ಮಾತು ಮೌನಗಳ ನಡುವೆ

Author : ವಿಜಯಾ ಸುಬ್ಬರಾಜ್

Pages 744

₹ 480.00




Year of Publication: 2014
Published by: ಕಾಲ ಪ್ರಕಾಶನ
Address: ಬನಗಿರಿನಗರ, ಬನಶಂಕರಿ 3ನೇ ಹಂತ, ಬೆಂಗಳೂರು
Phone: 08026793219

Synopsys

ವಿಜಯಾ ಸುಬ್ಬರಾಜ್‌ ಅವರ ಕವನ ಸಂಕಲನ ’ಮಾತು ಮೌನಗಳ ನಡುವೆ’. ಕವಿಯ ಭಾವಾಂತರಂಗದ ವಿಷಯಗಳು ಇಲ್ಲಿ ಕವಿತೆ ವಸ್ತುಗಳಾಗಿವೆ. ಈ ಸಂಕಲನದ ’ತ್ರಿಶಂಕು’ ಶೀರ್ಷಿಕೆಯ ಕವನವು ದ್ವಂದ್ವ ಧೋರಣೆಯನ್ನು ಸಮರ್ಥವಾಗಿ ಸಾಂಕೇತಿಸುತ್ತದೆ. ’ನನ್ನ ನಂತರವೂ ನನ್ನ ವಿಭವದ/ ಹೊಗರ ಚೆಲ್ಲುವ ಚಿಗುರು ಬೇಕು/ ಭೂಮವಾಗಿ/ ಉಳಿಯಬೇಕೆಂಬುದೇ/ ಅಂತರಾಳದ ಆಸೆ/ (ಆಸೆ)/ ಯೂಲಿಸಿಸ್‌ ಅನುಭವಗಳೆಲ್ಲ/ಏಳು ಸುತ್ತಿನ ಕೋಟೆ/ ಮುಚ್ಚಳದೊಳಗೆ/ಕುಳಿತು ಮೊಳೆ/ಬಡಿಸಿಕೊಂಡಿವೆ/ ಹೀಗೆ ಕವನದ ಸಾಲುಗಳು ಗಮನ ಸೆಳೆಯುತ್ತವೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books