ಕಡೇ ನಾಲ್ಕು ಸಾಲು

Author : ಉಮಾ ಮುಕುಂದ

Pages 80

₹ 80.00




Year of Publication: 2018
Published by: ಬಹುರೂಪಿ
Address: ನಾಕುತಂತಿ, ಬಸಪ್ಪ ಲೇಜೌಟ್, ಆರ್.ಎಂ.ವಿ 2ನೇ ಹಂತ, ಸಂಜಯನಗರ, ಬೆಂಗಳೂರು -560094
Phone: 7019182729

Synopsys

ಕವಿ, ಲೇಖಕಿ, ಉಮಾ ಮುಕುಂದ ಅವರ ಕಾಡುವ ಕವಿತೆಗಳ ಸಂಕಲನ  ‘ಕಡೇ ನಾಲ್ಕು ಸಾಲು’. ಮನದಾಳದಲ್ಲಿ ಹೆಪ್ಪುಗಟ್ಟಿರುವ ಸಂಕಟದ ಸಾಗರಕ್ಕೆ ಅಭಿವ್ಯಕ್ತಿ ನೀಡಲು ಹೆಣಗಾಡುವ ಹೆಣ್ಣಿನ ನೋವು ಯಾವಾಗಲೂ ಸಮಾಜದ ಸಂವೇದನಾಶೂನ್ಯ ಕಣ್ಣುಗಳಿಗೆ ಕಾಣಿಸುವಂಥಾದ್ದಲ್ಲ. ಆಕೆ ತನ್ನೊಳಗಿನ ಯಾತನೆಗೆ ಕಾರಣಗಳನ್ನು ನೇರವಾಗಿ ಹೇಳಿಕೊಂಡರೆ ಆಕೆಯ ಆಲೋಚನೆಗಳನ್ನು ಸಂಪ್ರದಾಯ ವಿರುದ್ಧವಾಗಿ ಕಾಣುವ ಸಮಾಜವು ಆಕೆಯನ್ನೇ ತಪ್ಪಿತಸ್ಥಳನ್ನಾಗಿಸುತ್ತದೆ. ಅದಕ್ಕಾಗಿ ಆಕೆ ಸಾಹಿತ್ಯದ ಮೊರೆ ಹೊಗುತ್ತಾಳೆ. ಅದರಲ್ಲೂ ಕಾವ್ಯದ ಮೂಲಕ ಅನೇಕ ವಿಚಾರಗಳನ್ನು ಅಲಂಕಾರಿಕವಾಗಿ, ರೂಪಕ-ಪ್ರತಿಮೆಗಳ ಒಳಗೆ ಆಶಯಗಳನ್ನು ಅಡಗಿಸಿ ಸೂಕ್ಷ್ಮವಾಗಿ ಓದುವವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಹೇಳಿ ಹಗುರಾಗುತ್ತಾಳೆ.

ಉಮಾ ಮುಕುಂದ್ ಅವರ ‘ಕಡೇ ನಾಲ್ಕು ಸಾಲು’ ಇಂಥ ಕವಿತೆಗಳ ಒಂದು ಸುಂದರ ಸಂಕಲನ. ಮೊದಲ ಓದಿಗೆ ತುಂಬ ಸರಳ ಕವನಗಳೆಂದು ಅನ್ನಿಸುವ ಇಲ್ಲಿನ ಅನೇಕ ಕವಿತೆಗಳು ಕ್ಷಣಗಳು ಸರಿದಂತೆ ನಮ್ಮನ್ನು ಕಾಡತೊಡಗುತ್ತವೆ. ‘ಏನಿದರ ಅರ್ಥ?’ ಎಂದು ಮತ್ತೆ ಮತ್ತೆ ಕೇಳುವಂತೆ ಮಾಡುತ್ತವೆ.‘ ಕಡೇ ನಾಲ್ಕು ಸಾಲು’ ಇತ್ತೀಚೆಗೆ ಪ್ರಕಟವಾದ ಉಮಾ ಮುಕುಂದ್ ಅವರ ಮೊದಲ ಕವನ ಸಂಕಲನ.’ಇಲ್ಲಿನ ಬಹುತೇಕ ರಚನೆಗಳು ನನ್ನ ಬದುಕಿನ ಅನುಭವಗಳನ್ನು ಆಧರಿಸಿದ್ದೇ ಆಗಿವೆ. ಇದು ನನ್ನ ಮಿತಿಯೂ ಇರಬಹುದೇನೋ?’ ಎಂದು ಅಳುಕುತ್ತ ಹೇಳುವ ಕವಯಿತ್ರಿ ಇಲ್ಲಿ ಬರೆದಿರುವುದು ಮಾತ್ರ ಎಲ್ಲ ಹೆಣ್ಣುಮಕ್ಕಳು ಪಿಸುಗುಟ್ಟುವ ಸಾಮಾನ್ಯ ಮತ್ತು ಸಹಜ ಅನುಭವಗಳನ್ನೇ ಇಲ್ಲಿರುವ 36 ಕವಿತೆಗಳು ಹೆಣ್ಣಿನ ಸೀಮಿತ ಅವಕಾಶದ ಪರಿಧಿಯೊಳಗೆ ಕಾಣುವ ನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತವೆ. 

About the Author

ಉಮಾ ಮುಕುಂದ

ಉಮಾ ಮುಕುಂದ ಎಂದೇ ಪರಿಚಿತರಾಗಿರುವ ಬಿ.ಎಲ್ ಉಮಾದೇವಿ  ಹುಟ್ಟಿದ್ದು ಬೆಂಗಳೂರಿನಲ್ಲಿ. ಕೋಲಾರ  ಹಾಗು ಬೆಂಗಳೂರಿನಲ್ಲಿ  ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಬೆಂಗಳೂರಿನ ನಿಜಲಿಂಗಪ್ಪ ಕಾಲೇಜಿನಲ್ಲಿ ಬಿ ಎಸ್ಸಿ  ಪದವಿ ಪಡೆದಿದ್ದಾರೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ  ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಓದು-ಬರವಣಿಗೆಯ ಹವ್ಯಾಸವಿರುವ ಉಮಾ ಅವರ ಕವಿತೆಗಳು ’ ಅವಧಿ ’ ಮತ್ತು ’ಕೆಂಡಸಂಪಿಗೆ ’ ಅಂತರ್ಜಾಲ ಪತ್ರಿಕೆಗಳು  ಹಾಗು ’ಸಂಕಥನ’  ಸಾಹಿತ್ಯಪತ್ರಿಕೆಯಲ್ಲಿ  ಪ್ರಕಟವಾಗಿವೆ. ಕೆಲವು ಕವಿತೆಗಳು ತೆಲುಗು ಭಾಷೆಗೂ ಅನುವಾದಗೊಂಡಿವೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಉಮಾ ಅವರು ಕಡೇ ನಾಲ್ಕು ಸಾಲು ...

READ MORE

Related Books