ನೋವೂ ಒಂದು ಹೃದ್ಯ ಕಾವ್ಯ

Author : ರಂಗಮ್ಮ ಹೊದೇಕಲ್

Pages 64

₹ 130.00
Year of Publication: 2020
Published by: ಇಷ್ಟ ಪ್ರಕಾಶನ
Address: ಇಂಚರಾ, ಶಿವಜ್ಯೋತಿ ನಗರ, ಹಾಸನ

Synopsys

‘ನೋವೂ ಒಂದು ಹೃದ್ಯ ಕಾವ್ಯ’ ಕವಿ ರಂಗಮ್ಮ ಹೊದೇಕಲ್ ಅವರ ಕವನ ಸಂಕಲನ. ಈ ಕೃತಿಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿ ಬರೆದು ‘ರಂಗಮ್ಮ ಹೊದೇಕಲ್ ಅವರು ತಮ್ಮ ರಚನೆಗಳಲ್ಲಿ ಸಿದ್ಧಮಾದರಿಗಳನ್ನು ಮೀರಿದ ಹನಿಗವನ ಅಥವಾ ಮಿನಿ ಗವನಗಳ ರಚನೆಯ ಮೂಲಕ ಗಂಭೀರವಾಗಿ ಪರಿಗಣಿಸಬೇಕಾದ ಕವಿಯಾಗಿ ಹೊರಹೊಮ್ಮಿದ್ದಾರೆ. ಜೊತೆಗೆ ಈ ಮಾದರಿಯ ಕವನಗಳು ಲಘುತ್ವಕ್ಕೆ, ಪ್ರಾಸಕ್ಕೆ, ಸಂದೇಶಕ್ಕೆ ಮಾತ್ರ ಇಲ್ಲ ಎಂದು ಭಾವಿಸಿದ್ದಾರೆ. ಮತ್ತು ತಮ್ಮ ಭಾವನೆಗಳಿಗನುಗುಣವಾಗಿ ಅಭಿವ್ಯಕ್ತಿಸಿದ್ದಾರೆ. ಸಂಕಲನದ ಶೀರ್ಷಿಕೆಯೇ ಕವಿಯ ಜೀವನ ದೃಷ್ಟಿದರ್ಶನವನ್ನು ಅಭಿವ್ಯಕ್ತಿಸುತ್ತದೆ. ನೋವೂ ಕೂಡಾ ಒಂದು ಹೃದ್ಯ ಕಾವ್ಯವೆಂಬ ಪರಿಕಲ್ಪನೆಯು ಬದುಕನ್ನು ಕಾವ್ಯವೆಂಬಂತೆ ಸ್ವೀಕರಿಸುವ ನೋವನ್ನೂ ಹೃದಯಸ್ಥ ಮಾಡಿಕೊಳ್ಳುವ ವಿಶಿಷ್ಠ ನೆಲೆ ಮತ್ತು ನಿಲುವಿನಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ರಂಗಮ್ಮ ಹೊದೇಕಲ್

ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ರಂಗಮ್ಮ ಹೊದೇಕಲ್ ಅವರು ಅಪ್ಪಟ ಗ್ರಾಮೀಣ ಪ್ರತಿಭೆ. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ತಮ್ಮ ಅಂದವಾದ ಕೈ ಬರಹದಿಂದ ಕಳೆದ 15 ವರ್ಷಗಳಿಂದ ಶೈನಾ ಮಾಸಪತ್ರಿಕೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಸ್ಥಳೀಯ ಪತ್ರಿಕೆಯ ಅಂಕಣಕಾರರಾಗಿದ್ದಾರೆ. ನಾಡಿನ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.  ಮುಂಬಯಿ ಕನ್ನಡ ಸಂಘ, ಮೈಸೂರಿನ ಕನ್ನಡ ಕಾವಲು ಸಮಿತಿ, ತುಮಕೂರಿನ ಭೂಮಿ ಬಳಗ, ರೋಟರಿ ಸಂಸ್ಥೆ, ಜಿಲ್ಲಾ ಲೇಖಕಿಯರ ಸಂಘ, ಮಹಿಳಾ ಸಂಘಟೆಯ ಸನ್ಮಾನ ಗೌರವಗಳಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ವಿಶಿಷ್ಟ ಲೇಖಕಿ ಪ್ರಶಸ್ತಿ ಪುರಸ್ಕೃತರು. ...

READ MORE

Related Books