ಗಾಣದೆತ್ತು ಮತ್ತು ತೆಂಗಿನಮರ

Author : ಪ್ರಕಾಶ ಕಡಮೆ

Pages 50

₹ 5.00
Year of Publication: 1987
Published by: ರಾಘವೇಂದ್ರ ಪ್ರಕಾಶನ
Address: ಅಂಬಾರಕೊಡ್ಲ, ಅಂಕೋಲಾ , ಉತ್ತರಕನ್ನಡ - 581314
Phone: 9448145370

Synopsys

ಕವಿ ಪ್ರಕಾಶ ಕಡಮೆ ಅವರ ಕವಿತೆಗಳ ಸಂಕಲನ-ಗಾಣದೆತ್ತು ಮತ್ತು ತೆಂಗಿನಮರ. ಅವರ ಕವಿತೆಗಳಲ್ಲಿ ಬಂಡಾಯದ ಶಿಲಾರಸ ಆವರಿಸಿದೆ. ಕೃತಿಯಲ್ಲಿ ಒಟ್ಟು 15 ಕವಿತೆಗಳಿದ್ದು ಹಿರಿಯ ಕವಿ ಸು.ರಂ ಎಕ್ಕುಂಡಿ ಮುನ್ನುಡಿ ಬರೆದಿದ್ದಾರೆ. ಇಲ್ಲಿಯ 'ಬಿ.ಎ ಬೇಕ್ರೀ ಬಿ.ಎ' ಕವಿತೆಗೆ ಶ್ರೀ ರಾಘವೇಂದ್ರ ಪ್ರಕಾಶನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ, ಉತ್ತರಕನ್ನಡ ಜಿಲ್ಲಾ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಸಂದಿದೆ.

About the Author

ಪ್ರಕಾಶ ಕಡಮೆ

ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ...

READ MORE

Related Books