ಮಣ್ಣಿನ ಬಟ್ಟಲು

Author : ಚಂಗಚಂಡ ರಶ್ಮಿ ನಿತಿನ್

Pages 152

₹ 130.00




Year of Publication: 2020
Published by: ಮಾಣಿಕ್ಯ ಪ್ರಕಾಶನ,
Address: # 50, ಪುಟ್ಟಬಿಂದು ನಿಲಯ, ತೇಜೂರು ರಸ್ತೆ, ಶಾಂತಿನಗರ, ಹಾಸನ-573201
Phone: 9483470794

Synopsys

ಕವಯತ್ರಿ ಚಂಗಚಂಡ ರಶ್ಮಿ ನಿತೇನ್ ಅವರ ಕವನ ಸಂಕಲನ-ಮಣ್ಣಿನ ಬಟ್ಟಲು. ಒಟ್ಟು 62 ಕವನಗಳಿವೆ.  ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅವರು ಕೃತಿಗೆ ಮುನ್ನುಡಿ ಬರೆದು ‘ಕವಯತ್ರಿಯ ಭಾವ ಮಾಗಿದೆ. ಸಾಮಾಜಿಕ ಕಳಕಳಿಯ ಆಶಯ ಚೆಲ್ಲುವರಿದಿದೆ' ಎಂದು ಪ್ರಶಂಸಿಸಿದ್ದರೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂತೋಷ ತಮ್ಮಯ್ಯ ಅವರು ತಮ್ಮ ಆಶಯ ನುಡಿಯಲ್ಲಿ ‘ಇಲ್ಲಿಯ ಕವಿತೆಗಳು ನೆಲದ ಪರಿಮಳವನ್ನು ಸೂಸುತ್ತವೆ. ಸಂಬಂಧಗಳ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಸಾಹಿತ್ಯದ ಉದ್ದೇಶವನ್ನು ಅರ್ಥಪೂರ್ಣವಾಗಿಸುವ ಅಪರೂಪದ ಕೃತಿ’ ಎಂದು ಶ್ಲಾಘಿಸಿದ್ದಾರೆ.

 

About the Author

ಚಂಗಚಂಡ ರಶ್ಮಿ ನಿತಿನ್
(06 March 1988)

ಕವಯತ್ರಿ ಚಂಗಚಂಡ ರಶ್ಮಿ ನಿತಿನ್ ಅವರು ಮೂಲತಃ ಕೊಡಗು ಜಿಲ್ಲೆಯವರು. ಕುಶಾಲನಗರದ ನಂಜರಾಯ ಪಟ್ಟಣದ ಹೊಸಪಟ್ಟಣ ಗ್ರಾಮದಲ್ಲಿ ನೆಲೆಸಿದ್ದು, ಎಂ.ಕಾಂ. ಪದವೀಧರರು. ಕಂದದ :ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಹಾತೂರು  ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಪದವಿ ಹಾಗೂ ಸದ್ಯ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕಥೆ, ಕವನ ಲೇಖನಗಳನ್ನು ಬರೆಯುವ ಹವ್ಯಾಸ. ರಕ್ತದಾನ, ಬೆಂಕಿ ಸುರಕ್ಷತೆಯ ಅರಿವು ಹೀಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. . ಕೃತಿಗಳು: ಮಣ್ಣಿನ ಬಟ್ಟಲು (ಕವನ ಸಂಕಲನ) ಗೌರವ ಸನ್ಮಾನ: ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಕಾವ್ಯ ಪ್ರತಿಭಾ ಪ್ರಶಸ್ತಿ ...

READ MORE

Related Books