಟ್ರ ಮಟ್ಟದ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ‘ನವಿಲುಗರಿ’ ಅವರ ಕವನ ಸಂಕಲನ. ...

READ MORE

Related Books