ಅಂತರಂಗದ ಹೂವು

Author : ವಿ.ಗಣೇಶ್‌

Pages 73

₹ 45.00
Year of Publication: 2000
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060\n

Synopsys

'ಅಂತರಂಗದ ಹೂವು’ ವಿ. ಗಣೇಶ ಅವರ ಕವನ ಸಂಕಲನವಾಗಿದೆ. ಭಾವಜೀವಿಯಾದವನಿಗೆ ಕವನಗಳನ್ನು ಬರೆಯಲು ಕಸರತ್ತು ಮಾಡಬೇಕಾಗಿಲ್ಲವೆಂದು ಇಲ್ಲಿನ ಸಹಜ 43 ಕವನಗಳು ನಿರೂಪಿಸುತ್ತವೆ. ಬದುಕಿನಿಂದ ಸುಂದರವಾದುದನ್ನು ಮಾತ್ರ ಆಯ್ದುಕೊಂಡು ನಮ್ಮೊಂದಿಗೆ ಕ್ಷಣಕಾಲ ಸಂತೋಷವಾಗಿ ಕಳೆಯಲು ಬಯಸುವ ಕವಿಯ ಲೇಖನಿಯಿಂದ ಕುಸುಮ ಕೋಮಲವೆನ್ನಬಹುದಾದ ಭಾವಗೀತೆಗಳು ಅರಳಿ ಕಂಪು ಬೀರುತ್ತಿವೆ. ಭಾವನೆಗಳಿಗೆ ಭಾಷೆಯ ತೊಡಕು ಅಡ್ಡಿಯಾಗದಂತೆ ಅನುವಾದಿಸಿದ್ದಾರೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books