ಭಾವ ಚೈತನ್ಯ

Author : ಮಧುಸೂದನ ಬಿ.ಎನ್‌.

Pages 78

₹ 60.00
Year of Publication: 2019
Published by: ಮನಸು ಪ್ರಕಾಶನ
Address: ಬೈಚೇನಹಳ್ಳಿ, ಕೋಳಾಲ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು
Phone: 9008503514

Synopsys

ಕನಸು, ಆಸೆ, ಕಂಡ ಕಳ್ಳತನ, ಸಂತೋಷ ಇಂತಹ ಹಲವಾರು ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಮಧುಸೂದನ. ಕವನ ಸಂಕಲನದ ಶೀರ್ಷಿಕೆಯೇ ಹೇಳುವಂತೆ ’ಭಾವ ಚೈತನ್ಯ’ ಯುವ ಕವಿಯ ಭಾವನೆಗಳ ತೋರಣವಾಗಿದೆ. ಬಾಡಿಗೆ ಮನೆಯಲ್ಲಾದ ಕಳ್ಳತನ, ಕಾಲೇಜು ಬದುಕು, ನಗು, ಅಳು ಇಲ್ಲಿನ ಕವನ ವಸ್ತುವಾಗಿದೆ. ಈ ಕವನ ಸಂಕಲನದ ಒಂದು ಕವಿತೆ ಓದಿಗಾಗಿ:

ರೂಮಿನಲ್ಲಿ ನಡೆದಿತ್ತು ರಾಬರಿ

ಈ ವಿಷಯ ತಿಳಿದು ನಮ್ಗೆಲ್ಲಾ ಗಾಬರಿ

ಯಾರ ಮೇಲೆ ತಿರುಗುವುದು ಸಂಶಯದ ಗಾಬರಿ

ಗೊತ್ತಾಯ್ತು ಕಳ್ಳತನವಾಗಿರುವ ವಿಷಯ

ಇದನ್ನು ತಿಳಿದು ನಮಗಾಯಿತು

ಕುಡಿದಂತೆ ಬೇವಿನ ಕಷಾಯ

ಯಾರಲ್ಲಿ ಪಡುವುದು ಸಂಶಯ

ಎಲ್ಲಾ ಕಾಲಾಯ ತಸ್ಮೈ ನಮಃ

About the Author

ಮಧುಸೂದನ ಬಿ.ಎನ್‌.

ಯುವ ಬರಹಗಾರ ಮಧುಸೂದನ ಬಿ.ಎನ್. ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಬೈಚೇನಹಳ್ಳಿಯವರು. ಬಿ.ಎ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಸಿನಿಮಾದಲ್ಲಿ ಆಸಕ್ತಿ ಇರುವ ಮಧು, ಅವರು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಹಲವು ಕಿರುಚಿತ್ರಗಳನ್ನು ನಿದೇರ್ಶಿಸಿದ್ದಾರೆ. ಕವನ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಮೊದಲ ಕವನ ಸಂಕಲನ ಭಾವ ಚೈತನ್ಯ. ...

READ MORE

Related Books