ನಮ್ಮ ಮೇಷ್ಟ್ರಿಗೆ...

Author : ಚಿ.ಶ್ರೀನಿವಾಸರಾಜು

Pages 48

₹ 20.00
Year of Publication: 2008
Published by: ಸಂಚಯ
Address: 2ನೇ ಮುಖ್ಯ, 6ನೇ ಬ್ಲಾಕ್‌, 3ನೇ ಹಂತ, ಬನಶಂಕರಿ, ಬೆಂಗಳೂರು- 560085
Phone: 9844063514

Synopsys

ಕನ್ನಡ ಹೆಸರಾಂತ ಕವಿಗಳು ರಚಿಸಿದ ಚಿ. ಶ್ರೀನಿವಾಸರಾಜು ಕುರಿತ ಕವಿತೆಗಳ ಕೃತಿ ʻನಮ್ಮ ಮೇಷ್ಟ್ರಿಗೆ...ʼ. ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ಸಾಹಿತ್ಯದ ಪರಿಚಾರಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದವರು ಶ್ರೀನಿವಾಸರಾಜು ಅವರು. ಪುಸ್ತಕದ ಬಗ್ಗೆ ಡಿ.ವಿ. ಪ್ರಹ್ಲಾದ್‌ ಅವರು, “ರಾಜು ಮೇಷ್ಟು' ಎಂದೇ ಸಾಹಿತ್ಯ ವಲಯದ ಕಿರಿಯರ ನಡುವೆ ಖ್ಯಾತರಾದ ಚಿ. ಶ್ರೀನಿವಾಸರಾಜು ಸಾಹಿತ್ಯ ಪರಿಚಾರಿಕೆಗೆ ಹೊಸ ಅರ್ಥ ಕೊಟ್ಟ ನಮ್ಮ ಕಾಲದ ದೊಡ್ಡವರು. ಯಾವ ಸದ್ದುಗದ್ದಲ ಪಂಥ- ಪಂಗಡಗಳ ಹಂಗಿಲ್ಲದೆ ತಮ್ಮ ಪ್ರೀತಿ ಹಾಗೂ ನಿಷ್ಠೆಯಿಂದ ನಮ್ಮ ಭಾಷೆಗೆ ದುಡಿದವರು. ಅವರ ಬೆಂಬಲದಿಂದ ಬೆಳಕುಗೊಂಡ ಯುವ ಲೇಖಕರ ಒಂದು ದೊಡ್ಡ ಬಳಗವೇ ಇಂದು ನಾಡಿನ ತುಂಬಾ ಇದೆ. ಕಳೆದ ವರ್ಷ ಅಚಾನಕ್ಕಾಗಿ ತಮ್ಮ ಬದುಕಿನ ಯಾನ ಮುಗಿಸಿದ ರಾಜು ಮೇಷ್ಟ್ರ ನೆನಪಿಗೆ ಈ ಕವಿತೆಯ ಹೂವುಗಳು. ಇಲ್ಲಿಯ ಕವಿತೆಗಳು ಸರಳವಾಗಿ, ಭಾವುಕತೆಯ ಭಾರ ಸ್ವಲ್ಪ ಜಾಸ್ತಿಯೇ ಇದೆ. ಅದು ಸಹಜವೂ ಹೌದು. ಸಾವು ಹಾಗೂ ಕೃತಜ್ಞತೆಗಳಷ್ಟು ಮನುಷ್ಯನನ್ನು ಭಾವುಕಗೊಳಿಸುವ ಸಂಗತಿ ಇನ್ಯಾವುದಿದ್ದೀತು? ಮೇಷ್ಟ್ರಿಗೆ ತಮ್ಮ ಬಗ್ಗೆ ಹೊಗಳಿಕೆ ಪುಸ್ತಕಗಳು ಇತ್ಯಾದಿ ಇಷ್ಟವಾಗುತ್ತಿರಲಿಲ್ಲ, ಅಂಥ ಪ್ರಸಂಗಗಳಲ್ಲಿ ಅವರು ಹೆಚ್ಚು ಸಂಕೋಚ ಮುಜುಗರಗಳನ್ನು ಅನುಭವಿಸುತ್ತಿದ್ದರು. ಇಹದ ಕಂತೆ ಒಗೆದು ಹೊರಟವರಿಗೆ ಇಲ್ಲಿನ ಜಂಜಡಗಳು ತಟ್ಟುವುದಿಲ್ಲ, ಅವರ ನೆನಪು ಸ್ಮಾರಕ, ಸ್ಮರಣಿಕೆಗಳೆಲ್ಲ ಇರುವ ನಮ್ಮ ನಮ್ಮ ದುಃಖ ಶಮನಕ್ಕೆ, ಅಲ್ಪ ಸಮಾಧಾನಕ್ಕೆ. ಅಸಂಖ್ಯ ಲೇಖಕರ ಪುಸ್ತಕ ಪ್ರಕಟಿಸಿದ ಮೇಷ್ಟ್ರ ಬಗ್ಗೆ ನಮ್ಮ ಕೃತಜ್ಞತೆ ಗೌರವಗಳ ಸಂಕೇತ ಈ ಪುಟ್ಟ ಗುಚ್ಛ” ಎಂದು ಹೇಳಿದ್ದಾರೆ.

About the Author

ಚಿ.ಶ್ರೀನಿವಾಸರಾಜು
(28 November 1942 - 28 December 2007)

ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ...

READ MORE

Related Books