ಕೊಲ್ಲುವವನೇ ದೇವರಾದನಲ್ಲ

Author : ಶಿಲ್ಪ ಬೆಣ್ಣೆಗೆರೆ (ಶಿಲ್ಪ ಬಿ.ಎಂ)

Pages 72

₹ 80.00
Year of Publication: 2020
Published by: ಎನ್.ಕೆ. ಪ್ರಕಾಶನ
Address: 63, ಕಾಳೇಗೌಡ ಬಡಾವಣೆ, ರಾಜರಾಜೇಶ್ವರಿನಗರ, ಬೆಂಗಳೂರು- 98

Synopsys

‘ಕೊಲ್ಲುವವನೇ ದೇವರಾದನಲ್ಲ’ ಕವಿ ಶಿಲ್ಪ ಬೆಣ್ಣೆಗೆರೆ ಅವರ ಚೊಚ್ಚಲ ಕವನ ಸಂಕಲನ. ಈ ಕೃತಿಗೆ ಹಿರಿಯ ಲೇಖಕಿ ಡಾ.ಕೆ. ಷರೀಫಾ ಬೆನ್ನುಡಿ ಬರೆದು ‘ಶಿಲ್ಪ ತಮ್ಮ ಮೊದಲ ಕವನ ಸಂಕಲನದಲ್ಲಯೇ ಭರವಸೆಯ ಕವಯತ್ರಿಯಾಗಿ ತಮ್ಮ ಕವನಗಳಲ್ಲಿ ಹಲವಾರು ಬಾರಿ ಕಡಲ ಧ್ಯಾನ ಮಾಡುತ್ತಾರೆ. ಜೀವಪರ ಆರ್ದ್ರತೆಯ ಜೊತೆಗೆ ವೈಜ್ಞಾನಿಕವಾಗಿ ಚಿಂತಿಸುವ ಹಾದಿ ಹುಡುಕುತ್ತಾರೆ. ಭಾವತೀವ್ರತೆಯು ವೈಯಕ್ತಿಕ ಬಿಕ್ಕಳಿಕೆಯಾಗದೇ ಇವರ ಕಾವ್ಯದಲ್ಲಿ ವೈಜ್ಞಾನಿಕ ಚಿಂತನೆಯಾಗಿ ಮೂಡಿಬಂದಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

ನಿಲುಗಂಬ, ನೆನಪು, ಮೌನ ಕರೆಯುತಿದೆ, ಕೊಲ್ಲುವವನೇ ದೇವರಾದನಲ್ಲಾ!, ಪ್ರಶ್ನೆ, ನಾಡನವಿಲು, ತೇರಿನ ಕನಸು, ಭೂತಕುಣಿತ, ಹುಡುಕಾಟ, ಸಮಪಾಲು ಸಮಬಾಳು, ಆಗ್ರಹ, ಲೋಕಭೋಗವ ಸೂರೆಗೊಳ್ಳಲು, ಅಜ್ಜ, ಯಯಾತಿಯ ಮಕ್ಕಳು, ಪ್ರೇಮಪಲ್ಲವ, ದೇವಿ ಮಹಿಮೆ, ಮಹಿಳೆ ಉಮೇದು, ಮಹಾತ್ಮ ಬುದ್ಧ, ಮಲ್ಲಿಗೆಯ ಕೊಳ್ಳಿ, ಎದೆಯ ವೀಣೆ ಮಿಡಿಯದೇಕೆ, ರಕ್ಕಸ ಸುಂದರಿ, ಸಾಗರದ ದಡುವು ನಾ, ಒಂದು ಸೂರಿಗಾಗಿ, ಕಪ್ಪು ಕೋಟಿನವನು, ಏಕೆ ತೊರೆದ ಮಾಧವ, ಗುಬ್ಬಿ ಹಾರಿವೆ, ಶಿವನ ತೇರು, ಬದುಕಿನ ಹದನ, ವನದಮ್ಮನ ಮಕ್ಕಳು, ಸೋಲಬಾರದೆ ಕಾಲ, ಹಸಿರಾದಳು ಧಾರಿಣಿ, ಸರಿದಾಡುತ್ತಿವೆ ಮಾನವ ಯಂತ್ರಗಳು, ಗಡಿಗಳಾಚೆ ಏನಿಹುದು, ಕವನದ ಸವಾರಿ, ಲೆಕ್ಕ ಮರೆಯುವ ಬಾರಾ, ಮನ ಮಂಥರೆ, ಅವ್ವ, ರಾಜಸಂಕಥನ, ಮರಳಿ ಬಾ ಮಮತೆಯ ಮಡಿಲೆ, ಬಿನ್ನಹ, ಆಸೆ, ಮುಗಿಯಿತಂತೆ ಆಯುಷ್ಯ, ಸಾವಿನ ಬೆರಳು, ಸ್ಥಳಾಂತರ ಎಂಬ 44 ಕವನಗಳು ಸಂಕಲನಗೊಂಡಿವೆ. ಕಾವ್ಯ ವಸ್ತು, ಶೈಲಿಯಿಂದ ಓದುಗರ ಗಮನ ಸೆಳೆಯುತ್ತವೆ. 

About the Author

ಶಿಲ್ಪ ಬೆಣ್ಣೆಗೆರೆ (ಶಿಲ್ಪ ಬಿ.ಎಂ)

ಕವಿ ಶಿಲ್ಪ ಬೆಣ್ಣೆಗೆರೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೆಣ್ಣಿಗೆರೆಯವರು. ಸುಮಾರು ಹತ್ತು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ.  ‘ಕೊಲ್ಲುವವನೇ ದೇವರಾದನಲ್ಲ’ ಕವನ ಸಂಕಲನ ಪ್ರಕಟವಾಗಿದೆ.  ...

READ MORE

Related Books