ಒಣಗಲಾಗದ ಬಿದಿರು

Author : ಜಿ. ವೆಂಕಟೇಶ

Pages 112

₹ 100.00
Year of Publication: 2019
Published by: ಸಪ್ನ ಬುಕ್ ಹೌಸ್
Address: ನಂ.165, 10ನೇ ಮುಖ್ಯ ರಸ್ತೆ, ಶ್ರೀನಗರ ಬಸ್ ನಿಲ್ದಾಣ ಹತ್ತಿರ ಶ್ರೀನಗರ, ಬೆಂಗಳೂರು - 560 050
Phone: 9845031335

Synopsys

’ಒಣಗಲಾಗದ ಬಿದಿರು’ ಕವನ ಸಂಕಲನದಲ್ಲಿ ಮೂವತ್ತು ಕವನಗಳಿವೆ. ಸಾಧನೆಯ ಮಾರ್ಗದಲ್ಲಿ ಅಡ್ಡಿಯಾದವರ ಬಗ್ಗೆ ಆಕ್ರೋಶ, ಅಡ್ಡಿಯನ್ನು ದಾಟಲಾಗದ ಅಸಹಾಯಕತೆ ಇದೆ, ರಾಜಕೀಯ ಸೆಳವಿದೆ, ಕೆಲವೊಮ್ಮೆ ವಿಷಾದವಿದೆ. ಕವಿಗಳು ಇಲ್ಲಿ ಚಿತ್ರಿಸಿರುವುದು ಒಣಗಲಾರದ ಬಿದಿರಲ್ಲ, ಒಣಗಲಾಗದ ಬಿದಿರು. ಅದಕ್ಕೆ ಒಣಗುವ ಅಪೇಕ್ಷೆ ಇದೆ, ಸಮಾಜಕ್ಕೆ ಪ್ರಯೋಜನವಾಗುವ ತೀವ್ರತೆ ಇದೆ. ಆದರೆ ಪರಿಸ್ಥಿತಿಯ ಒತ್ತಡ, ಸಾಮಾಜಿಕ ಅಸಮಾನತೆಯ ಕಾರ್ಯದ ಕಪಿಮುಷ್ಟಿ ಆ ಬಿದಿರನ್ನು ಒಣಗಲು ಬಿಡುತ್ತಿಲ್ಲ. ತನ್ನ ಸಾರ್ಥಕತೆಗೆ, ಸಿದ್ದಿಗೆ ತಹತಹಿಸುತ್ತಿದೆ ಬಿದಿರು. ಅಸಾಮಾನ್ಯವಾದ ಪ್ರತಿಭೆ, ಶಕ್ತಿಗಳನ್ನು ಹೊಂದಿ, ಅಸಹಾಯಕತೆಯ ಮೂಸೆಯಲ್ಲಿ ಕುದಿಯುತ್ತಿರುವ ಒಣಗಲಾಗದ ಬಿದಿರಿನ ಬಿಸಿಯುಸಿರೇ ಈ ಕವನ ಸಂಕಲನದ ಹೃದಯಗೀತೆ.

About the Author

ಜಿ. ವೆಂಕಟೇಶ

ಕವಿ ಜಿ. ವೆಂಕಟೇಶ ಅವರು ಮುಲತಃ ಬಳ್ಳಾರಿಯವರು. ಪ್ರಸ್ತುತ ಬಾಪೂಜಿ ಇಂಟರ್‌ನ್ಯಾಷನಲ್‌ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ಒಣಗಲಾಗದ ಬಿದಿರು’ ಅವರ ಕವನ ಸಂಕಲನ. ...

READ MORE

Related Books