ಬದುಕು ಬರಿದಲ್ಲಾ: ಅದು ಭಾವನೆಗಳ ಬುತ್ತಿ

Author : ರವಿ ವೆ. ಕುರಿಯವರ

Pages 84

₹ 100.00
Year of Publication: 2021
Published by: ನೇರಿಶಾ ಪ್ರಕಾಶನ
Address: ನೇರಿಶಾ ಪ್ರಕಾಶನ ಕಡೂರು ಅಂಚೆ, ಹೊಳಲ್ಕೆರೆ ತಾ. ಚಿತ್ರದುರ್ಗ ಜಿಲ್ಲೆ - 577 523
Phone: 82778 89529

Synopsys

ರವಿ ವೆ. ಕುರಿಯವರ ಅವರ ಕವಿತೆಗಳ ಸಂಕಲನ-ಬದುಕು ಬರಿದಲ್ಲ; ಅದು ಭಾವನೆಗಳ ಬುತ್ತಿ. ಕಾವ್ಯವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕವಿತೆಗಳ ಓದುಗರ ಗಮನ ಸೆಳೆಯುತ್ತವೆ. ಸಾಹಿತಿ ಎಂ.ಆರ್.ಕಮಲ ಅವರು ಕೃತಿಗೆ ಬೆನ್ನುಡಿ ಬರೆದು ‘ತಮ್ಮೊಳಗೆ ಹುಟ್ಟಿರುವ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇಲ್ಲಿಯ ಕವಿತೆಗಳಿವೆ. ಮುಷ್ಠಿಯಲ್ಲಿ ನಲುಗಿಸಿದ ಸ್ವಾರ್ಥ, ಮುಖವಾಡದ ಬದುಕು, ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯ, ಶೋಷಣೆ, ಆತ್ಮಾಭಿಮಾನವಿಲ್ಲದ ನಡೆ, ಗುಲಾಮಗಿರಿ, ದ್ವೇಷದಲ್ಲಿ ಚೆಲ್ಲಿದ ನೆತ್ತರು ಇತ್ಯಾದಿ ಕವಿ ಮನಸ್ಸನ್ನು ವಿಚಲಿತಗೊಳಿಸುತ್ತವೆ. ಆಗ ಕವಿ ಮೌನದ ಮೊರೆ ಹೋಗುತ್ತಾರೆ. ಆ ಮೌನದಲ್ಲಿ ಧ್ಯಾನಿಸಿ ಕಂಡುಕೊಂಡ ಉತ್ತರಗಳೇ ಈ ಸಂಕಲನದಲ್ಲಿ ಕವಿತೆಗಳ ರೂಪ ತಾಳಿವೆ. ಹಕ್ಕಿಯಂತೆ ಯಾವ ಕಟ್ಟುಪಾಡಿಗೂ ಒಳಗಾಗದ, ಸಹಜ ಸುಂದರ ಸ್ವತಂತ್ರ ಆಲೋಚನೆಗಳಿಗೆ ಧಕ್ಕೆ ಭಾರದ ಲೋಕವನ್ನು ಕವಿ ತಮ್ಮೊಳಗೆ ಕಟ್ಟಿಕೊಂಡಿರುವುದನ್ನು ಇಲ್ಲಿಯ ಕವಿತೆಗಳು ನುಡಿಯುತ್ತವೆ’ ಎಂದು ಪ್ರಶಂಸಿಸಿದ್ದಾರೆ..

 

 

 

About the Author

ರವಿ ವೆ. ಕುರಿಯವರ

ಲೇಖಕ ರವಿ.ವೆ.ಕುರಿಯವರ ಮೂಲತಃ ಉತ್ತರಕರ್ನಾಟಕದವರು.ತಂದೆ- ವೆಂಕಪ್ಪ.ಹ.ಕುರಿಯವರ ತಾಯಿ: ಶೋಭಾ.ವೆ.ಕುರಿಯವರ  ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸ ಮಾಡಿಕೊಂಡು ಕೆ.ಪಿ.ಟಿ.ಸಿ.ಎಲ್‌ನಲ್ಲಿ ಕಿರಿಯ ಅಭಿಯಂತರರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ಸಾಹಿತ್ಯ ಕೃಷಿ ಹಾಗೂ ರಂಗಬಿಂಬ ಹವ್ಯಾಸಿ ತಂಡದೊಂದಿಗೆ ಸೇರಿಹಲವು ನಾಟಕಗಳ ಪ್ರದರ್ಶನ ನೀಡಿದ್ದು, ರಂಗಸಜ್ಜಿಕೆ ಹಾಗೂ ಇತರೆ ಜವಾಬ್ದಾರಿಗಳ ನಿರ್ವಹಣೆ ಮಾಡಿರುತ್ತಾರೆ.  ಕೃತಿಗಳು: ಬದುಕು ಬರಿದಲ್ಲ; ಅದು ಭಾವನೆಗಳ ಬುತ್ತಿ. ಪ್ರಕಟಿಸಿದ್ದಾರೆ.  ...

READ MORE

Related Books