ಹೆಜ್ಜೆ ಗುರುತಿನ ಸಾಲು

Author : ರಾಮು ಎನ್ ರಾಠೋಡ್ ಮಸ್ಕಿ

Pages 92

₹ 100.00




Year of Publication: 2020
Published by: ಹೆಚ್.ಎಸ್. ಆರ್.ಎ ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560 058
Phone: 7892793054

Synopsys

ಕವಿ, ಲೇಖಕ ರಾಮು ಎನ್ ರಾಠೋಡ್ ಮಸ್ಕಿ ಅವರ ಕವನ ಸಂಕಲನ ‘ಹೆಜ್ಜೆ ಗುರುತಿನ ಸಾಲು’. ಈ ಕವನಸಂಕಲನಕ್ಕೆ ಹಿರಿಯ ಸಾಹಿತಿ ಮಂಡಲಗಿರಿ ಪ್ರಸನ್ನ ಮುನ್ನುಡಿ ಬರೆದಿದ್ದಾರೆ. ಕನಸಿಗೂ ಪ್ರೀತಿಗೂ ಅದೇನು ನಂಟು ಕನಸು ಪ್ರೀತಿಗಾಗಿಯೋ, ಪ್ರೀತಿ ಕನಸಿಗಾಗಿಯೋ… ಅವಳ ಭೇಟಿಯಾದ ದಿನದಿಂದಲೆ ನಿದ್ದೆಯ ಕದ್ದ ಕನಸಿನದೆ ಸದ್ದು...' (ಪ್ರೀತಿ-ಕನಸು) ಇಂತಹ ಶೃಂಗಾರಮಯ ಸಾಲುಗಳನ್ನು ಜೊಚ್ಚಲ ಕಾವ್ಯ ಸಂಕಲನ 'ಅಶ್ವಿನಿ ಅಮಲುಗಳು' ಮೂಲಕ ನೀಡಿದ ಕವಿಮಿತ್ರ ರಾಮು ರಾಠೋಡ ಪ್ರೀತಿ, ಪ್ರೇಮದ ಅಮಲಿನಿಂದ ಹೊರಬಂದು 'ಹೆಜ್ಜೆ ಗುರುತಿನ ಸಾಲು ಕಾವ್ಯ ಸಂಕಲನದಲ್ಲಿ ತಮ್ಮೊಳಗೆ ಹೊಸ ಕಾವ್ಯ ಸಂಘರ್ಷಕ್ಕೆ ಇಳಿದವರಂತೆ ಕಾಣುತ್ತಾರೆ. ಅವರ ಕಾವ್ಯ ಪಯಣದ ಹೊಸ ಹೆಜ್ಜೆಗಳು ಕವಿಯೊಬ್ಬನ ತಿರುವಿನ ಬಹುಮುಖ್ಯ ಘಟ್ಟ, ವೃತ್ತಿ ಮತ್ತು ಪ್ರವೃತ್ತಿಗಳೆರಡರಲ್ಲೂ ಭಿನ್ನವಾಗಿರುವ ರಾಮು ಈ ಸಂಕಲನದ ಮೂಲಕ ತಮ್ಮ ಕಾವ್ಯ ರಚನಾ ಕ್ರಮದಲ್ಲಿ ವಿಭಿನ್ನ ಅನುಭವಗಳನ್ನು ತೆರೆದಿಟ್ಟಿದ್ದಾರೆ. ತಾವು ಕಂಡ ವರ್ತಮಾನದ ಸ್ಥಿತಿಗತಿಗಳನ್ನ ಕಾವ್ಯವಾಗಿಸಲು ಹೊರಟು, ಕಲ್ಪನಾ ಜಗತ್ತಿನಿಂದ ಒಂದಷ್ಟು ದೂರ ಉಳಿದು ಸೂಕ್ತಮನಸಿನ ಭಾವನೆಗಳು, ವಾಸ್ತವ ಜಗತ್ತಿನ ಮೂಲಕ ಸಂವೇದನಾಶೀಲರಾಗಿರುವುದು ವಿಶೇಷ, ಕಾವ್ಯ ರಚನೆ ಕುರಿತಂತೆ ತಮ್ಮ ಯೋಚನಾ ಲಹರಿಯನ್ನು ಈ ಸಂಕಲನದ ಮೂಲಕ ಬದಲಿಸಿರುವಂತೆ ಕಂಡು ಬರುವ ರಾಮು ಕಾವ್ಯದ ಗಂಭೀರ ಹೆಜ್ಜೆ ಗುರುತುಗಳ ಸಾಲುಗಳನ್ನು ಈ ಸಂಕಲನದ ಕೆಲವು ಕವಿತೆಗಳಲ್ಲಿ ಕಾಣಬಹುದು: 'ಸಾಕಾಗಿ ಹರಿತ ನೀರಲ್ಲಿ ಬೆರೆತ ಅಪ್ಪನ ಕಣ್ಣೀರು...' (ಅಪ್ಪನ ಭೇಟಿಯ ಕ್ಷಣ) ಇಂತಹ ಕೆಲವು ಕಾವ್ಯದ ಸಾಲುಗಳು ಅವರ ಲೇಖನಿಯಿಂದ ಬಂದದ್ದು ಕವಿಯ ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಅವರ ಕಾವ್ಯಾಸಕ್ತಿ ಮತ್ತು ಕಾವ್ಯ ಕೃಷಿಯಲ್ಲಿನ ಗಂಭೀರತೆಗೂ ಸಾಕ್ಷಿಯಾಗಿದೆ.ರಾಮು ಅವರ ಸಾಮಾಜಿಕ ಕಳಕಳಿ, ಒಡನಾಟ, ತಮ್ಮ ಸುತ್ತಲಿನ ಘಟನೆಗಳನ್ನು ಸೂಕ್ತ ಮನಸಿನಿಂದ ನೋಡುವ ಪರಿ, ಒಬ್ಬ ಕವಿಯಾಗಿ ಅವೆಲ್ಲವನ್ನು ಗ್ರಹಿಸಿದ್ದರ ಫಲವೆ. ಇಂತಹ ಜೀವಪರ ಮತ್ತು ಕಾವ್ಯಪರ ಕವಿತೆಗಳನ್ನು ಕಟ್ಟಿಕೊಡಲು ಸಾಧ್ಯವಾಗಿದೆ ಎಂಬುದು ಮಂಡಲಗಿರಿ ಪ್ರಸನ್ನ ಅವರ ಮುನ್ನುಡಿಯ ಸಾಲುಗಳು..

About the Author

ರಾಮು ಎನ್ ರಾಠೋಡ್ ಮಸ್ಕಿ

ರಾಮು ಎನ್ ರಾಠೋಡ್ ಮಸ್ಕಿ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ.ಎಸ್. ಸಿ ಪದವೀಧರರು. ಇವರು ಕೆಪಿಟಿಸಿಎಲ್ ಇಲಾಖೆ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯ ಬರವಣಿಗೆ ಎಂದರೆ ಆಸಕ್ತಿ ಹೆಚ್ಚು. ಇವರು ಸಾಹಿತಿಗಳು ಮತ್ತು ಅಷ್ಟೇ ಉತ್ತಮ ಸಂಘಟನೆಕಾರರು ಹೌದು. ಇವರು ಕವಿವೃಕ್ಷ ಬಳಗ ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು. ಬಂಜಾರ ಭಾಷ ಸಾಹಿತ್ಯರ್ ವೇಲ್ ವೇಲ್ಡಿ ಸಂಘಟನೆಯ ರಾಜ್ಯ ಸಂಚಾಲಕರು ಮತ್ತು ಗೋರ್ ಬೋಲಿ ಸಾಹಿತ್ಯ ಪ್ರಕಾಶನದ ಮಾಲಿಕರಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅಶ್ವಿನಿ ಅಮಲುಗಳು ಕವನ ಸಂಕಲನ 2018, ಭಾವನೆಗಳ ಸಿಂಚನ ಸಂಪಾದಿತ ...

READ MORE

Related Books