ಭಾವ ಬಿಂದಿಗೆ

Author : ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್

Pages 75

₹ 75.00
Year of Publication: 2015
Published by: ಪ್ಯಾರಿ ಪ್ರಕಾಶನ
Address: ಪ್ಯಾರಿ ಮಂಜಿಲ್, ಆದರ್ಶನಗರ, ಅಫಜಲಪುರ, ಜಿಲ್ಲೆ ಕಲಬುರಗಿ

Synopsys

ಕವಿ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರ ಕವನ ಸಂಕಲನ-ಭಾವ ಬಿಂದಿಗೆ. ಕವನಗಳು ಭಾವ ಮತ್ತು ಹೃದಯ ಪ್ರಧಾನವಾಗಿ ಮೂಡಿಬಂದಿವೆ. ಜಾನಪದ ಸೊಗಡು ಹಾಸುಹೊಕ್ಕಾಗಿದೆ. 38 ಕವನಗಳು, 40 ಚುಟುಕುಗಳನ್ನು ಈ ಸಂಕಲನ ಒಳಗೊಂಡಿದೆ. ಕವನ ಅರಳ್ಯಾವ,  ಮರಿಬ್ಯಾಡ್ರಿ, ಪವಾಡ ಬಯಲು, ನಮ್ಮ ಕಲಬುರ್ಗಿ, ನಮಗೆಲ್ಲ ನಶೆಯಾಗಿದೆ, ಸಾಯಿನ್ಸ ಮಾಸ್ತರು, ರಾಜ್ಯೋತ್ಸವ, ಕರುಣಾಮಯಿ ಅಪರೂಪದ ಕವನಗಳು ಭಾವಗಡಲಲಿ ತೇಲಿಸುತ್ತವೆ,  ಭಾವರಸ ಧ್ವನಿಸುತ್ತವೆ.  ಚುಟುಕುಗಳಾದ ಗಡಿ, ಸಮರ, ಲಂಚಾವತಾರ, ಗಮ್ಮತ್ತು, ಹಾಜಿಮಾ, ಕಲಾಂ ಸರ್ ಕೋಲ್ಮಿಂಚಿನಂತೆ ಅರಿವನ್ನು ಮೂಡಿಸುತ್ತವೆ. 

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬಿ.ಎಚ್.. ನಿರಗುಡಿ ಅವರು ‘ವರ್ತಮಾನದ ಸಂಕೀರ್ಣ ಸಂಗತಿಗಳನ್ನು ಖಾರವಾಗಿ ಚಿತ್ರಿಸುತ್ತ ಪ್ರಕೃತಿಯ ರಮ್ಯತೆಯಡೆಗೆ  ಮುಖಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಎ. ಬಿ. ಪಟೇಲ ಅವರು ಬೆನ್ನುಡಿ ಬರೆದು ‘ ಭಾವ ಜೀವಿಗಳು ಮಿಂದೇಳುವಂತೆ ಭಾಸವಾಗುತ್ತದೆ, ಜಾನಪದ ಶೈಲಿಯ ಕಾವ್ಯ ಅಲ್ಲಲ್ಲಿ ಇಣುಕಿ ನಾದಮಾಧುರ್ಯ ಹೆಚ್ಚಸಿದೆ" ಎಂದು ಶ್ಳಾಘಿಸಿದ್ದಾರೆ. 

About the Author

ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್
(26 July 1962)

ಲೇಖಕ ಅಬ್ಬಾಸ್ ಅಲಿ ಅಬ್ದುಲ್ ಸಾಬ್ ನದಾಫ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದವರು. ಎಂ.ಎ. ಕನ್ನಡ ಸ್ಮಾತಕೋತ್ತರ ಪದವೀಧರರು. ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ, ಕಲಬುರಗಿ ಸಾಹಿತ್ಯ ಮಂಟಪದ ಕಾರ್ಯದರ್ಶಿ, ಅಫಜಲಪುರದ ಸಾಹಿತ್ಯ ವೇದಿಕೆ ಕಾರ್ಯದರ್ಶಿ, ಅಫಜಲಪುರ ತಾಲೂಕಿನ ಕರಜಗಿಯಲ್ಲಿ ನಡೆದ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿ, ಕರ್ನಾಟಕ ಜನಪದ ಪರಿಷತ್ತಿನ ತಾಲೂಕು ಆಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ, ಮಾತೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದಾರೆ. ಕಲಬುರಗಿ, ಬೆಂಗಳೂರು ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕವಿಗೋಷ್ಠಿ, ...

READ MORE

Related Books