ಅಮೃತ ಬಿಂದು

Author : ಎಂ. ಜಿ. ಹೆಗಡೆ

₹ 40.00
Year of Publication: 2007
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಲೇಖಕ ಡಾ. ಎಂ. ಜಿ. ಹೆಗಡೆ ಅವರು ಸಂಪಾದಿಸಿದ ಲೇಖಕ ಶ್ರೀಧರ್‌ ಅವರ ಕಾವ್ಯವಾಚಿಕೆ ಕೃತಿ ʼಅಮೃತ ಬಿಂದುʼ. ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಪ್ರಕಟವಾದ ಪುಸ್ತಕವಾಗಿದೆ ಇದು. ಎಂ. ಜಿ. ಹೆಗಡೆ ಅವರು ಪುಸ್ತಕದ ಸಂಪಾದಕರ ನುಡಿಯಲ್ಲಿ, “ಶ್ರೀಧರರ ಕಾವ್ಯದಲ್ಲಿ ನಾವು ಉದ್ದಕ್ಕೂ ಕಾಣುವುದು ಅವರ ಆರ್ಷಪ್ರಜ್ಞೆ. ಶ್ರೀಧರರ ಪ್ರಕಾರ ಸಾಹಿತ್ಯದ ಮೌಲ್ಯ ಇರುವುದು ರಸಾನುಭವದಲ್ಲಿ. ರಸಾನುಭವ ಜನತೆಯ ಮನಸ್ಸನ್ನು ಪಕ್ವಗೊಳಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಆದ್ದರಿಂದ ಸಾಹಿತ್ಯ ಹಾಗೂ ವಿಮರ್ಶೆ ಸಂಸ್ಕೃತಿಯ ಪ್ರಮುಖ ಅಂಗಗಳು. ಇಲ್ಲಿ ಸಚಾರಿತ್ರ್ಯ, ಶುಚಿ- ರುಚಿ ಕಾಯ್ದುಕೊಳ್ಳುವುದು ಅಗತ್ಯ. ಶುಚಿ- ರುಚಿ- ಔಚಿತ್ಯ ಶ್ರೀಧರರಿಗೆ ಸಾಪೇಕ್ಷ ನ ಅಲ್ಲ. ಬದಲಾಗಿ ವೈದಿಕ ಪರಂಪರೆಯ ಉನ್ನತ ಮೌಲ್ಯಗಳನ್ನು ಒಪ್ಪಿಕೊಂಡ ಶಿಷ್ಟ ಮನಸ್ಸಿನ ಸ್ವತಃ ಸಿದ್ದ ಮೌಲ್ಯಗಳಿವು. ಹೀಗಾಗಿಯೇ ಅವರು ಸಂಸ್ಕೃತಿಯ ಬಹುಮುಖೀ ನೆಲೆಗಳಿಂದ ಸಾರ್ವತ್ರಿಕಾಂಶಗಳನ್ನು ಗುರುತಿಸುವುದರಲ್ಲೇ ಹೆಚ್ಚು ಉತ್ಸುಕರು. ಅವರು ಬರೆದ ಮೊದಲ ಕವಿತೆಯೇ ಕರ್ನಾಟಕದ ಗತ ವೈಭವವನ್ನು ಕುರಿತಾಗಿತ್ತು. ಕದಂಬ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸಾಕ್ಷಾತ್ಕರಿಸಿಕೊಂಡ ಶ್ರೀಧರರು ಅಂದಿನ ತುಂಬು ಜೀವನದ ರಸ- ರುಚಿ ಪುನರುದಯವಾಗಲೆಂದು ಉತ್ಕಟೇಚ್ಚೆಯ ಒತ್ತಡದಲ್ಲೇ ಉದ್ದಕ್ಕೂ ಕಾವ್ಯ ರಚಿಸಿದರು. ಶ್ರೀಧರರ ಕಾವ್ಯದ ಮುಖ್ಯ ಆಶಯಗಳು ಹಾಗೂ ಅದರ ಅವಸ್ಥಾಂತರಗಳನ್ನೆಲ್ಲ ಈ ಸಂಕಲನ ಪ್ರತಿನಿಧಿಸುತ್ತಿದೆ ಎಂದು ಕೊಂಡಿದ್ದೇನೆ. ಕದಂಬ ಕಾಲದ ತಿಮೋಜನೆಂಬ ನಾವಿಕನ ಆತ್ಮಕಥೆಯನ್ನು ನಿರೂಪಿಸುವ 'ನೌಕಾಗೀತ' ವೆಂಬ ಕಥನ ಕವನಕ್ಕೆ ಕೇಂದ್ರ ಸರ್ಕಾರದ ಸಂರಕ್ಷಣಾ ಇಲಾಖೆಯ ಬಹುಮಾನ ಬಂದಿತ್ತು. ಆದರೆ ಅದೇಕೋ ಎಲ್ಲೂ ಅಚ್ಚಾಗದೇ ಉಳಿದಿದ್ದು, ಪೂರ್ವ ಪಶ್ಚಿಮಗಳ ಸಾಂಸ್ಕೃತಿಕ ಮುಖಾಮುಖಿಯ ಸೂಕ್ಷ್ಮ ಚಿತ್ರಣ ನೀಡುವ ಈ ಕವನ ಮೊಟ್ಟ ಮೊದಲ ಬಾರಿಗೆ ಅಚ್ಚಾಗುತ್ತಿದೆ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಮೇಘನಾದ, ಕಿನ್ನರ ಗೀತ, ಅಮೃತ ಬಿಂದು, ಮುತ್ತು ರತ್ನ, ಮಂಜುಗೀತ/ ಜಾತವೇದ, ರಸಯಜ್ಞ, ಕದಂಬ ವೈಭವ, ಅಮೃತ ಬಿಂದು, ಹಾಗೂ ಕಂಟಕಾರಿ ಮಹಾಕಾವ್ಯ ಸೇರಿ 9 ಶೀರ್ಷಿಕೆಗಳ ಕಾವ್ಯಗಳಿವೆ.

About the Author

ಎಂ. ಜಿ. ಹೆಗಡೆ

ಡಾ. ಎಂ.ಜಿ ಹೆಗಡೆ ಕುಮಟಾದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಬರಹಗಳು ಇವರ ಆಸಕ್ತಿ ಕ್ಷೇತ್ರವಾಗಿದೆ.  ಅಧ್ಯಾಪನ, ಅಧ್ಯಯನ ಜೊತೆಗೆ ಸಂಶೋಧನೆ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಡಾ.ಎಂ.ಜಿ.ಹೆಗಡೆಯವರು ಜಿ.ಎಸ್‌. ಆಮೂರ ಅವರ ಅಭಿನಂದನ ಗ್ರಂಥ ’ವಿಮರ್ಶಾ ವಿವೇಕ’ದ ಸಂಪಾದಕರು. ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ಸಾಲು ದೀಪಗಳು, ತಲಸ್ಪರ್ಶಿ, ಎಂ. ಹಿರಿಯಣ್ಣ, ಅಂತ್ಯವಿಲ್ಲದ ಹಾದಿ, ಡಿ.ಡಿ ಕೊಸಾಂಬಿ ಅವರ ಆಯ್ದ ಬರಹಗಳು, ಮಹಾಭಾರತ, ಅಮೃತ ಬಿಂದು, ಸಹಯಾನ, ಬೆಳಕಿನ ...

READ MORE

Related Books