ಕೂಲಿಂಗ್ ಗ್ಲಾಸ್ ಕನಸುಗಳು

Author : ನಿತೀನ್ ನೀಲಕಂಠೆ

Pages 104

₹ 100.00
Year of Publication: 2018
Published by: ಕಾವ್ಯ ಮಿತ್ರ ಪ್ರಕಾಶನ
Address: 31/482 ಸದಾನಂದ ಕಾಲೋನಿ ಬಸವಕಲ್ಯಾಣ, ಬೀದರ್, ಕರ್ನಾಟಕ- 585327
Phone: 9738482040

Synopsys

’ಕೂಲಿಂಗ್ ಗ್ಲಾಸ್ ಕನಸುಗಳು' ಕವನಸಂಕಲನದಲ್ಲಿ ಸುಮಾರು ಎಪ್ಪತ್ತು ಕವಿತೆಗಳು ಅಡಕಗೊಂಡಿವೆ. ಎಲ್ಲ ಚೌಕಟ್ಟು,  ಪದ್ಧತಿಗಳನ್ನು ಮೀರಿ ನಿಲ್ಲುವ ಶಕ್ತಿ ಇಲ್ಲಿನ ಕವಿತೆಗಳಿಗಿದೆ.. 

ಕವಿ ನಿತೀನ್ ತಮ್ಮ ಪ್ರಥಮ ಕವನಸಂಕಲನದಲ್ಲಿಯೇ ಉತ್ತಮ ಕವಿಯಾಗುವ ಭರವಸೆ ಮೂಡಿಸಿದ್ದಾರೆ. ಅವರ “ಬೇಡ ಹುಟ್ಟು ಹಬ್ಬದ ಸಂಭ್ರಮ’ ಎಂಬ ಶೀರ್ಷಿಕೆಯ ಕವಿತೆ ಹೀಗಿದೆ;  ’;ಹುಟ್ಟು ಸಾವಿನ ಮರ್ಮ ನನಗೆ ತಿಳಿದಿಲ್ಲ ಯಾಕೆ ಬೇಕು ನಡುವೆ ಜನ್ಮದಿನದ ಸಂಭ್ರಮ, ಶಾಂತಿ ನಿಷ್ಫಲದ ನನ್ನ ಪಯಣದ ಹಾದಿ ಸುತ್ತ ಎಲ್ಲವೂ ಭ್ರಮೆ, ಜಗವಿದು ಮಾಯೆ ಹುಟ್ಟು ಸಾವಿನ ಮರ್ಮವನ್ನು ತಿಳಿಯದ ಮಾನವ ನಿನಗೇತಕೆ ಜನ್ಮದಿನದ ಸಂಭ್ರಮ?’ ಎಂದು ಕೇಳಿರುವ ಪ್ರಶ್ನೆ ಇಲ್ಲಿ ಓದುಗನನ್ನು ಚಿಂತನೆಯತ್ತ ದೂಡುತ್ತದೆ. 

About the Author

ನಿತೀನ್ ನೀಲಕಂಠೆ

ಸಾರಸ್ವತ ಲೋಕದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಸಮಕಾಲೀನ ಕವಿ ನಿತೀನ್ ನೀಲಕಂಠೆ ,ಮೂಲತಃ ಬೀದರ್ ಜಿಲ್ಲೆಯ ಬಸವ ಕಲ್ಯಾಣದವರು. ತಮ್ಮ ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ  ವ್ಯಾಸಂಗ ಮುಗಿಸಿ, ಸದ್ಯ ಪದವಿ ಪೂರ್ವ ಕಾಲೇಜ್ ನಲ್ಲಿ ಉಪನ್ಯಾಸಕರಾಗಿದ್ದಾರೆ. ಪ್ರಬಂಧ ರಚನೆ ಜೊತೆಗೆ ಹಲವು ವಚನಗಳನ್ನು ಬರೆದಿದ್ದಾರೆ. ’ಕೂಲಿಂಗ್ ಗ್ಲಾಸ್ ಕನಸುಗಳು’ ಮೊದಲ ಕವನ ಸಂಕಲನ 2018ರಲ್ಲಿ ಬಿಡುಗಡೆಗೊಂಡಿತು. ’ದಿಲ್ ಕಾ ದುಕಾನ್’ ಸೇರಿದಂತೆ ಇನ್ನೂ ಮೂರು ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದೆ. ಕಾವ್ಯ ಮಿತ್ರ ಪ್ರಕಾಶನ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಮತ್ತು 13 ಕೃತಿಗಳಿಗೆ ಪ್ರಕಾಶಕರಾಗಿದ್ದಾರೆ. ಪ್ರೇತಾತ್ಮದ ಮನೆಯಲ್ಲಿ ಪುಸ್ತಕಕ್ಕೆ ಉತ್ತಮ ಪ್ರಕಾಶಕನೆಂದು ...

READ MORE

Related Books