ನೂರೊಂದಯ್ಯ ವಿರಚಿತ ಸೌಂದರ ಕಾವ್ಯ

Author : ವೈ. ಸಿ. ಭಾನುಮತಿ

Pages 216

₹ 200.00
Year of Publication: 1996
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
Address: ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ- 570001\n
Phone: 0821-2419872

Synopsys

‘ನೂರೊಂದಯ್ಯ ವಿರಚಿತ ಸೌಂದರ ಕಾವ್ಯ’ ವೈ.ಸಿ. ಭಾನುಮತಿ ಅವರ ಸಂಪಾದಕತ್ವದ ಕಾವ್ಯ ಕೃತಿಯಾಗಿದೆ. ಒಂಬತ್ತು ಸಂಪುಟಗಳಷ್ಟು ಸುದೀರ್ಘರೂಪದ- ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ', 'ಮೈಕ್ರೋಫಿಲಂ ಸೂಚಿಗಳು ಪ್ರಕಟವಾಗಿವೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಪಾಶ್ಚಾತ್ಯ ಪಂಡಿತರಿಂದ ಪ್ರಾರಂಭವಾದ ಕನ್ನಡದ ಪ್ರಾಚೀನ ಹಸ್ತಪ್ರತಿಗಳ ಸಂಗ್ರಹ ಹಾಗೂ ಸಂಪಾದನ ಕಾರ್ಯವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಾರಂಭಿಸಲ್ಪಟ್ಟ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಕನ್ನಡಕ್ಕೆ ಹಾಗೂ ಸಂಸ್ಕೃತಕ್ಕೆ ಪ್ರತ್ಯೇಕ ವಿಭಾಗಗಳಿದ್ದವು. ಕನ್ನಡ ಸ್ನಾತಕೋತ್ತರ ವಿಭಾಗವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ, ಕನ್ನಡದ ಕೆಲಸಗಳೆಲ್ಲ ಒಂದೇ ಸೂರಿನ ಅಡಿಯಲ್ಲಿ ನಡೆಯಬೇಕು ಎಂಬ ಅಭಿಪ್ರಾಯದಿಂದ 1966ರ ಕೊನೆಯಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ಕನ್ನಡ ವಿಭಾಗವನ್ನು ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಯಿತು, ಅದಕ್ಕೆ ಈಗ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ಪುನರ್‌ ನಾಮಕರಣ ಮಾಡಲಾಗಿದೆ. ಅಲ್ಲಿಂದೀಚೆಗೆ ನಡೆದ ವ್ಯಾಪಕ ಕ್ಷೇತ್ರಕಾರ್ಯದಿಂದಾಗಿ, ವರ್ಗಾವಣೆಯಾದ ಹಸ್ತ ಪ್ರತಿಗಳ ಭಂಡಾರಕ್ಕೆ ಇನ್ನೂ ಹಲವು ನೂರು ಹಸ್ತಪ್ರತಿಗಳು ಸಂಗ್ರಹಣೆಯಾದುವು. ಇದರ ಪರಿಣಾಮವಾಗಿ ಕ್ರಿ.ಶ. 1342 ರಲ್ಲಿ ಪ್ರತಿಮಾಡಲಾಗಿರುವ ಅತ್ಯಂತ ಪ್ರಾಚೀನ ಹಸ್ತ ಪ್ರತಿಯಿಂದ ಹಿಡಿದು ತೀರ ಇತ್ತೀಚಿನ ಸಂಗ್ರಹದವರೆಗೆ ಸಂಖ್ಯೆಯು ಒಟ್ಟುಗೂಡಿದುದ ರಿಂದಾಗಿ ಈಗ ಸುಮಾರು ಹತ್ತುಸಾವಿರ ಹಸ್ತಪ್ರತಿಗಳನ್ನು ಒಳಗೊಂಡು ಒಂದು ಸಂಸಜ್ಜಿತವೂ ಸಮೃದ್ಧವೂ ಆದ ಹಸ್ತಪ್ರತಿ ಭಂಡಾರವು ಕನ್ನಡದ ಅತ್ಯಮೂಲ್ಯ ಆಸ್ತಿಯಾಗಿ ರೂಪಗೊಂಡಿದೆ.

About the Author

ವೈ. ಸಿ. ಭಾನುಮತಿ
(14 January 1953)

ಲೇಖಕಿ ವೈ.ಸಿ. ಭಾನುಮತಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದವರು. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜೈನ ಕವಿ ಶ್ರುತಕೀರ್ತಿಯ ಸ್ರ್ತೀಯೋರ್ವಳ ಕತೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿ ವಿಜಯ ಕುಮಾರಿ ಚರಿತೆ, ಸುಕುಮಾರ ಚರಿತೆ, ಪುರಾತನರರ ಚರಿತೆ ಮತ್ತು ಶರಣ ನಿಜಚಿಕ್ಕಲಿಂಗಯ್ಯ ಸಾಂಗತ್ಯ ಸೇರಿದಂತೆ ಸುಮಾರು 30 ಮಹತ್ವದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದ ಅವರು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ...

READ MORE

Related Books