ಹುಲ್ಲು ಮೇಯುವ ಕುದುರೆ

Author : ಡಿ.ಸಿ. ರಾಜಪ್ಪ

Pages 96

₹ 125.00
Year of Publication: 2013
Published by: ತಿರುಮಲ ಪ್ರಕಾಶನ
Address: ದಾವಣಗೆರೆ

Synopsys

`ಹುಲ್ಲು ಮೇಯುವ ಕುದುರೆ’ ಕೃತಿಯು ಡಿ.ಸಿ. ರಾಜಪ್ಪ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಈ ಕವನದಲ್ಲಿ ಬದುಕಿನ ಇನ್ನೊಂದು ಮಗ್ಗುಲಿನ ದರ್ಶನ ಮಾಡಿಸುತ್ತಾರೆ. ಅಣ್ಣ ಭರತೇಶನನ್ನು ಸೋಲಿಸಿದ ನಂತರ ಎಲ್ಲವನ್ನು ಆತನಿಗೇ ಬಿಟ್ಟು ದಿಗಂಬರನಾಗಿ ಲೋಕಕ್ಕೆ ತ್ಯಾಗದ ಪಾಠ ಕಲಿಸಿದ ಬಾಹುಬಲಿಗೆ ಈ ಕವಿ ಕಾವ್ಯದ ಅಭಿಷೇಕ ಮಾಡಿಸುತ್ತಾರೆ. ಜ್ಞಾನೋದಯದಿಂದಾಗಿ ಎಲ್ಲವನ್ನೂ ಬಿಡುವುದರ ಆನಂದ ಮತ್ತು ಬಲಾತ್ಕಾರದಿಂದ ಎಲ್ಲವನ್ನೂ ಕಳೆದುಕೊಳ್ಳುವುದರ ನೋವಿನ ದರ್ಶನ ಈ ಕವನಗಳಿಂದಾಗುತ್ತದೆ. ಬದುಕಿನ ಕ್ರಮವೇ ವಿಚಿತ್ರವಾಗಿದೆ. ತಮ್ಮ ಪಾಡಿಗೆ ತಾವು ಬದುಕಬೇಕೆನ್ನುವವರು ಅನಿರೀಕ್ಷಿತವಾದ ಅಘಾತದ ಪ್ರಸಂಗವನ್ನು ಎದುರಿಸಿ ಅಪಮಾನಕ್ಕೆ ಒಳಗಾಗುತ್ತಾರೆ. ಅವರಿಗೆ ಸಾವು ಮತ್ತು ಬದುಕಿನ ಮಧ್ಯದ ಅಂತರವೇ ಕಾಣುವುದಿಲ್ಲ. ಕೊನೆಗೊಮ್ಮೆ ಸತ್ಯದ ವಿಜಯ ಆಗುತ್ತದೆ ಎಂಬುದರ ಬಗ್ಗೆ ಅವರು ನಂಬಿಕೆ ಕಳೆದುಕೊಳ್ಳುತ್ತಾರೆ. ತಮ್ಮ ಮೇಲಾದ ಅಪಮಾನದ ಕಾರಣವನ್ನು ಅಲ್ಲಗೆಳೆಯಲು ಅವರು ಆತ್ಮಹತ್ಯೆ ಮಾಡಿಕೊಂಡರು! ಎಂದು ವಿಶ್ಲೇಷಿತವಾಗಿದೆ.

Related Books