ಕವಿತೆ-1992

Author : ಎಚ್.ಎಲ್. ಪುಷ್ಪ

Pages 180

₹ 18.00




Year of Publication: 1993
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು- 560002

Synopsys

‘ಕವಿತೆ 1992’ ಕವಿ ಎಚ್.ಎಲ್. ಪುಷ್ಪ ಅವರು ಸಂಪಾದಿಸಿರುವ ಕವನ ಸಂಕಲನ. ಕನ್ನಡ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರತಿ ವರ್ಷ ಪ್ರಕಟವಾಗುವ ವಿವಿಧ ಸಾಹಿತ್ಯ ಪ್ರಕಾರಗಳ ರಚನೆಗಳಲ್ಲಿ ಉತ್ತಮವಾದವುಗಳನ್ನು ಆಯ್ದು, ಸಂಕಲನ ರೂಪದಲ್ಲಿ ಪ್ರಕಟಿಸುವ ಪರಂಪರೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಈ ಹಿಂದೆ ಪಾಲಿಸಿಕೊಂಡು ಬಂದಿತ್ತು. ಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಬಂದ ರಚನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮದ ಹಿಂದೆ ಪುಸ್ತಕಗಳನ್ನು ಪ್ರಕಟಿಸದೆ ಇರುವ ಪ್ರತಿಭೆಗಳಿಗೆ ಪ್ರೋತ್ಸಾಹಕ ನೆಲೆ ನಿರ್ಮಿಸುವ ಸದಾಶಯವೂ ಇತ್ತು. ಆಯ್ಕೆಯ ನಿಯಮವನ್ನು ರೂಪಿಸಿದವರ ಮನಸ್ಸಿನಲ್ಲಿ ಸಾಧ್ಯವಾದಷ್ಟೂ ಹೊಸ ಪ್ರತಿಭೆಗಳಿಗೆ ಹಾಗೂ ಪುಸ್ತಕರೂಪಕ್ಕೆ ಹೊರತಾಗಿರುವ ಪ್ರಕಟಿತ ರಚನೆಗಳಿಗೆ ಉತ್ತೇಜನ ನೀಡಬೇಕೆಂಬ ಒತ್ತಾಸೆಯಿಂದಲೂ ಈ ಕೃತಿ ರಚಿತವಾಗಿದೆ. ಲೇಖಕಿ, ಕವಿ ಎಚ್. ಎಲ್. ಪುಷ್ಪ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. 

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books