ಹೆಬ್ಬೆರಳ ಬೆವರು

Author : ನ. ಗುರುಮೂರ್ತಿ ಜಯಮಂಗಲ

Pages 108

₹ 75.00
Year of Publication: 2016
Published by: ರೀತಿಕಾ ಪ್ರಕಾಶನ
Address: ಗ್ರಾಮ: ಜಯಮಂಗಲ, ಲಕ್ಕೂರು ಹೋಬಳಿ, ತಾ: ಮಾಲೂರು, ಜಿ: ಕೋಲಾರ-563160
Phone: 9141122910

Synopsys

ಕವಿ ನ. ಗುರುಮೂರ್ತಿ ಜಯಮಂಗಲ ಅವರು ಬರೆದ ಕವನ ಸಂಕಲನ-ಹೆಬ್ಬೆರಳ ಬೆವರು. 39 ಕವಿತೆಗಳಿವೆ. ಸಾಹಿತಿ ಗಜಲ್ ಕವಿ ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ ಮುನ್ನುಡಿ ಬರೆದು ‘ವ್ಯಕ್ತಿಗತ ಹಾಗೂ ಸಾಮಾಜಿಕ ಒತ್ತಡಗಳನ್ನೇ ಕಾವ್ಯವಾಗಿಸಿದ ಕವಿಯ ಕಲೆಗಾರಿಕೆ ಎದ್ದು ಕಾಣುತ್ತದೆ. ಅತ್ಯುತ್ತಮ ರೂಪಕ-ಪ್ರತಿಮೆಗಳಿರುವ ಭಾವಗೀತೆಗಳೂ ಇವೆ. ಮಾನವೀಯ ನೆಲೆಗಳನ್ನು ಬೇರಾಗಿಸಿಕೊಂಡು, ವೈಚಾರಿಕತೆಯ ವಂಕಿಧರಿಸಿ, ಸಾಮಾಜಿಕ ಮೌಢ್ಯಗಳನ್ನು ಕೊನೆಗಾಣಿಸುವ ಆಕ್ರೋಶ ಇಲ್ಲಿಯ ಕವಿತೆಗಳಲ್ಲಿದೆ. ಜನರಲ್ಲಿಯ ಮೃಗತ್ವವನ್ನು ಹೋಗಲಾಡಿಸದ ಶಿಕ್ಷಣದ ಬಗ್ಗೆ ಕೋಪವಿದೆ. ಕವಿತೆಗೆ ಮಾನವೀಯತೆಯೇ ಬೇರಾಗಬೇಕು ಎಂಬ ಬಲವಾದ ಆಶಯವಿದೆ. ಸ್ವಾತಂತ್ಯ್ರ ಬಂದರೂ, ವ್ಯವಸ್ಥೆ ಬದಲಾದರೂ ದಲಿತರ ಗೋಳು ತಪ್ಪಲಿಲ್ಲ ಎಂಬ ಅಸಮಾಧಾನವಿದೆ. ಈ ಜನಾರಣ್ಯದಲ್ಲಿ ರಾಮ, ಕೃಷ್ಣ, ಅಲ್ಲಾ, ಕ್ರಿಸ್ತ ದಾರಿಗೊಬ್ಬರು, ಹೆಜ್ಜೆಗೊಬ್ಬರು ಸಿಗುತ್ತಾರೆ ಆದರೆ, ಸಿಗುತ್ತಿಲ್ಲ ನಿಜ ಮಾನವರು ಎಂಬ ವ್ಯವಸ್ಥೆಯೆಡೆಗೆ ಮಾಡಿದ ವ್ಯಂಗ್ಯವಿದೆ. ರಾಜಕೀಯವಾಗಿ ವಿಡಂಬಿಸುವ ಕವಿತೆಗಳು ಇವೆ’ ಎಂದು ಪ್ರಶಂಸಿಸಿದ್ದಾರೆ. 

ಸಾಹಿತಿ ಡಾ. ಜಯಮಂಗಲ ಚಂದ್ರಶೇಖರ  ಅವರು ಬರೆದ ಬೆನ್ನುಡಿಯಲ್ಲಿ ‘ಬೆವರು ಅಥವಾ ಶ್ರಮ ಸಂಸ್ಕೃತಿಗೆ ಬೆಲೆ ಸಿಗಬೇಕು ಎಂಬುದು ಕವಿಯ ಆಶಯ. ಆದರೆ, ಹೆಬ್ಬೆರಳ ಬೆವರಿಗೆ ಬೆಲೆ ಸಿಗಲಿಲ್ಲ ಎಂದು ನಮ್ಮ ಪರಂಪರೆ ಸಾಗಿದ ಹಾದಿಯ ಬಗ್ಗೆ ಕವಿಗೆ ತೀವ್ರ ವಿಷಾದವಿದೆ. ಕವಿಯು ತನ್ನ ಮನೋಜಗತ್ತಿನ ಎಲ್ಲ ನೋವುಗಳನ್ನು ಸಮರ್ಥವಾಗಿ ಕವನಗಳ ಮೂಲಕ ಕಟ್ಟಿಕೊಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಹೆಬ್ಬೆರಳ ಬೆವರು' ಕವನ ಸಂಕಲನ ಈ ಕವಿಯ ಮೊದಲ (2016) ಸಂಕಲನ - ಇದೇ ಸಾಲಿನ ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಲಭಿಸಿದೆ.

About the Author

ನ. ಗುರುಮೂರ್ತಿ ಜಯಮಂಗಲ
(01 July 1969)

ನಗು ಜಯಮಂಗಲ- ಕಾವ್ಯನಾಮದಿಂದ ನ.ಗುರುಮೂರ್ತಿ ಜಯಮಂಗಲ ಅವರು ಪರಿಚಿತರು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಜಯಮಂಗಲ ಗಡಿ (ಜನನ: 01-07-1969) ಗ್ರಾಮದವರು.ತಂದೆ ದಿ.ನಲ್ಲಪ್ಪ ತಾಯಿ ಮುನಿಯಮ್ಮ. ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಸಂಕೀರ್ಣದ ಸಿದ್ದನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಕೋಲಾರ ಜಿಲ್ಲೆಯ ದಲಿತ ಚಳವಳಿಗಳಲ್ಲಿ ಭಾಗವಹಿಸಿದ ಅನುಭವಗಳೊಂದಿಗೆ ಸಾಹಿತ್ಕಾಸಕ್ತಿ ಬೆಳೆಸಿಕೊಂಡಿದ್ದರ ಫಲವಾಗಿ  'ಹೆಬ್ಬೆರಳ ಬೆವರು' ಕವನ ಸಂಕಲನ (2016) ಪ್ರಕಟಿಸಿದ್ದು,  ಈ ಕೃತಿಯು ರಾಜ್ಯಮಟ್ಟದ ಕ.ಸಾ.ಪ ಪ್ರೊ.ಡಿ.ಸಿ. ಅನಂತಸ್ವಾಮಿ ಸಂಸ್ಮರಣೆ ದತ್ತಿ ಪ್ರಶಸ್ತಿ ಪಡೆದಿದೆ. 2018 ರಲ್ಲಿ ಪ್ರಕಟಿತ ಮತ್ತೊಂದು ಕವನ ಸಂಕಲನ-'ಅರ್ಜಿ ಹಾಕಿ ಹುಟ್ಟಿದವರ ನಡುವೆ' . ಅದಕ್ಕೂ ಅದೇ ಸಾಲಿನ ...

READ MORE

Related Books