ಕವಿಗೆ ಕವಿ ಮಣಿವನ್

Author : ವಿವಿಧ ಲೇಖಕರು

Synopsys

ಲೇಖಕಿಯರಾದ ಎಂ. ಸರಸ್ವತಿ, ಎನ್.‌ ವತ್ಸಲಾ, ಎಂ. ರೇಣುಕಾ ಅವರು ಸಂಪಾದಿಸಿರುವ ಕೃತಿ ʻಕವಿಗೆ ಕವಿ ಮಣಿವನ್‌ʼ. ಪುಸ್ತಕದಲ್ಲಿ ಹೊಸಗನ್ನಡ ಪ್ರಸಿದ್ಧ ಕವಿಗಳು, ತಮ್ಮ ಸಮಖಾಲೀನ ಕನ್ನಡ ಕವಿಗಳನ್ನು ಕುರಿತು ರಚಿಸಿದ ಕವನ ನಮನವನ್ನು ಸಂಕಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ, ಸಾಹಿತಿಗಳಲ್ಲಿ ಕಂಡುಬರುವ ಪರಸ್ಪರ ಪ್ರೀತಿ, ಗೌರವ ಆದರಗಳು ಸಾಹಿತಿಗಳ ಆರೋಗ್ಯಪೂರ್ಣ ಸಂಬಂಧಕ್ಕೆ, ಆ ಮೂಲಕ ಆ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಬಲ್ಲುದು. ಇದು ಸಾಮಾಜಿಕ ಆಯಾಮವಾದರೆ, ವೈಯಕ್ತಿಕವಾಗಿ ಇದು ಕವಿಯ ನಿರಹಂಕಾರ, ವಿನಯ, ವಿಶಾಲ ಮನೋಭಾವದ ಪ್ರತೀಕವಾಗುತ್ತದೆ. ವೃತ್ತಿ ಮಾತ್ಸರ್ಯ ಎಂಬ ಮಾತನ್ನು ಸುಳ್ಳಾಗಿಸಿ, ಉದಾರ ಮನಸ್ಸಿನ, ವಿಶಾಲ ಮನೋಭಾವದ ಪ್ರತೀಕವಾಗಿ ನಿಲ್ಲಬಲ್ಲ ಇಂತಹ ಕವನಗಳು ವ್ಯಕ್ತಿತ್ವದ ಮೌಲ್ಯಗಳಾಗಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಸ್ತುತವಾಗಬಹುದೆಂಬ ಆಶಯದೊಂದಿಗೆ ಇಲ್ಲಿ ಇಂತಹ ಪ್ರಯತ್ನವನ್ನು ಕವಿಯತ್ರಿಯರು ಮಾಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಪಂಜೆ ಮಂಗೇಶರಾಯರು, ಎಂ. ಗೋವಿಂದ ಪೈ, ಬಿ.ಎಂ. ಶ್ರೀಕಂಠಯ್ಯ, ಡಿ.ವಿ. ಗುಂಡಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ವಿ. ಸೀತಾರಾಮಯ್ಯ, ಹಲಸಂಗಿ ಚೆನ್ನಮಲ್ಲಪ್ಪ, ಕೆ.ವಿ. ಪುಟ್ಟಪ್ಪ, ಪುರೋಹಿತ ತಿರುನಾರಾಯಣ ನರಸಿಂಹಾಚಾರ್‌, ಜಿ.ಪಿ. ರಾಜರತ್ನಂ, ವಿನಾಯಕ ಕೃಷ್ಣ ಗೋಕಾಕ್‌, ಬೆಳಗೆರೆ ಜಾನಕಮ್ಮ, ಕೆ.ಎಸ್.‌ ನರಸಿಂಹಸ್ವಾಮಿ, ಎಂ. ಗೋಪಾಲಕೃಷ್ಣ ಅಡಿಗ, ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಬಿ.ಸಿ. ರಾಮಚಂದ್ರ ಶರ್ಮ,ಜಿ.ಎಸ್.‌ ಶಿವರುದ್ರಪ್ಪ, ಚೆನ್ನವೀರ ಕಣವಿ, ಎ.ಕೆ. ರಾಮಾನುಜನ್‌ ಹಾಗೂ ಪಿ. ಲಂಕೇಶ್ ಸೇರಿ 21 ಶೀರ್ಷಿಕೆಗಳ ಕವನಗಳಿವೆ.

About the Author

ವಿವಿಧ ಲೇಖಕರು

. ...

READ MORE

Reviews

ಹೊಸತು-2004- ಅಕ್ಟೋಬರ್‌

ಒಬ್ಬ ಪ್ರತಿಭಾವಂತ ಕವಿಗೆ ಇನ್ನೊಬ್ಬ ಪ್ರತಿಭಾಶಾಲಿ ಕವಿಯಿಂದ ಕಾವ್ಯದ ಮೂಲಕ ನುಡಿ ನಮನ, ವಂದೆ ಪ್ರತಿವಂದನೆ ಗೈದು ಇಲ್ಲಿ ರಾರಾಜಿಸಿದ ಕವಿಗಳೆಲ್ಲ ನವೋದಯ ಕಾಲದ ಹೊಸಗನ್ನಡದ ಸಮಕಾಲೀನ ಕವಿಗಳು. ಇಲ್ಲಿ ವ್ಯಕ್ತಿಗತ ಹೊಗಳಿಕೆಯ ಹೊನ್ನಶೂಲವಿಲ್ಲದೆ ಪ್ರತಿಭೆಯನ್ನು ಮೆಚ್ಚಿ ಒಬ್ಬರ ಕಾವ್ಯರಚನಾ ಸಾಮರ್ಥ್ಯವನ್ನು ಇನ್ನೊಬ್ಬರು ಬೆರಗಿನಿಂದ ನೋಡಿದ್ದಾರೆ. ಕವಿಯ ಕಾವ್ಯವೊಂದಕ್ಕೆ ಕವಿಯೊಬ್ಬ ವಸ್ತುವಾಗಿದ್ದಾನೆ. ಇದರಿಂದ ನಮಗೆ ಕವಿ ವ್ಯಕ್ತಿತ್ವದ ಪರಿಚಯ ಸಿಗುತ್ತದೆ. ಮತ್ತೊಬ್ಬರ ಸಾಧನೆಗಳನ್ನು ಅಸೂಯೆಯಿಲ್ಲದೆ ನೋಡುವ ಸತ್ಸಂಪ್ರದಾಯವು ಇಲ್ಲಿ ಕಲಿಯುವ ಪಾಠವಾಗಿದ್ದು ಎಲ್ಲರಿಗೂ ಅನ್ವಯಿಸಬಹುದಾಗಿದೆ. ಕವಿಗಳೆಲ್ಲ ಪರಸ್ಪರ ಭೇಟಿಯಾದಂತೆ ಕಲ್ಪಿಸುವ ಮುಖಪುಟವೂ ಆಕರ್ಷಕವಾಗಿದೆ.

 

Related Books