ಪ್ಯಾರಿ ಪದ್ಯ

Author : ಎ.ಎಸ್. ಮಕಾನದಾರ

Pages 144

₹ 150.00




Year of Publication: 2020
Published by: ನಿರಂತರ ಪ್ರಕಾಶನ
Address: ಗಾಂಧಿ ನಗರ, 5ನೇ ಕ್ರಾಸ್, ಲೋಯೊಲಾ ಕಾನ್ವೆಂಟ್ ಹಿಂಭಾಗ, ಬೆಟಗೇರಿ, ಗದಗ-582102
Phone: 9916480291

Synopsys

ತಮಗೆ ತೀವ್ರವಾಗಿ ಕಾಡಿದ ವಸ್ತು-ವಿಷಯ, ಭಾವಗಳನ್ನು ಕವಿಗಣ್ಣಿನಿಂದ ಕಂಡ ಎ.ಎಸ್.ಮಕಾನದಾರ ಅವರು ‘ಪ್ಯಾರಿ ಪದ್ಯ’ಗಳಲ್ಲಿ ಸಂಕಲಿಸಿದ್ದಾರೆ. ‘ಚಾಂದಿನಿ, ಪ್ಯಾರಿ, ಸಖಿ, ಸನಮ್, ದಿಲ್‌ರುಬಾ, ದಿವಾನಿ, ಆಶಿಕ್’ ಮುಂತಾದ ಕವನಗಳನ್ನು ಈ ಕೃತಿ ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕವಿ ಎಚ್. ಎನ್. ಆರತಿ ಅವರು ‘ಕವಿ ಎ.ಎಸ್.ಮಕಾನದಾರ ಅವರು ತಮ್ಮ ಕನಸ ಮಕಾನಿನ ಕಿಟಕಿಯಿಂದ ಇಣುಕಿ, ಪಿಸುಗುಡುವ ಭಾವದ ಜ್ವಾಲಾಮುಖಿ, ಸಾಕಿಯ ಕಣ್ಣ ಬೆಳಕಿಗೆ ಪತಂಗವಾಗುವ ಮಕಾನದಾರರಿಗೆ ಪ್ರೀತಿ-ವಿರಹ, ಬದುಕಿನ ನಾಣ್ಯದ ಎರಡು ಮುಖಗಳು. ಕೆಲವೇ ಸಾಲುಗಳಲ್ಲಿ ಕ್ಷಣಿಕವಾಗಿ ಬಂದು ಹೋಗುವ ಭಾವತೀವ್ರತೆಯನ್ನು ಪದಗಳಲ್ಲಿ ಕಡೆದಿಟ್ಟಿದ್ದಾರೆ. ಪ್ಯಾರ್-ಪ್ರೀತಿಯ ಮೋಹಕ ಮಾಯಾಜಾಲದಲ್ಲಿ ಕಳೆದು ಹೋಗುವುದಕ್ಕೆ ಪ್ಯಾರಿ ಪದ್ಯದ ಸಹಾರ ಜರೂರಿ ಇದೆ. ರಸ್ತೆಯಲ್ಲಿ ಓಡಾಡುತ್ತಿರುವ ಪರಿಚಿತ-ಅಪರಿಚಿತ ಬದುಕನ್ನು ಬೆರಗಿನಿಂದ ನೋಡುವ ಪರಿಯೇ ಇಲ್ಲಿ ಕಾವ್ಯದ ಪಕಳೆಗಳಾಗಿವೆ’ ಎಂದಿದ್ದಾರೆ.

About the Author

ಎ.ಎಸ್. ಮಕಾನದಾರ

ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ.  ಪ್ರಶಸ್ತಿ-ಗೌರವಗಳು:  ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...

READ MORE

Related Books