ನೀಲಿ ಹೂ

Author : ವಸಂತ ಬನ್ನಾಡಿ

Pages 138

₹ 50.00




Year of Publication: 2003
Published by: ತಿಂಗಳ ಬೆಳಕು ಪ್ರಕಾಶನ
Address: ಕುಂದಾಪುರ (ಜಿಲ್ಲೆ: ಉಡುಪಿ)

Synopsys

`ನೀಲಿ ಹೂ’ ವಸಂತ ಬನ್ನಾಡಿ ಅವರ ಕವನಸಂಕಲನವಾಗಿದೆ. ಪ್ರತಿಯೊಬ್ಬ ಕವಿಗೂ ಆತನ ಕಾಲದ ರಾಜಕೀಯ ಸಾಮಾಜಿಕ ಘಟನೆಗಳು ತನ್ನ ಕಾವ್ಯಕ್ಕೆ ಸ್ಫೂರ್ತಿಯಾಗಿ ಇರುತ್ತವೆ. ಹಾಲಿನ ಹೊಳೆಯೇ ಹರಿಯಲಿ;ರಕ್ತದೋಕುಳಿಯೇ ಇರಲಿ, ಅವನು ಅದಕ್ಕೆ ಸ್ಪಂದಿಸದೆ ಇರಲಾರ ! ಸಮುದಾಯ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿರುವ ಇಂದಿನ ವಿದ್ಯಮಾನಕ್ಕೆ ನೊಂದು ತನ್ನ ಪ್ರತಿಭಟನಾ ಧ್ವನಿಯನ್ನು ಬನ್ನಾಡಿಯವರು ನಮಗಿಲ್ಲಿ ಕೇಳಿಸಿದ್ದಾರೆ.

About the Author

ವಸಂತ ಬನ್ನಾಡಿ
(20 September 1955)

ಸಾಹಿತಿ ವಸಂತ ಬನ್ನಾಡಿ ಅವರು 1955 ಸೆಪ್ಟೆಂಬರ್‌ 20ರಂದು ಉಡುಪಿ ಜಿಲ್ಲೆಯ ಕೋಟದಿಂದ ಮೂರು ಮೀ. ದೂರದ ಬನ್ನಾಡಿಯಲ್ಲಿ ಜನಿಸಿದರು. ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಪಕರಾಗಿ ವೃತ್ತಿ ಆರಂಭಿಸಿದರು. ಬಾಲ್ಯದಿಂದಲೂ ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿನಗಳಲ್ಲೇ ಬರೆದ ಕತೆ, ಕವನಗಳು ಮಾಸಿಕದಲ್ಲಿ ಪ್ರಕಟವಾಗಿವೆ. ಈವರೆಗೂ ಸುಮಾರು 25 ನಾಟಕಗಳನ್ನು ನಿರ್ದೇಶಿಸಿರುವ ಇವರಿಗೆ ನಾಲ್ಕು ಬಾರಿ ರಾಜ್ಯಮಟ್ಟದ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಬಂದಿದೆ.ಇವರ ಕೃತಿಗಳು ಕಡಲಧ್ಯಾನ, ನೀಲಿಹೂ, ನಿಜದ ನೆಲೆ (ಕವನ ಸಂಕಲನಗಳು) ಸಂಸ್ಕೃತಿ ಚಿಂತನೆ, ಲೇಖನಗಳು, ಬೆಂಕಿಯ ನಾನೇ ಆಹುತಿಯೂ ...

READ MORE

Reviews

ಹೊಸತು-2004- ಆಗಸ್ಟ್‌

ಪ್ರತಿಯೊಬ್ಬ ಕವಿಗೂ ಆತನ ಕಾಲದ ರಾಜಕೀಯ ಸಾಮಾಜಿಕ ಘಟನೆಗಳು ತನ್ನ ಕಾವ್ಯಕ್ಕೆ ಸ್ಫೂರ್ತಿಯಾಗಿ ಇರುತ್ತವೆ. ಹಾಲಿನ ಹೊಳೆಯೇ ಹರಿಯಲಿ;ರಕ್ತದೋಕುಳಿಯೇ ಇರಲಿ, ಅವನು ಅದಕ್ಕೆ ಸ್ಪಂದಿಸದೆ ಇರಲಾರ ! ಸಮುದಾಯ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿರುವ ಇಂದಿನ ವಿದ್ಯಮಾನಕ್ಕೆ ನೊಂದು ತನ್ನ ಪ್ರತಿಭಟನಾ ಧ್ವನಿಯನ್ನು ಬನ್ನಾಡಿಯವರು ನಮಗಿಲ್ಲಿ ಕೇಳಿಸಿದ್ದಾರೆ. ರೋಷ- ದ್ವೇಷ-ಕೋಮು ವಿಧ್ವಂಸಕ ಕೃತ್ಯಗಳಿಂದಾಗಿ ಜಗತ್ತೇ ರೋಸಿಹೋದ ಇಂದಿನ ಸನ್ನಿವೇಶದಲ್ಲಿ ಮನುಷ್ಯರ ಮಾತು ನಿಂತುಹೋಗಿ ಬಂದೂಕುಗಳು ಮಾತನಾಡ ತೊಡಗಿದ ಈ ನೆಲದಲ್ಲಿ ಬಿತ್ತಲು ಶಾಂತಿಯ ಬೀಜಗಳಿಗಾಗಿ ತಡಕಾಡಿದ್ದಾರೆ. ಸ್ನೇಹಪರತೆ ಮತ್ತು ಶಾಂತಿ ಸೌಹಾರ್ದದ ಪಾಠದ ಅಗತ್ಯವನ್ನು ಮನಗಾಣಿಸಿದ್ದಾರೆ. ಒಟ್ಟಿನಲ್ಲಿ ಕಲಕಿದ ಕೊಳಕು ಮನಸ್ಸುಗಳ ಬಗ್ಗೆ ಆಕ್ರೋಶ.

Related Books