ಅಕ್ಕಡಿ ಸಾಲು

Author : ಎ.ಎಸ್. ಮಕಾನದಾರ

Pages 240

₹ 225.00




Year of Publication: 2017
Published by: ನಿರಂತರ ಪ್ರಕಾಶನ
Address: ಗಾಂಧಿನಗರ,  ಗದಗ
Phone: 9916480291

Synopsys

ಕವಿ ಎ.ಎಸ್. ಮಕಾನದಾರ ಅವರ ಕವನ ಸಂಕಲನ-ಅಕ್ಕಡಿ ಸಾಲು. ಒಟ್ಟು 211 ಕವಿತೆಗಳಿವೆ.  ಕೃತಿಗೆ ಬೆನ್ನುಡಿ ಬರೆದ ಸಿದ್ಧರಾಜ ಪೂಜಾರಿ ‘ದಾರಿ ತಪ್ಪುತ್ತಿರುವ ನಾಗರಿಕತೆ, ಅದೇ ವ್ಯವಸ್ಥೆ ಸೃಷ್ಟಿಸಿದ ಕ್ರೂರ ಸತ್ಯಗಳು ಉಂಟು ಮಾಡುವ ತಲ್ಲಣಗಳ ಉಬ್ಬಸದಲ್ಲೇ ಜೀವನ ಪ್ರೀತಿ ಕಾಣಿಸುವ ಕವಿತೆಗಳು ಈ ಕೃತಿಯಲ್ಲಿವೆ. ಈ ಅಕ್ಕಡಿ ಸಾಲಿನಲ್ಲಿ ಹುಲುಸಾಗಿ ಬೆಳೆಯುವ, ವೈವಿಧ್ಯಮಯವಾದ ಸಿರಿಧಾನ್ಯಗಳಂತೆ ಇಲ್ಲಿಯ ಕವಿತೆಗಳು ಈ ನೆಲದ ಮೂಲ ಸತ್ವ ಹೀರಿಕೊಂಡೇ ಜೀವದಾಳಿವೆ. ಇವರ ಕವಿತೆಗಳು ಜೀವನ್ಮುಖಿಯಾಗಿವೆ. ಹೃದಯ ಸ್ಪರ್ಶಿಯಾಗಿವೆ. ಜನಪರವಾಗಿವೆ. ದೇವರು-ಧರ್ಮದ ಹೆಸರಿನಲಿ ಜೀವನ ಸ್ವಾಸ್ಥ್ಯ ಹಾಳು ಮಾಡುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಬರೆದ ಕವಿತೆಗಳು ತುಂಬಾ ಹರಿತವಾಗಿವೆ’  ಎಂದು  ಪ್ರಶಂಸಿಸಿದ್ದಾರೆ. 

 

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books