ನಡೆದು ಬಂದ ದಾರಿ (ಕವನ ಸಂಕಲನ)

Author : ಸಿರಿಮೂರ್ತಿ ಕಾಸರವಳ್ಳಿ

Pages 51

₹ 50.00




Year of Publication: 2014
Published by: ಚಂದನ ಪ್ರಕಾಶನ
Address: #3, ಕೃತಿಕಾ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಬಸವೇಶ್ವರ ನಗರ ಬೆಂಗಳೂರು- 560079
Phone: 9480430115

Synopsys

‘ನಡೆದು ಬಂದ ದಾರಿ’ ಕೃತಿಯು ಸಿರಿಮೂರ್ತಿ ಕಾಸರವಳ್ಳಿ ಅವರ ಕವನ ಸಂಕಲನವಾಗಿದೆ. ಜೀವನದಲ್ಲಿ ಕಂಡುಂಡಂತಹ ಕೆಲವೊಂದು ವಿಚಾರ ಹಾಗೂ ಭಾವನೆಗಳನ್ನು ವಿಶ್ಲೇಷಿಸಿದ್ದಾರೆ. ತಮ್ಮ ತವರಿನ ಕುರಿತ ವಿಚಾರಧಾರೆಗಳನ್ನು ಕಟ್ಟಿಕೊಡುತ್ತಾ, ತನ್ನೂರು ವಾರಾಹಿ ಯೋಜನೆಯಲ್ಲಿ ಮುಳುಗಿ ಹೋಗಿದ್ದು, ಅದೊಂದು ಮಲೆನಾಡಿನ ಕುಗ್ರಾಮವಾಗಿತ್ತು ಎನ್ನುತ್ತಾರೆ. ಬಾಲ್ಯದ ದಿನಗಳು, ಪ್ರಕೃತಿಯ ಸೌಂದರ್ಯ ಹಾಗೂ ಮಲೆನಾಡಿನ ಸಂಸ್ಕೃತಿಯು ಇಲ್ಲಿನ ಪ್ರತಿಯೊಂದು ಕವನಗಳಲ್ಲಿಯೂ ಕಾಣಬಹುದು.

ಕೃತಿಗೆ ಹಾರೈಕೆ ಮಾತನ್ನು ಬರೆದಿರುವ ಲಕ್ಷ್ಮೀನಾರಾಯಣ ಭಟ್ಟ ಅವರು, `ಶ್ರೇಷ್ಠ ಕವಿತೆಗಳ ರಚನೆಯನ್ನೇ ಗುರಿಯಾಗಿಟ್ಟುಕೊಂಡು ಹೊರಟಿರುವ ಅವರ ಕವಿತೆಗಳಲ್ಲಿ ಸರಳವೂ ಸೌಮ್ಯವೂ ಆದ ಮಾತಿನ ವಿಲಾಸ, ನುಡಿ ಚಾತುರ್ಯ, ರೂಪಕ ಸಿಂಚನವಾದ ಅಭಿವ್ಯಕ್ತಿ ಕಾಣುತ್ತದೆ. ಪ್ರಕೃತಿಯ ವಿಲಾಸ, ಅಂತರಂಗದ ಒಳತೋಟಿ, ತವರಿನ ಪ್ರೀತಿ ಈ ಕವಿತೆಗಳ ವಸ್ತುಗಳಾಗಿವೆ. ತಮ್ಮ ಅನುಭವ ಭಾವನೆ ಕಲ್ಪನೆಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸಿಕೊಂಡು ಬರೆಯುವ ಅವರ ಶೈಲಿ ಯಾರೂ ಮೆಚ್ಚುವಂತಿದೆ. ಈ ಕವಿತೆಯಲ್ಲಿ ಬರುವ ನಾನು ಕೇವಲ ವೈಯುಕ್ತಿಕವಾಗಿರದೆ, ಯಾವ ವ್ಯಕ್ತಿಗೂ ಅನ್ವಯವಾಗುವ ಸರ್ವಸಾಧಾರಣವಾದ ನಾನು ಆಗಿದೆ. ದೈವದಂಥ ಅಲೌಕಿಕ ಶಕ್ತಿಗೆ ಬಾಗುವ ಅವರ ಮನಸ್ಸು,  ಹಲವು ಭಕ್ತಿಗೀತೆಗಳ ರಚನೆಗೂ ಕಾರಣವಾಗಿದೆ. ಅವರ ಅಭಿವ್ಯಕ್ತಿಯ ರೀತಿ ಕುವೆಂಪು, ಪುತಿನ ಅಂತಹವರು ಬಳಸಿದ ನವೋದಯದ ಕಾವ್ಯಮಾರ್ಗದ್ದು, ತೆರೆಯ ಮರೆ, ನಾ ನಿನ್ನ ಮರೆಯೆ, ನಿರೂಪ, ನಿನ್ನ ಕಂಡ ಗಳಿಗೆ, ನನ್ನೊಳಗೆ ನೀನು, ಏಕೆ ತೊರೆದೆ ನಿದ್ದೆಯೇ- ಮೊದಲಾದ ಕವಿತೆಗಳು ವಿಶಿಷ್ಟವಾದವು ’ ಎಂದು ಪ್ರಶಂಸಿಸಿದ್ದಾರೆ.

About the Author

ಸಿರಿಮೂರ್ತಿ ಕಾಸರವಳ್ಳಿ

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ  ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ. ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ...

READ MORE

Related Books