ಒಂದಾನೊಂದು ಕಾಲದಲ್ಲಿ

Author : ಸಿ.ಮ. ಗುರುಬಸವರಾಜ

Pages 100

₹ 100.00




Year of Publication: 2019
Published by: ಪುಸ್ತಕ ಜಗತ್ತು ಪ್ರಕಾಶನ
Address: ಹಗರಿಬೊಮ್ಮನಹಳ್ಳಿ

Synopsys

‘ಒಂದಾನೊಂದು ಕಾಲದಲ್ಲಿ’ ಕವಿ ಸಿ.ಮ. ಗುರುಬಸವರಾಜ ಅವರ ಮೊದಲ ಕವನ ಸಂಕಲನ. ಈ ಸಂಕಲನದ ಬಹುತೇಕ ಕವಿತೆಗಳ ಮುಖ್ಯ ಗುಣವೆಂದರೆ, ಗಾಢವಾದ ಸಾಮಾಜಿಕ ಪ್ರಜ್ಞೆ, ತನ್ನ ಕಾಲದ ಎಲ್ಲ ಆಗು ಹೋಗುಗಳಿಗೆ ಕವಿ ಪ್ರತಿಕ್ರಿಯಿಸುವ ರೀತಿ ವಿಭಿನ್ನ. ಜನಸಮುದಾಯಗಳ ತಲ್ಲಣಗಳು ಕಾವ್ಯದ ಮೂಲಕ ಅಭಿವ್ಯಕ್ತಿಗೊಂಡಿವೆ. ಈ ದಿಸೆಯಲ್ಲಿ ಸಿ.ಮ.ಗು ಅವರ ಪ್ರಯತ್ನ ಗಮನಾರ್ಹ, ಈ ಭಾಗದ ಜನರ ನೋವಿನ ಕತೆಯನ್ನು ಇಲ್ಲಿನ ಕವಿತೆಗಳು ಮಾರ್ಮಿಕವಾಗಿ ಹಾಡುತ್ತವೆ. ‘ಅಸುನೀಗಬೇಡ ಅನ್ನದಾತ’ ಎನ್ನುವ ಕವಿತೆಯಲ್ಲಿ ರೈತರು ಶತಶತಮಾನಗಳಿಂದ ಅನುಭವಿಸುತ್ತಿರುವ ಯಾತನೆಯ ಚಿತ್ರಣವಿದೆ. ತನ್ನ ಕಾಲದ ಜ್ವಲಂತ ಸಮಸ್ಯೆಯೊಂದನ್ನು ಕವಿತೆಯ ವಿನ್ಯಾಸಕ್ಕೆ ತರುವ ಪ್ರಯತ್ನ ಸಿ.ಮ.ಗು ಅವರದು. ಈ ಸಂಕಲನದ ಕವಿತೆಗಳ ವಸ್ತು, ವಿನ್ಯಾಸ, ಆಶಯ ವಿಭಿನ್ನವಾಗಿದೆ. ಇಲ್ಲಿನ ಕವಿತೆಗಳು ಜನ ಸಮುದಾಯಗಳ ಸಂವೇದನೆಗಳನ್ನು ಸಂಕಥನ ಮಾಡಿವೆ. ಜೊತೆಗೆ, ಮೈ-ಮನಗಳ ಮೇಲೆ ಆಗಿರುವ ಮಾಯದ ಗಾಯದೊಂದಿಗೆ ಮಾತಾಡಿವೆ. ಅವರು ಎಲ್ಲಿಯೂ ಎಚ್ಚರ ತಪ್ಪದೆಯೇ ನಾಗರೀಕತೆಯ ಒಳಗಿರುವ ಕ್ರೌರ್ಯ, ಅಸಮಾನತೆಗಳಿಗೆ ಮುಲಾಮಾಗಿ ಮನುಷ್ಯತ್ವದ ಆಳ ನಿರಚನೆಯನ್ನು ಮಾಡುತ್ತವೆ.

About the Author

ಸಿ.ಮ. ಗುರುಬಸವರಾಜ

ಸಿ.ಮ.ಗು ಎಂದೇ ಗುರುತಿಸಿಕೊಂಡಿರುವ ಗುರುಬಸವರಾಜ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಕಂದಾಯ ಇಲಾಖೆಯಬೆರಳಚ್ಚುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಹಲವು ಪತ್ರಿಕೆಗಳಿಗೆ ಬರದಿದ್ದಾರೆ. ಇಲಾಖೆಯಲ್ಲಿ ನಡೆಯುವ ಜಯಂತಿಗಳು, ಕಾರ್ಯಕ್ರಮಗಳಲ್ಲಿ ಸಮಯೋಚಿತ ಮಾಹಿತಿ ಸಂಗ್ರಹಣೆಯೊಂದಿಗೆ ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಾರೆ. ಜೊತೆಗೆ ‘ಶ್ರೀ ಶಿವಯೋಗಿ ಸಿದ್ದರಾಮೇಶ್ವರ’ ಎನ್ನುವ ಕಿರು ಹೊತ್ತಿಗೆ ಹೊರ ತಂದಿದ್ದಾರೆ. ಅಲ್ಲದೇ 2008ರವೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಹಾಗೂ ಬಳ್ಳಾರಿ ಜಿಲ್ಲಾ ಕಂದಾಯ ನೌಕರರ ಸಂಘದ ಉಪಾಧ್ಯಕ್ಷರಾಗಿ ಮತ್ತು ಸದರಿ ತಲೂಕಿನ ಅಂಗವಿಕಲ ನೌಕರರ ಸಂಘದ ಅಧ್ಯಕ್ಷರಾಗಿ ...

READ MORE

Related Books