ಬದರ್‌

Author : ಧನಪಾಲ ನಾಗರಾಜಪ್ಪ

Pages 128

₹ 100.00
Year of Publication: 2021
Published by: ಧನಪಾಲ ನಾಗರಾಜಪ್ಪ
Address: ನೆಲವಾಗಿಲು ಪೋಸ್ಟ್‌, ನಂದಗುಡಿ ಹೋಬಳಿ, ಹೊಸಕೋಟೆ ತಾಲುಕು ಬೆಂಗಳೂರು- 562122
Phone: 7892546523

Synopsys

ಲೇಖಕ ಧನಪಾಲ ನಾಗರಾಜಪ್ಪ ಅವರ ಅನುವಾದಿತ ಕೃತಿ.; ʻಬದರ್‌ʼ ಮೂಲ ತೆಲುಗು ಲೇಖಕ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಷೇಕ್ ಕರೀಮುಲ್ಲಾ. ಕೆಳ ಮತ್ತು ಮಧ್ಯಮ ವರ್ಗದ ಮುಸಲ್ಮಾನರ ಬದುಕಿನ ಬವಣೆಗಳೇ ಕುರಿತ 100 ಅಬಾಬಿಗಳನ್ನು ಒಳಗೊಂಡಿದೆ. ʻಅಬಾಬಿಗಳುʼ ಎಂಬುದು ಹೊಸ ರೀತಿಯ ಕಾವ್ಯ ಪ್ರಕಾರ. ಪ್ರತಿ ಅಬಾಬಿಯೂ ಐದು ಸಾಲುಗಳನ್ನು ಹೊಂದಿರುತ್ತವೆ. ಸಮಸ್ಯೆ, ವಿಷಯ ವಿಶ್ಲೇಷಣೆ, ವಿವರಣೆ, ಆತ್ಮಾವಲೋಕನ, ಸಂದೇಶ ಇಲ್ಲವೆ ವ್ಯಂಗ್ಯವಾದ ವಿಡಂಬನೆಯಿಂದ ಅಬಾಬಿಗಳು ಮುಗಿಯುತ್ತವೆ.

ಕೃತಿಗೆ ಬೆನ್ನುಡಿ ಬರೆದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ,ʻ ಅಬಾಬಿಗಳು ನಮ್ಮ ಮನದಾಳದ ಮತೀಯ ಮೌಢ್ಯ  ವರ್ಗ ಸಂಘರ್ಷಗಳ ಬೇರುಗಳನ್ನು ಕಿತ್ತು ಹಾಕಿ ಮಾನವೀಯತೆಯ ತಳಪಾಯದಲ್ಲಿ ನಿಲ್ಲುವ ನುಡಿಗಳಾಗಿವೆ. ಆತ್ಮಾವಲೋಕನ ಮತ್ತು ಆತ್ಮಾನುಸಂಧಾನದ ಮಾದರಿಗಳಾದ ಅಬಾಬಿಗಳು, ಹೊಸ ಚೈತನ್ಯಶೀಲ ಬದುಕಿಗೆ ದಾರಿದೀಪಗಳಾಗಿವೆʼ. ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಧನಪಾಲ ನಾಗರಾಜಪ್ಪ

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಲೀಂ ಅವರ ಆಯ್ದ ಹದಿನೈದು ತೆಲುಗು ಕಥೆಗಳನ್ನು ‘ಕಾಡುವ ಕಥೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವುದಲ್ಲದೆ ‘ಜೀವನ್ಮೃತರು’, ‘ಮೇಧ-017’ ಹಾಗೂ ಅಪರಾಜಿತ ಎಂಬ ಮೂರು ಕಾದಂಬರಿಗಳನ್ನು ಕೂಡಾ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಷ್ಟೇ ಅಲ್ಲದೇ ಒಂಬತ್ತು ಲೇಖಕರ ಆಯ್ದು ಇಪ್ಪತ್ತೈದು ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ‘ತಣ್ಣೀರ ಬಟ್ಟೆಯ ಬಿಸಿ’ ಎಂಬ ಹೆಸರಿನಲ್ಲಿ ಕಥಾ ಸಂಕಲನವಾಗಿ ಪ್ರಕಟಿಸಿದ್ದಾರೆ.  ...

READ MORE

Related Books