ಚುಕ್ಕಿಯಾಟ

Author : ಗಿರೀಶ್ ಮೂಗ್ತಿಹಳ್ಳಿ

Pages 76

₹ 50.00




Year of Publication: 2011
Published by: ಅನ್ನಪೂರ್ಣ ಪ್ರಕಾಶನ
Address: #176,12ನೇ ಕ್ರಾಸ್, ಮಾಗಡಿ ಮೈನ್ ರೋಡ್, ಅಗ್ರಹಾರ ದಾಸರಹಳ್ಳಿ ಬೆಂಗಳೂರು-79

Synopsys

‘ಚುಕ್ಕಿಯಾಟ’ ಕೃತಿಯು ಗಿರೀಶ್ ಮೂಗ್ತಿಹಳ್ಳಿ ಅವರ ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಶಿವಾನಂದ ಕೆಳಗಿನಮನಿ ಅವರು, `ತನ್ನ ಅನುಭವಕ್ಕೆ ಅಭಿವ್ಯಕ್ತಿ ನೀಡುವ ಸಮಸ್ಯೆ ಪ್ರತಿಯೊಬ್ಬ ಕವಿಯನ್ನು ಕಾಡಿರುವಂಥಾದ್ದೇ. ತಾನು ಪಡೆದ ಲೋಕಾನುಭವನಗಳಿಗೆ ಭಾಷೆಯಲ್ಲಿ ಸಮರ್ಪಕವಾದ ರೂಪ ನೀಡಬೇಕೆಂದಾಗ ಲೋಕಾನುಭವಗಳು ಕವಿ ಮನಸ್ಸಿನ ಸಂವೇದನೆಯ ಒಂದು ಭಾಗವಾಗದಿದ್ದರೆ ಕಾವ್ಯ ಸೃಷ್ಠಿ ಸಾಧ್ಯವಿಲ್ಲ. ಆದರೆ ಇಲ್ಲಿನ ಕವಿತೆಗಳು ಕಾವ್ಯ ಸೃಷ್ಟಿಯ ಸೃಜನಶೀಲತೆಗೆ, ಬದುಕಿನ ಜೀವನೋತ್ಸಾಹಕ್ಕೆ ಹಂಬಲಿಸುತ್ತವೆ. ಕಾವ್ಯ ಕೇವಲ ಮಾತಲ್ಲ, ಮೌನವು ಅಲ್ಲ. ಮಾತು ಮೌನಗಳ ನಡುವೆ ತೆರೆದುಕೊಳ್ಳುವ ಜೀವಪ್ರಜ್ಞೆ. ಹಾಗಾಗಿ ಇಲ್ಲಿನ ಕವಿತೆಗಳು ಕೇವಲ ಮನಸ್ಸಿಗೆ ಮುದ ನೀಡುವುದಲ್ಲದೆ, ಬದುಕಿಗೆ ಭರವಸೆ, ಪ್ರೀತಿ, ವಿಶ್ವಾಸವನ್ನು ನೀಡುವಂಥ ಭರವಸೆಯನ್ನು ಹೊಂದಿವೆ. ಹಾಗೇ ತನ್ನ ಸುತ್ತಲಿನ ಸಮಾಜದ ದಮನಕಾರಿ ಹಿಂಸೆ, ಕೊಲೆ, ಸುಲಿಗೆ ವಂಚನೆ ಹಲಾಲಕೋರತನಗಳು ಸಹಜ ಬದುಕಿನ ಅನಿವಾರ್ಯತೆಗಳನ್ನು ಕವಿತೆಯ ಮೂಲಕ ವ್ಯಕ್ತವಾಗಿ ಇವುಗಳ ಮುಕ್ತತೆಯ ಬದುಕಿಗೆ ಹಂಬಲಿಸುತ್ತದೆ. ಗಿರೀಶ್ ಮೂಗ್ತಿಹಳ್ಳಿ ಕವಿತೆಯ ಮೂಲಕ ಬದುಕಿನ ಕಟುವಾಸ್ತವಗಳನ್ನು ತಲ್ಲಣದ ಬದುಕಿನ ಏಳು-ಬೀಳುಗಳನ್ನು, ಕವಿತೆಯಾಗಿಸುವಲ್ಲಿ ಭಾಷೆಯ ಶಬ್ಧ ರಚನೆಯಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಾರೆ. ಕವಿತೆಯ ಕಾಂತಿ, ಮುಗ್ಧತೆಯೊಂದಿಗೆ ಬದುಕಿನ ಅರ್ಥವಂತಿಕೆಯನ್ನು ತಿಳಿಸಲು ಪ್ರತಿಮೆ, ಸಂಕೇತಗಳನ್ನು ಬಳಸಿಕೊಂಡಿದ್ದಾರೆ. ಅನುಭವಲೋಕ ವರ್ತಮಾನದ ನೆಲೆಯಲ್ಲಿ ವಿಹರಿಸಿದರೂ ಭರವಸೆಯನ್ನು ಮೂಡಿಸಬಲ್ಲ ಕವಿತೆಗಳು ಇಲ್ಲಿ ಮೂಡಿಬಂದಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಗಿರೀಶ್ ಮೂಗ್ತಿಹಳ್ಳಿ

ಲೇಖಕ ಗಿರೀಶ್ ಮೂಗ್ತಿಹಳ್ಳಿ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿಯವರು. ಎಂ.ಎ, ಪಿಜಿ ಡಿಪ್ಲೊಮಾ ಹಾಗೂ ಪಿಎಚ್.ಡಿ  ಪದವೀಧರರು. ಎನ್.ಇಟಿ ವಿದ್ ಜೆಆರ್.ಎಫ್ ಹಾಗೂ ಕೆಎಸ್.ಇಟಿ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳನ್ನು ತೇರ್ಗಡೆಯಾಗಿರುತ್ತಾರೆ. ಲೇಖನ, ಪ್ರಬಂಧ ಮಂಡನೆ ಮತ್ತು ಕವನ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.  ಪ್ರಸ್ತುತ ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದಾರೆ. ಕೃತಿಗಳು : ಅಭಿಗಮನ (ವಿಮರ್ಶಾ ಲೇಖನ), ಬಸವ ಚಳುವಳಿಯ ಫಲಿತಗಳು (ಸಂಶೋಧನೆ), ಆಡಾಡ್ತ ಆಕಾಶ(ವಿಮರ್ಶಾ ಲೇಖನ), ಓಡಾಡುತ ಬಯಲು (ಸಂಶೋಧನೆ), ಅಕ್ಷರ ಮೈತ್ರಿ (ವಿಮರ್ಶಾ ಲೇಖನ), ಚುಕ್ಕಿಯಾಟ (ಕವನ ಸಂಕಲನ), ಬಸವ ಚಳುವಳಿಯ ಫಲಿತಾಂಶಗಳು (ವಚನ ಸಾಹಿತ್ಯ) ...

READ MORE

Related Books