ಚುಟುಕು ಸೌರಭ

Author : ಎಂ.ಜಿ. ದೇಶಪಾಂಡೆ

Pages 72

₹ 60.00




Year of Publication: 2012
Published by: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು
Address: # 15-03-102, ಲಕ್ಷ್ಮಿನಿಲಯ ರಾಂಪೂರೆ ಕಾಲೊನಿ, ಮನ್ನಳ್ಳಿ ರಸ್ತೆ, ಬೀದರ-585403
Phone: 9741084262

Synopsys

ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರ ಪ್ರಧಾನ ಸಂಪಾದಕತ್ವ ಹಾಗೂ ಚೆನ್ದಪ್ಪ ಸಂಗೋಳಗಿ ಸಹ ಸಂಪಾದಕತ್ವದಲ್ಲಿ ರಾಜ್ಯಮಟ್ಟದಲ್ಲಿ ಹನಿಗವನಗಳನ್ನು ಸಂಗ್ರಹಿಸಿ ಸಂಪಾದಿಸಿದ ಕೃತಿ-ಚುಟುಕು ಸೌರಭ. ಬೀದರ್ ಜಿಲ್ಲೆಯ ರಾಜ್ಯಮಟ್ಟದ ಪ್ರಪ್ರಥಮ ಚುಟುಕು ಸಂಕಲನ ಇದು. ಚಿಕ್ಕದಾಗಿ ,ಸೊಗಸಾಗಿ, ಅರ್ಥಪೂರ್ಣವಾಗಿ ಅನೇಕರ ಚುಟುಕುಗಳನ್ನು ಆಯ್ಕೆಮಾಡಿ ಸ್ಮರಣ ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರಪ್ರಥಮ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಮಾಡುವ ಸಮಯದಲ್ಲಿ ಕೃತಿಯನ್ನು ಸಂಪಾದಿಸಿದ್ದು, ಕೆಲವು ಚುಟುಕಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ. ಇವತ್ತಿನ ಸಂಕೀರ್ಣ ಜಗತ್ತಿನಲ್ಲಿ ಮನುಷ್ಯನಿಗೆ ಸಮಯವಿಲ್ಲದಂತಾಗಿದೆ .ಈ ಮೂಲಕವಾಗಿ ಇವತ್ತು ಚುಟುಕು ಸಾಹಿತ್ಯ ಭರದಿಂದ ಬೆಳೆಯುತ್ತಿರುವುದಕ್ಕೆ ಎರಡು ಮಾತಿಲ್ಲ.

ಕವಿ ಹಾಗೂ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ.ಪಾಟೀಲ್, ಎ.ಜಿ ರತ್ನಕಾಳೇಗೌಡ , ಬಿ.ಆರ್ ಲಕ್ಷ್ಮಣ್ ರಾವ್ , ಅಪ್ಪಾಸಾಬ ಅಲಿಬಾದಿ ,ಡಾ.ಪ್ರದೀಪ್ ಕುಮಾರ್ ಹೆಬ್ರಿ , ಹಂಶಕವಿ, ಚಂಪಾ , ಎಂ .ಜಿ. ದೇಶಪಾಂಡೆ, ಬಸವರಾಜ್ ಬಲ್ಲೂರು, ಡಾ.ಪ್ರೇಮಾ ಸಿರ್ಸೆ , ವಿ .ಎಂ. ಡಾಕುಳಗಿ, ಗೋಪಾಲಕೃಷ್ಣ ವಂಡ್ಸೆ , ಪ್ರೊಫೆಸರ್ ವಸಂತ ಕುಷ್ಟಗಿ , ಸಿ.ಪಿ.ಕೆ , ಡಿವಿ ಬಡಿಗೇರ್ , ಶೋಭಾ ಪ್ರಮೋದ್ ,ಎಚ್ ಡುಂಡಿರಾಜ್ , ಡಾ.ದೊಡ್ಡರಂಗೇಗೌಡ ಬೆಂಗ್ಳೂರ್,ಡಾ, ಪಂಚಾಕ್ಷರಿ ಹಿರೇಮಠ,ಅಮೃತೇಶ್ ತಂಡರ್,ವೈ.ಕೆ ಸಂಧ್ಯಾ ಮೂರ್ತಿ, ಜರಗನಹಳ್ಳಿ ಶಿವಶಂಕರ್ ಮುಂತಾದವರ ಹನಿಗವಿತೆ ಗಳಿವೆ .

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books