ಗೆಜ್ಜೆ ಕಟ್ಟದ ಕಾಲಲ್ಲಿ

Author : ಶ್ರೀದೇವಿ ಕೆರೆಮನೆ

Pages 1

Synopsys

ಶ್ರೀದೇವಿ ಕೆರೆಮನೆ ಅವರ ಕವಿತೆಗಳ ಸಂಕಲನ. ಈ ಸಂಕಲನದ ಕವಿತೆಗಳ ಬಗ್ಗೆ ಮೋಹನ ಹಬ್ಬು ಅವರು ’ಸ್ತ್ರೀಸಹಜ ಸಂವೇದನೆಗಳನ್ನು ಸರಳ ಶೈಲಿಯಲ್ಲಿ ಎದೆಗೆ ತಟ್ಟುವಂತೆ ಅಭಿವ್ಯಕ್ತಿಸಬಲ್ಲ ಈ ಕವಯಿತ್ರಿ ಇಂದಿನ ತಲೆಮಾರಿನ ಯುವ ಮನಸ್ಸುಗಳ ಆಲೋಚನೆ, ಆಶಯ ಮತ್ತು ಆಕಾಂಕ್ಷೆಗಳ ಪ್ರತಿನಿಧಿಯೂ ಹೌದು. ಬದುಕಿನಲ್ಲಿ ಎದುರಾಗುವ ಪ್ರೀತಿ-ಪ್ರೇಮ, ವಿರಹ, ನೋವು, ಆತಂಕ ಇತ್ಯಾದಿ ಭಾವಗಳನ್ನು ಉದ್ದೀಪಿಸುವ ಕ್ಷಣಗಳನ್ನು ಅಕ್ಷರಗಳಲ್ಲಿ ಹಿಡಿದಿಡುವಷ್ಟೇ ಸಮರ್ಥವಾಗಿ ಹೆಣ್ಣಿನ ಸಂಕಟ, ಪುರುಷಪಾರಮ್ಯ ಮುಂತಾದ ಸಾಮಾಜಿಕ ಸಮಸ್ಯೆಗಳನ್ನೂ ಕೂಡ ಶ್ರೀದೇವಿ ತಮ್ಮ ಕವಿತೆಗಳಲ್ಲಿ ಕಟ್ಟಿಕೊಡಬಲ್ಲರು ಎಂಬುದು ಅವರ ಕಾವ್ಯದ ಸಾಧ್ಯತೆಗಳನ್ನು ಸೂಚಿಸುತ್ತದೆ.

About the Author

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ). ’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ...

READ MORE

Related Books