ಪರಿಧಿ (ಕವನ ಸಂಕಲನ)

Author : ಜ್ಯೋತಿ ಡಿ ಬೊಮ್ಮಾ

Pages 100

₹ 100.00
Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು,
Address: ಚಿಂಚೋಳಿ ತಾಲೂಕು ಘಟಕ, ಕಲಬುರಗಿ ಜಿಲ್ಲೆ

Synopsys

ಕವಯತ್ರಿ ಜ್ಯೋತಿ ಡಿ. ಬೊಮ್ಮಾ ಅವರ ಕವನ ಸಂಕಲನ-ಪರಿಧಿ. ಒಟ್ಟು 60 ಕವನಗಳಿವೆ. ಸಾಹಿತಿ ಬಸವರಾಜ ಐನೋಳಿ ಅವರು ಕೃತಿಗೆ ಮುನ್ನುಡಿ ಬರೆದು ‘ಕವಯತ್ರಿಯ ಮನೋಭೂಮಿಕೆಯೇ ಶಿಸ್ತು. ಸರಳ ಜೀವನ, ಆಡಂಬರವಿಲ್ಲದ ಬದುಕು ಹಾಗೂ ಬಾಹ್ಯ ಜಗತ್ತಿನಲ್ಲಿ ಕಾಣುವ ಅವ್ಯವಸ್ಥೆಯನ್ನು ಸರಿಪಡಿಸುವುದೇ ಆಗಿದೆ. ಇಲ್ಲಿಯ ಕವನಗಳು ಸಾಮಾಜಿಕ ಸಂಕಷ್ಟಗಳಿಂದ ವಿಮುಖವಾಗುವುದಿಲ್ಲ. ಪರಿಹಾರ ಕಂಡುಕೊಳ್ಳುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಹಿತಿ ಲಿಂಗಾರೆಡ್ಡಿ ಶೇರಿ ಅವರು ಕೃತಿಗೆ ಬೆನ್ನುಡಿ ಬರೆದು ‘ಮಹಿಳೆಯರ ಸಂವೇದನೆ, ತಲ್ಲಣ, ಕನಸು, ಕೌಟುಂಬಿಕ ಚಿತ್ರಣ, ಬಂಧನ, ಚಿಂತೆ, ಆತಂಕ ಮುಂತಾದ ಕವನಗಳ ಮೂಲಕ ಚಿತ್ರಿಸಿದ್ದಾರೆ. ಇಲ್ಲಿಯ ಕವಿತೆಗಳಲ್ಲಿ ವೈಚಾರಿಕತೆ ಇದೆ. ತಾರ್ಕಿಕ ಮೆರುಗು ಇದೆ. ಸಾಹಿತ್ಯಕ ಅಧ್ಯಯನ, ಅಭಿವ್ಯಕ್ತಿ, ಅನುಭವ ಹೀಗೆ ಶಕ್ತಿ ಹೆಚ್ಚಾದಂತೆ ಉತ್ತಮೋತ್ತಮ ಕೃತಿಗಳನ್ನು ನೀಡಬಲ್ಲ ಭರವಸೆಯನ್ನು ಈ ಕೃತಿ ದೃಢಪಡಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 
 

 

About the Author

ಜ್ಯೋತಿ ಡಿ ಬೊಮ್ಮಾ

ಲೇಖಕಿ ಜ್ಯೋತಿ ಡಿ. ಬೊಮ್ಮಾ(ಜ್ಯೋತಿ ಡಾ.ಧನರಾಜ್ ಬೊಮ್ಮಾ) ಮೂಲತಃ ಬೀದರ ಜಿಲ್ಲೆಯವರು. ಬಿ.ಕಾಂ. ಹಾಗೂ ಎಲ್ ಎಲ್ ಬಿ ಪದವೀಧರೆ. ಸದ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವಾಸವಿದ್ದಾರೆ.  ಕೃತಿಗಳು: ನಮ್ಮೊಳಗಿನರಿವು (ಕವನ ಸಂಕಲನ) ಪರಿಧಿ (ಕವನ ಸಂಕಲನ) ...

READ MORE

Related Books