ಕೊರೊನಾ ಕಾಲ

Author : ಶರಣಪ್ಪ ಕೂಡ್ಲಪ್ಪ ಹೂಲಗೇರಿ

Pages 96

₹ 100.00




Year of Publication: 2021
Published by: ಕಸ್ತೂರಿ ಪ್ರಕಾಶನ
Address: ಐಬಿ ಹಿಂದುಗಡೆ, ಮಕ್ಕಣ್ಣವಾರ್ ಪ್ಲಾಟ್, ಹುನಗುಂದ, 587 118 ಬಾಗಲಕೋಟೆ ಜಿಲ್ಲೆ

Synopsys

ಕವಿ, ಲೇಖಕ ಶರಣಪ್ಪ ಕೆ ಹುಲಗೇರಿ ಅವರ ಕವನ ಸಂಕಲನ ಕೊರೋನಾ ಕಾಲ. ಲೇಖಕ ವಿ.ಕೆ.ಶಶಿಮಠ ಅವರು ಈ ಸಂಕಲನಕ್ಕೆ ಬೆನ್ನುಡಿಯ ಮಾತುಗಳನ್ನು ಬರದಿದ್ದಾರೆ. 2020ರಲ್ಲಿ ವಿಶ್ವದಾದ್ಯಂತ ಆರೋಗ್ಯದ ಬಿಕ್ಕಟ್ಟು ಎದುರಾದ ವರ್ಷ, ಕೊರೊನಾದಿಂದಾಗಿ ಮನುಷ್ಯನ ಮೂಲ ನಡವಳಿಕೆಗಳಾದ ಸಹಭೋಜನ, ಹಸ್ತಲಾಘವ ಸೇರಿದಂತೆ ವಿವಿಧ ವಿಚಾರಗಳಲ್ಲಿ ದೊಡ್ಡ ಬದಲಾವಣೆಯಾಯಿತು, ಹತ್ತಿರದವರಿಂದಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು. ಮಹಾಮಾರಿ ಕೊರೊನಾ ತನ್ನ ಕಬಂಧಬಾಹವನ್ನು ಎಲ್ಲೆಡೆ ಚಾಚಿ ಮಾನವನ ಅಸ್ತಿತ್ವವನ್ನೇ ಬುಡಮೇಲು ಮಾಡಿತು. ಸಮಾಜದಲ್ಲಿ ಮಾನವೀಯ ಸಂಬಂಧಗಳು ಕುಸಿದವು. ಕೆಲವು ವರ್ಷ ಸುಧಾರಿಸದ ಆರ್ಥಿಕ ಹಿನ್ನಡೆ ಆಗಿ ಜನರ ಬದುಕು ಬಯಲಿಗೆ ಬಂದಿತು.ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಗೆಳೆಯ ಶರಣಪ್ಪ ಹೂಲಗೇರಿ ಅವರ 'ಕೊರೊನಾ ಕಾಲ' ಎಂಬ ಕವನ ಸಂಕಲನ ಬಂದಿದೆ. ಇದು ಅವರ ಮೂರನೆಯ ಕೃತಿ ಪ್ರಚಲಿತ ಸಮಸ್ಯೆ, ಆದರ ನಿಯಂತ್ರಣದ ಬಗ್ಗೆ ಕಾಳಜಿ ಎದ್ದುಕಾಣುವ ಆಶಯ ಕವಿತೆಗಳಲ್ಲಿದೆ. ಸರ್ಕಾರಗಳು ಮತ್ತು ಅವುಗಳ ಮುಖ್ಯಸ್ಥರ ಕಾರ್ಯಗಳ ಚಿತ್ರಗಳೂ ಇಲ್ಲಿ ಮೂಡಿವೆ.ಇಂದು ಅನೇಕರು ಬರೆಯುತ್ತಿದ್ದಾರೆ. ಓದುಗರೂ ಅವರೇ ಆಗಿದ್ದಾರೆ. ಇದರ ಸನ್ನಿವೇಶದಲ್ಲಿ ಕವಿತೆ ದಾಟಬೇಕಾದ 'ಅಗ್ನಿಕುಂಡ' ನಮ್ಮೆದುರೇ ಇದೆ, ಒಂದಿಷ್ಟು ಸಂಯಮದ ಓದು ಬೇಕಿದೆ. ಅಂತಹ ಓದನ್ನು ಕಾವ್ಯಪ್ರಿಯರ ಎದೆಗೆ ನಾಟಿಸುವ ಕೆಲಸವೂ ಆಗಬೇಕಾಗಿದೆ. “ಕೊರೊನಾ ಕಾಲ' ಸಂಕಲನ ಸದ್ಯ ಈ ಅರ್ಹತೆಗೆ ಪಾತ್ರವಾಗಿದೆ.ಸಮಕಾಲೀನತೆಯ `ಪದಧ್ವನಿಗಳ ನಡುವೆ ಕಳೆದುಹೋಗದ ಪರಂಪರೆಯೊಂದಿಗೆ ಸಂತರನ್ನು ಉಳಿಸಿಕೊಳ್ಳಬೇಕೆಂಬ ತೀವ್ರ ಮಿಡಿತ ಈ ಕವಿತೆಗಳ ಹಿಂದೆ ಕ್ರಿಯಾಶೀಲವಾಗಿದೆ. ಯಾವುದೇ ಬಗೆಯ ಸೀಮಿತಗಳಿಗೆ ಕವಿ ಒಳಗಾಗದೆ ಒಟ್ಟು ಬದುಕಿಗೆ ಮುಖಾಮುಖಿಯಾಗುತ್ತ ತನ್ನವೇ ಅನುಭವಗಳನ್ನು ಇಲ್ಲಿನ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ. ಸಂಕಲನದುದ್ದಕ್ಕೂ ಕವಿತೆ ಅರ್ಥದ ಜಾಡು ಹಿಡಿದಿದೆ. ಸರಳ ಅಭಿವ್ಯಕ್ತಿ ಪಡೆದು ಕೃತಕತೆಯಿಂದ ದೂರ ಸರಿದು ಬದುಕಿನ ವಾಸ್ತವತೆಯನ್ನು ಇದಂತ ತೋರ್ಪಡಿಸಿರುವುದನ್ನು ಇಲ್ಲಿ ಕಾಣಬಹುದು. ಸಾಮಾಜಿಕ ಕಾಳಜಿಯ ನೆಲೆಯಲ್ಲಿ ಬಂದು ಇಲ್ಲಿನ ಕತೆಗಳು ಒದಗ ಮನಮುಟ್ಟಲಿ ಎಂಬುದಾಗಿ ಹೇಳಿದ್ದಾರೆ.

About the Author

ಶರಣಪ್ಪ ಕೂಡ್ಲಪ್ಪ ಹೂಲಗೇರಿ
(01 September 1967)

ಶರಣಪ್ಪ ಕೂಡ್ಲಪ್ಪ ಹೂಲಗೇರಿ ಅವರು 01-09-1967ರಂದು ಜನಿಸಿದರು. ಎಂ.ಎ.ಎಂ.ಇಡಿ ವಿದ್ಯಾರ್ಹತೆಯನ್ನು ಹೊಂದಿದ ಇವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದರು. ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕನಾಗಿ ಬಡ್ತಿ ಹೊಂದಿದರು. ಸದ್ಯ ಹುನಗುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಮಾಡರ್ನ್ ಮಾನವರು (2016), ಹೊರೂನಾ ಕಾಲ (2021), ನೆನಪಂಬ ಹಾಯಿದೋಣಿ (2022) ಕವನ ಸಂಕಲನಗಳು, ಧ್ರುವತಾರೆ (2017) ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಸಂಪಾದಿತ ಏಳು ನಾಟಕಗಳು ಸಂಕಲನದಲ್ಲಿ ಪ್ರಕಟವಾಗಿದೆ. ...

READ MORE

Related Books