ಮಳೆ ಬಿದ್ದ ನೆಲದಲ್ಲಿ

Author : ಎಚ್.ಎಸ್. ಶಿವಪ್ರಕಾಶ್

Pages 72

₹ 50.00




Year of Publication: 1983
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಖ್ಯಾತ ಕವಿ, ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಅವರ ಕವಿತೆಗಳ ಸಂಕಲನ’ ಮಳೆ ಬಿದ್ದ ನೆಲದಲ್ಲಿ’ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. 

ಇತ್ತೀಚಿನ ಕವಿಗಳಲ್ಲಿ ಕಾವ್ಯ ಎಂದರೆ, ನಮ್ಮ ಎದೆಬಡಿತ ಹೆಚ್ಚಿಸುವ ಕವಿ ಶಿವಪ್ರಕಾಶ್. ವರ್ತಮಾನದ ಬದುಕಿನ ತೀವ್ರ ತುಡಿತ, ಆತಂಕ, ನಿರಾಶೆ, ನಿರೀಕ್ಷೆಗಳ ಜೊತೆ ಪರಂಪರೆಯ ಪ್ರಬುದ್ಧವಾದ ಮತ್ತು ಸಮಗ್ರವಾದ ಅರಿವು ಶಿವಪ್ರಕಾಶರ ಕಾವ್ಯವನ್ನು ರೂಪಿಸಿದೆ. ಅಕರಾಳ-ವಿಕರಾಳ ಅನುಭವಗಳನ್ನು ಮಾತ್ರ ಕೊಡುವ ಬೆಂಗಳೂರು ಹೇಗೋ ,  ಹಾಗೆಯೇ ಚರಿತ್ರೆ ಮತ್ತು ಪ್ರಕೃತಿಗಳ ದುರಾಗ್ರಹಕ್ಕೆ ಸಿಕ್ಕು ಹೈರಾಣದ ನಾಗಲಿಂಗನ ನವಲಗುಂದ ಸಾಧ್ಯತೆ ಮತ್ತು ಮಿತಿಗಳ ಕಗ್ಗಂಟು ಬಿಡಿಸಲಾಗದ ಬಸವ ಕಲ್ಯಾಣಗಳು ಕವಿಯ ಅಂತರಂಗವನ್ನು ಆಕ್ರಮಿಸಿದೆ. ವರ್ತಮಾನದ ಸಂಕಟಗಳನ್ನೂ ಅತ್ಯಂತ ತೀವ್ರವಾಗಿ ಅನುಭವಿಸಿ ಬರೆಯುವ ಕವಿ ಶಿವಪ್ರಕಾಶ್. ಕಾವ್ಯ ಇವರಿಗೆ ಬಿಡುಗಡೆಯ ಹೊರದಾರಿಯ ಹುಡುಕಾಟವಾಗಿದೆ. ಅವರ ಕಾವ್ಯ ಭವಿಷ್ಯವನ್ನು ಕಲ್ಪಿಸಿಕೊಂಡು ಬರೆದಾಗಲೆಲ್ಲಾ, ವ್ಯಕ್ತಿಗತ ಅನುಭವದಿಂದ ಹೊರಟರೂ ಅಂತಿಮವಾಗಿ ಅದು ಜನಾಂಗದ ಭವಿಷ್ಯದ ಕಾಳಜಿಯೇ ಆಗುತ್ತದೆ ಎನ್ನುವುದೂ ಗಮನಾರ್ಹ. ಈ ಸಂಕಲನದ ಶ್ರೇಷ್ಠ ಕವಿತೆಗಳಲ್ಲಿ ಕವಿ ತನ್ನ ವೈಯಕ್ತಿಕ ಅದೃಷ್ಟವನ್ನು ಜನತೆಯ ಪಾಡಿನ ಜೊತೆ ಸಮೀಕರಿಸಿಕೊಂಡಿರುವುದನ್ನು ಕಾಣಬಹುದು. 

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Awards & Recognitions

Related Books