ಎಲ್ಲಿ ನವಿಲು ಹೇಳಿರೇ

Author : ಚಂದ್ರಶೇಖರ ತಾಳ್ಯ

Pages 108

₹ 60.00
Year of Publication: 2004
Published by: ಆನಂದಕಂದ ಗ್ರಂಥಮಾಲೆ
Address: ಬಲರಾಮ, ಟೀಚರ್ಸ್ ಕಾಲೋನಿ, ಮಲ್ಲಾಡಿಹಳ್ಳಿ- 577531

Synopsys

‘ಎಲ್ಲಿ ನವಿಲು ಹೇಳಿರೇ’ ಚಂದ್ರಶೇಖರ ತಾಳ್ಯ ಅವರ ಕವಿತೆಗಳಾಗಿವೆ. ಮನುಷ್ಯ ತನಗೆ ಅವಶ್ಯವಾದ ಏನನ್ನೋ ಕಳೆದುಕೊಂಡು ಮತ್ತೆ ಹುಡುಕಾಡುತ್ತ ತನಗೆ ತಾನೇ ಅಪರಿಚಿತನಾಗುವ ಇಂದಿನ ಸಂದರ್ಭಕ್ಕೆ ತಕ್ಕಂತೆ ಕವಿತೆಗಳು ರೂಪುಗೊಂಡಿವೆ. ಸಂಕಲನದ ಎಲ್ಲ ಕವಿತೆಗಳೂ ವಿವಿಧ ನೆಲೆಗಳಿಂದ ಹೊರಟಂತೆ ಕಂಡರೂ ಕೊನೆಗೆ ಒಂದೇ ಆಶಯದ ನೆರಳಿನಡಿಯಲ್ಲಿ ಎಲ್ಲವೂ ಕೂಡಿಕೊಳ್ಳುತ್ತವೆ.

About the Author

ಚಂದ್ರಶೇಖರ ತಾಳ್ಯ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು. ನವ್ಯೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ. ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನ ಸಂಕಲನಗಳು. ಪ್ರಭು ಅಲ್ಲಮ, ನೆಲವ ಹುಡುಕಿ ಗದ್ಯ, ಅಲ್ಲಮ ನಾಟಕ, ...

READ MORE

Reviews

ಹೊಸತು -ಜನವರಿ-2005

ಕಾವ್ಯಾಸಕ್ತರಿಗೂ ಸಹೃದಯರಿಗೂ ಮೆಚ್ಚಿಗೆಯಾಗಬಲ್ಲ ತಾಳ್ಯರ ಕವಿತೆಗಳು ಪ್ರಾರಂಭವಾಗುವುದು ಪಿಸುಮಾತುಗಳಲ್ಲಿ, ಆದರೆ ಕಿವಿಯಿದ್ದೂ ಕೇಳಿಸದ, ಕಣ್ಣಿದ್ದೂ ಕಾಣಿಸದ ಕೆಲಜನರಿಗಾಗಿ ಅವು ದನಿಯೆತ್ತರಿಸಿ ಕೂಗಿಕೊಂಡಿದ್ದೂ ಇದೆ. ಮನುಷ್ಯ ತನಗೆ ಅವಶ್ಯವಾದ ಏನನ್ನೋ ಕಳೆದುಕೊಂಡು ಮತ್ತೆ ಹುಡುಕಾಡುತ್ತ ತನಗೆ ತಾನೇ ಅಪರಿಚಿತನಾಗುವ ಇಂದಿನ ಸಂದರ್ಭಕ್ಕೆ ತಕ್ಕಂತೆ ಕವಿತೆಗಳು ರೂಪುಗೊಂಡಿವೆ. ಸಂಕಲನದ ಎಲ್ಲ ಕವಿತೆಗಳೂ ವಿವಿಧ ನೆಲೆಗಳಿಂದ ಹೊರಟಂತೆ ಕಂಡರೂ ಕೊನೆಗೆ ಒಂದೇ ಆಶಯದ ನೆರಳಿನಡಿಯಲ್ಲಿ ಎಲ್ಲವೂ ಕೂಡಿಕೊಳ್ಳುತ್ತವೆ. ಇಲ್ಲಿನ ಕೆಲವು ಕವಿತೆಗಳು ಪ್ರಸಿದ್ಧ ಎಂ.ಎಸ್.ಐ.ಎಲ್. ಸಂಸ್ಥೆಯಿಂದ ಕ್ಯಾಸೆಟ್‌ ಗೆ ಅಳವಡಿಸಲಾಗಿವೆ. ಪ್ರಸಿದ್ಧ ಗಾಯಕರು ಹಾಡಿದ್ದು ಆಕಾಶವಾಣಿ - ದೂರದರ್ಶನಗಳು ಸಹ ಪ್ರಸಾರ ಮಾಡಿವೆ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲೂ ಬೆಳಕು ಕಂಡಿವೆ.

Related Books