ಹಾಯ್‌! ಹಾಯ್‌ಕು...!!

Author : ರಾಮಚಂದ್ರ ಎಸ್.‌ ಕುಲಕರ್ಣಿ

Pages 72

₹ 50.00




Year of Publication: 2016
Published by: ಶ್ರೀಮತಿ ಶ್ರೇಯಸ್ವಿನಿ ರಾಮಚಂದ್ರ ಕುಲಕರ್ಣಿ

Synopsys

ಲೇಖಕ ರಾಮಚಂದ್ರ ಎಸ್.‌ ಕುಲಕರ್ಣಿ ಅವರ ಕನ್ನಡ ಹಾಯ್ಕುಗಳ ಸಂಗ್ರಹ ಕೃತಿ ʻಹಾಯ್!‌ ಹಾಯ್ಕು...!! ಪುಸ್ತಕದಲ್ಲಿ ಲೇಖಕರು “ಹಾಯಿಕು ಮುಖ್ಯವಾಗಿ 'ಜಗತ್ತು ಮತ್ತು ಜಗದಾತ್ಮ'ದ ನಡುವಿನ ಪಿಸು ಸಂಭಾಷಣೆ, ನಿಸರ್ಗ, ಪ್ರಕೃತಿಯೊಂದಿಗಿನ ತಾದಾತ್ಮ, ಶೋಧನೆ, ಸಾಹಚರ್ಯ, ಮುಗ್ಧತೆ, ವಿಸ್ಮಯ, ಸಾಮಾನೀಕರಣ... ಇತ್ಯಾದಿ ಇದರ ಮೂಲಧನ. ಹೇಳುವುದು ಸರಳ ಅಥವಾ ಬೇರೆಯದೇ ಆಗಿದ್ದರೂ ಅರ್ಥ ಗೋಪ್ಯ ಅಥವಾ ಬೇರೆಯದೇ ಆಗಿರಬಹುದು. ಕಿರಿದರಲ್ಲಿ ಪಿರಿದರ್ಥ ನೀಡದಿದ್ದರೆ ಅದು ಹಾಯ್ಕು ಅಲ್ಲವೇ ಅಲ್ಲ. ಅದರಲ್ಲಿ ನಿಸರ್ಗವಿರದೇ ಹೋದಲ್ಲಿ, ಅಂಥವಕ್ಕೆ 'ಹಾಯ್ಕು' ಎಂದು ಕರೆಯುವುದು ಸರಿಯಲ್ಲವೆಂಬ ಝೆನ್ ತತ್ವದ ಬಂಧವನ್ನೇ ಅಲಕ್ಷಿಸಿ, ಇತ್ತೀಚೆಗೆ ಮೂರು ಸಾಲಿನ ರಚನೆಗಳೆಲ್ಲವಕ್ಕೂ ಹಾಯಿಕು ಎಂದೆನ್ನತೊಡಗಿದ್ದಾರೆ. ಪ್ರತಿ ಹಾಯ್ಕೂ ಸ್ವತಂತ್ರ, ಅದರ ಶೀರ್ಷಿಕೆ ಅದರ ಗರ್ಭದಲ್ಲೇ ಗೂಢ. ಹಾಯ್ಕು ಕವಿ ಕೆಲವೇ ಶಬ್ದಗಳಿಂದ ಬಹಳಷ್ಟು ಚಿತ್ರಗಳನ್ನು ಏಕಕಾಲಕ್ಕೆ ಓದುಗರ ಮುಂದೆ ಹರಡುತ್ತಾನೆ. ಓದಿದ ಮೇಲೆ, ಹಾಯಿಕು ಬರೆಯುವುದು ತುಂಬ ಸರಳ ಎಂದೆನ್ನಿಸಿಬಿಡುವುದು ಇದರ ಒಂದು ವಿಶೇಷ. ಸಂಕ್ಷಿಪ್ತದಲ್ಲಿ ಹೇಳುವುದಿದ್ದರೆ, ಹೈಕುಗಳು ಝೆನ್ ತತ್ವ ಸಾರುವ, ವಿಶ್ವಕ್ಕೆ ಬುದ್ಧನ ವಿಚಾರಧಾರೆ ಕೊಡುವ, ಪ್ರಕೃತಿಯ ಸಂಕೀರ್ಣ ತತ್ವವನ್ನೊಳಗೊಂಡ ವಸ್ತು ವಿನ್ಯಾಸವನ್ನು ಅತ್ಯಂತ ಸರಳವಾಗಿ ಅರಳಿಸುವ ಪುಟ್ಟ ನೀರು ಗುಳ್ಳೆ. ಸಾಮಾನ್ಯ ಸಂಗತಿಯೇ ಇದ್ದರೂ, ಅದರಲ್ಲೇ ಮನಸ್ಸನ್ನು ಕೇಂದ್ರೀಕರಿಸಿ, ಅದರ ಮೂಲದಲ್ಲೇ ಅಂತಃಶೋಧನೆಗೆ ಅಣಿಯಾಗುವುದು ಇವುಗಳ ಉದಾತ್ತ ಉದ್ದೇಶ” ಎಂದು ಹೇಳಿದ್ದಾರೆ.

About the Author

ರಾಮಚಂದ್ರ ಎಸ್.‌ ಕುಲಕರ್ಣಿ

ರಾಮಚಂದ್ರ ಎಸ್.‌ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಪಿಯುಸಿಯಲ್ಲಿ ʻಅತ್ಯುತ್ತಮ ವಿದ್ಯಾರ್ಥಿʼ ರೋಲಿಂಗ್‌ ಶೀಲ್ಡ್‌ ಪಡೆದು ಮುಂದೆ ಧಾರವಾಡ ಕ.ವಿ.ವಿ. ಯಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಬ್ಯಾಂಕ್‌ ಸೇವೆಯಲ್ಲಿದ್ದ ಇವರು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಕುಲಕರ್ಣಿ ಅವರು, ಹಲವಾರು ಕೃತಿಗಳನ್ನು ಬರೆದಿದ್ದಾರೆ. ಅದರಲ್ಲಿ ಕಥಾಸಂಕಲನ, ಕವನ ಸಂಕಲನ, ಲಲಿತ ಪ್ರಬಂಧ, ವೈಚಾರಿಕ ಹಾಗೂ ವಿಮರ್ಶಾ ಲೇಖನಗಳು, ಹಾಗೂ ಮಿಡಿಗವನಗಳು ಸೇರಿವೆ. ಇವರ ʻಕಥೆಗಳಲ್ಲದ ಕಥೆಗಳುʼ ಸಂಕಲನಕ್ಕೆ ʻಅಪ್ಪʼ ಪ್ರಶಸ್ತಿ, ಮುಂಬೈನ ʻಗೋಕುಲವಾಣಿʼ ಯುಗಾದಿ ಕಥಾ ಸ್ಪರ್ಧೆಯಲ್ಲಿ ʻಸಕ್ಕರೆ ಬೊಂಬೆʼ ಕತೆಗೆ ಪ್ರಥಮ ...

READ MORE

Related Books