ಅಂದಗಾತಿ

Author : ವಿದ್ಯಾ ರೆಡ್ಡಿ

Pages 84

₹ 70.00
Year of Publication: 2020
Published by: ಸೃಷ್ಟಿ ಪಬ್ಲಿಷರ್ಸ್
Address: #19, ಮೊದಲನೇ ಮಹಡಿ, ಹದಡಿ ಮುಖ್ಯ ರಸ್ತೆ, ವಿದ್ಯಾರ್ಥಿ ಭವನ, ದಾವಣಗೆರೆ, 577002
Phone: 9242252521

Synopsys

ಲೇಖಕಿ ವಿದ್ಯಾ ರೆಡ್ಡಿ ಅವರ ’ಅಂದಗಾತಿ’ ಕವನ ಸಂಕಲನ. ಕೃತಿಗೆ ಮುನ್ನುಡಿ ಬರೆದ ಲೇಖಕ ಜಯಾನಂದ ಮಾದರ ಅವರು, ‘ಕಾವ್ಯಕನ್ನಿಕೆ, ಇವಳನ್ನು ಮೆಚ್ಚದವರಾರಿದ್ದಾರೆ? ಸಹೋದರಿ ವಿದ್ಯಾ ಅವರು, ಸಾಮಾಜಿಕ , ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಕಾರ್ಯ ಭರಾಟೆಯಲ್ಲಿದ್ದಾರೆ. ತುಸು ಅವಸರವಾದರೂ ಉನ್ನತವಾಗಿರುವ ಕಾವ್ಯ ಸಂಕಲನ ನೀಡುವಲ್ಲಿ ಗೆದಿದ್ದಾರೆ. ಸದಾ ನಗುವಿನ ಮಂದಹಾಸದಲ್ಲಿ ಎಲ್ಲರೊಳಗೂ ಒಂದುಗೂಡುವ ಜೀವ, ಹರೆಯದ ಭಾವ, ಕಾವ್ಯವಾಗಿ ಅರಳಿರುವಲ್ಲಿ ಪ್ರೀತಿ, ವಾತ್ಸಲ್ಯ , ನಂಬಿಕೆ, ಯಾತನೆ, ಚಡಪಡಿಕೆಗಳು, ಇವರ ಕಾವ್ಯದಲ್ಲಿ ಚಿಗುರಿ ನಿಂತಿವೆ. ಕಾವ್ಯ ಕಲ್ಪನೆ ಜೀವನ ನಡೆದು ಬಂದ ಪಯಣದಲ್ಲಿ ಸಾಗಿವೆ. ವಿದ್ಯಾ ಅವರು ಸಾಗಿ ಬಂದ ದಾರಿಯನ್ನು ಈ ಕವನ ಸಂಕಲನದಲ್ಲಿ ತಿರುಗಿ ನೋಡಿದ್ದಾರೆ. ದೀನ, ಬಡತನ, ಶೋಷಣೆ, ಹೆಣ್ಣಿನ ತುಮುಲತೆಗಳನ್ನು ಇಲ್ಲಿ ಕಾಣಬಹುದು. ಎದ್ದು ನಿಂತ ಕಾವ್ಯ ಹಂದರದ ಕಂಬಗಳು ಸಾಹಿತ್ಯ ನೆಲದಲ್ಲಿ ಗಟ್ಟಿಗೊಳ್ಳಲೆಂಬ ಹಂಬಲ ನನ್ನದಾಗಿದ್ದು. ಒಂದೊಮ್ಮೆ ಕಾದಂಬರಿ, ಮತ್ತೊಮ್ಮೆ ಕತೆ, ಹೀಗೆ ಸಾಹಿತ್ಯದ ಎಲ್ಲ ದಾರಿಯನ್ನು ಪರಿಚಯಿಸುತ್ತದೆ ಈ ಕವನ ಸಂಕಲನ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ವಿದ್ಯಾ ರೆಡ್ಡಿ

ಲೇಖಕಿ ವಿದ್ಯಾ ರೆಡ್ಡಿ ಅವರು ಕವಿಯತ್ರಿ. ಉತ್ತಮ ವಾಗ್ಮಿ. ಭಾಷೆ ಹಾಗೂ ಸಂಸ್ಕೃತಿಯ ಉದ್ದೀಪನ,  ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಕಾಳಜಿ: ಇವರ ವಿಶೇಷ ಒಲವುಗಳು. ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳಿಗಾಗಿ ಹಲವು ಗೌರವ ಪುರಸ್ಕಾರಗಳು ಇವರಿಗೆ ಸಂದಿವೆ. ಪ್ರಸ್ತುತ ಗೋಕಾಕದ ಸತೀಶ ಶುಗರ್‍ಸ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಸೇವಾನಿರತರು. ಕೃತಿಗಳು: ಮಂಜು ಮುಸುಕಿದ ಹಾದಿ (ಕಾದಂಬರಿ) ,ಅಂದಗಾತಿ(ಕವನಸಂಕಲನ) ...

READ MORE

Related Books