ಬರುವ ನಾಳೆಗಳಿಗೆ ರಾತ್ರಿಯೇ ಇರುವುದಿಲ್ಲ

Author : ಸಿದ್ದು ದೇವರಮನಿ

Pages 80

₹ 50.00
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

`ಬರುವ ನಾಳೆಗಳಿಗೆ ರಾತ್ರಿಯೇ ಇರುವುದಿಲ್ಲ’ ಕೃತಿಯು ಸಿದ್ದು ದೇವರಮನಿ ಅವರ ಕವನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಕವನಗಳು ಹೀಗಿವೆ : ನಾವು ಎಲ್ಲರಂತೆ ಪ್ರೇಮಿಸಲಿಲ್ಲ ನಿರೀಕ್ಷೆಗಳೆಲ್ಲ ಹುಸಿಯಾದ ಮೇಲೆ ‘ಹುಸಿ‘ ಎಂಬ ಪದಕ್ಕೆ ಅನ್ವರ್ಥವಾಗಿ ನಿರೀಕ್ಷೆ ಎಂದು ಬರೆದಿಟ್ಟುಕೊಂಡಿದ್ದೇನೆ  ಹೌದು, ನಮ್ಮಿಬ್ಬರ ಭೇಟಿಗೆ ಬೆಳದಿಂಗಳು ಚೆಲ್ಲುತ್ತಿದ್ದ ಚಂದಿರ ಈಗಲೂ ನಿಮ್ಮೂರಲ್ಲಿ ನೆಲೆಸಿದ್ದಾನ? ಎಂದು ಸಂಕಲನದ ಮುಖ್ಯ ಕವಿತೆಯಲ್ಲಿ ಚಿತ್ರವತ್ತಾಗಿ ಬರೆಯುವ ಕವಿ ಸಿದ್ದು ದೇವರಮನಿಯವರದು ಒಂದು ರೀತಿಯ ವಿಷಾದಗೀತೆಗಳು. ಇದು ಕವಿಯ ಮೊದಲ ಸಂಕಲನ. ಇವರ ಕವಿತೆಗಳಲ್ಲಿ ಪ್ರೀತಿಯ ಕನವರಿಕೆಗಳಿವೆ, ಷರೀಫಜ್ಜನಿಗೊಂದು ಪತ್ರವಿದೆ, ಪ್ರಕೃತಿಯ ಕುರಿತಾದ ವ್ಯಾಮೋಹವಿದೆ. ರೋಮ್ಯಾಂಟಿಕ್ ಆಗಿ ಬರೆಯುವ ಕವಿಯ ಸರಳ ಮನಸ್ಸಿನ ಸರಳ ರಚನೆಗಳಿವು. ಸವೆದು ಸವಕಲಾಗಿರುವ ಕವಿಸಮಯಗಳೂ ಈ ಕವಿತೆಗಳಲ್ಲೂ ಕಾಣಿಸಿಕೊಂಡಿವೆ.

About the Author

ಸಿದ್ದು ದೇವರಮನಿ

ಲೇಖಕ ಸಿದ್ದು ದೇವರಮನಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೋಡ್ಲಿಗಿ ತಾಲೂಕಿನ ಕೊಟ್ಟೂರು ದವರು. ಬರವಣಿಗೆ ಇವರ  ಆಸಕ್ತಿ ಕ್ಷೇತ್ರ. ತಮ್ಮದೇ ಆದ ಖಾಸಗಿ ವ್ಯವಹಾರದಲ್ಲಿ ಪ್ರಧಾನ ಕಾರ್ಯನಿರ್ವಾಹಕರಾಗಿದ್ದಾರೆ.   ಕೃತಿಗಳು : ಬರುವ ನಾಳೆಗಳಿಗೆ ರಾತ್ರಿಯೇ ಇರುವುದಿಲ್ಲ ...

READ MORE

Related Books