ಆ ಹುಡುಗಿ

Author : ಪ್ರಕಾಶ ಕಡಮೆ

Pages 54

₹ 30.00
Year of Publication: 1998
Published by: ರಾಘವೇಂದ್ರ ಪ್ರಕಾಶನ
Address: ಅಂಬಾರಕೊಡ್ಲ, ಅಂಕೋಲಾ, ಉತ್ತರ ಕನ್ನಡ -581314
Phone: 9448145370

Synopsys

ಪ್ರಕಾಶ್ ಕಡಮೆ ಅವರ ಈ ಸಂಕಲನದಲ್ಲಿ 24 ಕವಿತೆಗಳಿದ್ದು, ಈ ಕೃತಿಗೆ 'ಸಂಕ್ರಮಣ ಕಾವ್ಯ ಬಹುಮಾನ' ಸಂದಿದೆ. ಮುನ್ನುಡಿ ಬರೆದಿರುವ ಹಿರಿಯ ಪತ್ರಕರ್ತ ರಮಜಾನ ದರ್ಗಾ “ಪ್ರಕಾಶ ಕಡಮೆ ಅವರ ಕವನಗಳು ಬದುಕಿನ ವಾಸ್ತವಕ್ಕೆ ಹಿಡಿದ ಕನ್ನಡಿಗಳಾಗಿವೆ. ಅವರು ಸಹಜವಾಗಿಯೇ ಅಸಹಾಯಕರ ಪರವಾಗಿ ನಿಲ್ಲುತ್ತಾರೆ. ಬದುಕಿನ ಪರವಾಗಿ ಪಿಸುಗುಟ್ಟುತ್ತಾರೆ. ಕವಿಯಾದವನು ಮಾಡಲೇಬೇಕಾದ ಕರ್ತವ್ಯಗಳನ್ನು ಗಾಢ ಪ್ರೀತಿಯಿಂದ ಮಾಡುತ್ತಾರೆ. 'ಆ ಹುಡುಗಿ' ಕವಿಯ ಮನಸೂರೆಗೊಂಡಿದ್ದಾಳೆ. ಅಂತರಂಗದಲ್ಲಿಯ ಸ್ಪಂದನೆಗಳಿಗೆ ಕಾರಣವಾಗಿದ್ದಾಳೆ. ತೀವ್ರವಾಗಿ ಮನಸ್ಸು ಗಲಿಬಿಲಿಗೊಳ್ಳುವಂತೆ ಮಾಡಿದ್ದಾಳೆ. ಆ ಹುಡುಗಿ ಹೃದಯದಲ್ಲಿ ಮನುಷ್ಯ ಪ್ರೀತಿಯನ್ನು ತುಂಬುತ್ತಲೇ ಇದ್ದಾಳೆ” ಎಂದು ಕವಿಯ ನ್ಯಾಯಪರತೆಯನ್ನು ತೆರೆದಿಟ್ಟಿದ್ದಾರೆ.

About the Author

ಪ್ರಕಾಶ ಕಡಮೆ

ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ...

READ MORE

Related Books