ಮೇಘನಾದ

Author : ಬಿ.ಎಚ್. ಶ್ರೀಧರ

Pages 72

₹ 1.00




Year of Publication: 1945
Published by: ಎಚ್.ಎಸ್. ದೊರೆಸ್ವಾಮಿ
Address: 868, 38ನೇ ಅಡ್ಡರಸ್ತೆ, ಜಯನಗರ 4ನೇ ಟಿ ಬ್ಲಾಕ್‌, ಬೆಂಗಳೂರು-560041

Synopsys

‘ಮೇಘನಾದ’ ಬಿ.ಹೆಚ್. ಶ್ರೀಧರ ಅವರ ಕವನಸಂಕಲನವಾಗಿದೆ. ಜೀವನದಲ್ಲಿ ಗೆಳೆತನಕ್ಕಿಂತ ಹೆಚ್ಚಿನದಿಲ್ಲ, ಪವಿತ್ರತರವಾದುದಿಲ್ಲ. ಮೈತ್ರಿ ಎಂಬುದು ಮಾನವನಿಗೆ ದೇವರು ಕೊಟ್ಟಿರುವ ಒಂದು ವರ. ಅದು ಆನಂದಗಂಗೆಯ ಅತ್ಯುಚ್ಚವಾದ ಉಗಮ. ಗೆಳೆತನವೆಂಬುದು ನನಗೆ 4 ಮುಧುರಾದಪಿಮಧುರತಂ’ ಎಂದು ಹೇಳಬಯಸುತ್ತೇನೆ. ಸಖ್ಯದಲ್ಲಿ ದಿವ್ಯತೆಯಿದೆ. ಶಾರೀರಿಕ ಸಂಬಂಧವು ಸ್ನೇಹವೃದ್ಧಿಗೆ ಅನಗತ್ಯ. ಸಂಸ್ಕೃತರಾದ ವ್ಯಕ್ತಿ ಗಳಿಗೆ ಪರಸ್ಪರರಲ್ಲಿ ಆತ್ಮೀಯತೆಯನ್ನು ಬೆಳೆಸಲು ರಕ್ತಸಂಬಂಧ -ಬೇಕಿಲ್ಲ; ಭಾವೈಕ್ಯ ಅಥವಾ ಸಹೃದಯತೆ | ಇದ್ದರೆ ಸಾಕು. “ಧಾತ್ರಿ ದೇವಿಯೆಡೆಯ ತೆನೆಯ ಸೊಬಗಿದು” ಎ೦ದು ಹಾಡಿರುವ ಈ ಕವಿಗಳ ಮೂವತ್ತೆರಡು ಕವನಗಳು ಈ ಸಂಗ್ರಹದಲ್ಲಿವೆ. ಈ ಕವನಮಾಲೆಯ ನಾಯಕರತ್ನದಂತೆ ಕಂಗೊಳಿಸುವ “ಸೌಂದರ್ಯ ಸೂಕ್ತದ ಒಂದು ಸಾಲಿನಿಂದ ಈ ಕೃತಿಗೆ "ಮೇಘನಾದ” ಎಂಬ ಹೆಸರು ಬಂದಿರುತ್ತದೆ. “ಬಾಗಿದ ಮೇಘದ ಘೆನತರ ಸರವೇ ಕೂಗುತ ತೆರೆ ತೆರೆ ತೆರೆಯುತ ಬಾರ!” ಎಂದು ಈ ಕವಿಗಳು ಸುಮಕೋಮಲೆಯಾದ ಸಾರಸ್ವತ ಸೌಂದರ್ಯ ಮೂರ್ತಿಗೆ ಆಹ್ವಾನವಿತ್ತಿದ್ದಾರೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Reviews

ಮೇಘನಾದ ಪುಸ್ತಕದ ಮಾಹಿತಿ(archive)

‘ಜೀವನ’ದ ವಾಚಕರಿಗೆ ಶ್ರೀಧರರ ಕವಿತೆಗಳು: ಅಪರಿಚಿತವಲ್ಲ. ಕರ್ಣಾಟಕ ನಂದನವನ. ಪ್ರಕೃತಿಗಿಲ್ಲಿ ಚಿರಯೌವನ. ಆತ್ಮ ಆತ್ಮ ಮಾತಾಡುವ ಮನೆಯಿದು. ಧಾತ್ರಿ ದೇವಿಯೆಡೆಯ ತೆನೆಯ ಸೊಬಗಿದು” ಎ೦ದು ಹಾಡಿರುವ ಈ ಕವಿಗಳ ಮೂವತ್ತೆರಡು ಕವನಗಳು ಈ ಸಂಗ್ರಹದಲ್ಲಿವೆ. ಈ ಕವನಮಾಲೆಯ ನಾಯಕರತ್ನದಂತೆ ಕಂಗೊಳಿಸುವ “ಸೌಂದರ್ಯ ಸೂಕ್ತದ ಒಂದು ಸಾಲಿನಿಂದ ಈ ಕೃತಿಗೆ "ಮೇಘನಾದ” ಎಂಬ ಹೆಸರು ಬಂದಿರುವಂತೆ ತೋರುತ್ತದೆ. “ಬಾಗಿದ ಮೇಘದ ಘನತರ ಸರವೇ ಕೂಗುತ ತೆರೆ ತೆರೆ ತೆರೆಯುತ ಬಾರ!” ಎಂದು ಈ ಕವಿಗಳು ಸುಮಕೋಮಲೆಯಾದ ಸಾರಸ್ವತ ಸೌಂದರ್ಯ ಮೂರ್ತಿಗೆ ಆಹ್ವಾನವಿತ್ತಿದಾರೆ.

ಸನ್ಮಿತ್ರರೇ ಬಾಳಿನ ಬೆಳಕು. ನಮ್ಮಲ್ಲಿ ದೇವರನ್ನು ಗೆಳೆಯನೆಂದು ಪೂಜಿಸುವುದುಂಟು. ಕೈಹಿಡಿದನಳಂತೂ ಬಾಳಿನ ಗೆಳತಿಯೇ ಆಗಿರುವಳು. ಹೊಟ್ಟೆಯಲ್ಲಿ ಹುಟ್ಟದ ಮಗನನ್ನೂ ಹೆದಿನಾರು ವರ್ಷಗಳು ತುಂಬಿದ ಮೇಲೆ ಗೆಳೆಯನಂತೆ ಕಾಣಬೇಕೆಂದು ನೀತಿ ಶಾಸ್ತ್ರ ಹೇಳುತ್ತದೆ. ಈ'ಮಾತುಗಳಿಂದ ಗೆಳೆತನ ಬಾಳಿನಲ್ಲಿ ಬಹಳ ಪವಿತ್ರವೂ ಅಮೂಲ್ಯವೂ ಪೂಜ್ಯವೂ ಆದ ಮಧುರ ಸಂಬಂಧ ಎಂದು ವ್ಯಕ್ತವಾಗುತ್ತದೆ.

ಧಾರವಾಡದ “ಗೆಳೆಯರ ಗುಂಪು” ಮಾಡಿರುವ ಕೆಲಸಗಳಲ್ಲಿ ಸಾಹಿತ್ಯ ಪ್ರೇರಣೆ ಮತ್ತು ಸಾಹಿತ್ಯ ಸಂಗ್ರಹ ಮುಖ್ಯವಾದವು. “ಅಂಬಿಕಾತನಯ ದತ್ತ”ರ ಮಿತ್ರವರ್ಗದಲ್ಲಿ .ಸೇರಿದ “ಶ್ರೀಢರ”ರ ಈ ಕವಿತಾ ಸಂಗ್ರಹ ಕನ್ನಡನಾಡಿನಲ್ಲಿ ಚಿರಕಾಲ ನಿಲ್ಲುವುದು ಎಂದು ಅದರ ಪರಿಶೀಲನೆಯಿಂದ ಧೈರ್ಯವಾಗಿ ಹೇಳಬಹುದು. “ಕವಿಕುಲಗುರು ಕಾಳಿದಾಸನ ಯಕ್ಷನು ಮೇಘದಮೂಲಕ ತನ್ನ ಗೆಳತಿಗೆ ಸಂದೇಶವನ್ನು ಕಳುಹಿಸಿದಾನೆ. ಆಳ್ವಾರುಗಳು ಮೋಡವನ್ನು ಕಂಡು ಪರವಶರಾಗಿ ಹಾಡಿದಾರೆ. ಆಂಡಾಳ್‌ ತಿರುಪತಿಯ ವೆಂಕಟೇಶನ ಬಳಿಗೆ ಮೋಡಗಳನ್ನು ದೂತರಾಗಿ ಕಳುಹಿಸಿದಾಳೆ. ಹೀಗೆ ಮೊದಲಿನಿಂದಲೂ ಕವಿಗಳಿಗೂ ಮುಗಿಲುಗಳಿಗೂ ಒಂದು ಬಗೆಯ ಅತ್ಮೀಯ ಸಂಬಂಧ ಕಂಡುಬರುತ್ತದೆ. “ಗೆಳೆತನದ ಮಧುಷಾನವನ್ನು ಮಾಡಿದ, ಮಾಡುತ್ತಿರುವ ಮತ್ತು ಎಷ್ಟು ಪಾನಮಾಡಿದರೂ ತಣಿಯದ ತನೇಕ ಮಗ್ನವಾದ ಹೃಯ?ವುಳ್ಳ *ಶ್ರೀಧರ?ರು ಸಹೃದಯ ನೇಹಿಗರಿಗೆ "ಆರ್ಪಿಸಿರುವ ಈ ಕಲಾಕೃತಿಗೆ ಮೇಘನಾದ ಎಂದು ಹೆಸರಿಟ್ಟರುವುದು ಉಚಿತವಾಗಿದೆ. “ನನ್ನ ನುಡಿಯಲ್ಲಿ ಕವಿಗಳು ಹಿರಿಮೆಯನ್ನೂ ಸಹೃದಯನಿಗಿರಬೇಕಾದ ಸಹಾನುಭೂತಿಯ ಲಕ್ಷಣವನ್ನೂ ಸ್ಪಷ್ಟವಾಗಿ ತಿಳಿಸಿದಾರೆ. ಮಿತ್ರರ ಸುಧಾಸ್ಯಂದಿಯಾದ ಸಹೃದಯತೆಯಿಂದ? ರಸಿಕರೆಲ್ಲರ ಜೀವಗಳೂ ಬೆಳಕನ್ನು ಕಂಡು ಚೆಲುವಿನ ಸವಿಯನ್ನುಂಡು ಆನಂದದ ಕಡಲಿನಲ್ಲಿ ಈಸಾಡುತ್ತವೆ. ಇಂತಹ ಸುಂದರವಾದ ಗೀತೆಗಳ ಮಾಲೆಗಳನ್ನು ಹೆಣೆದು ಸಹೃದಯರಿಗೆ ನೀಡುತ್ತಾ “ಶ್ರೀಧರ”ರು ಚಿರಕಾಲ ಕನ್ನಡ ನುಡಿಯ ದೇವಿಯ ಸೇವೆಗೈಯುತ್ತಿರಲಿ!.

‘ಮೇಘನಾದ’ ದಲ್ಲಿ ಕಂಡುಬರುವ ಕಲ್ಪನಾವಿಲಾಸವೂ ಶಬ್ಧಸಂದರ್ಭವೂ ಶೈಲಿಯ ಸರಳತೆಯೂ ರಸಿಕರ ಮನವನ್ನು ಬೇಗೆ ಸೆಳೆಯುತ್ತವೆ. ಛಂದೋವೈವಿಧ್ಯದಂತೆಯೇ ಹಳಗನ್ನಡದ ಆದಿಪ್ರಾಸವೂ ಹೊಸಗನ್ನಡದ ಅಂತ್ಯಪ್ರಾಸವೂ ಇದರ ಕವನಗಳಲ್ಲಿ ಸಮರಸವಾಗಿ ಬೆರೆತಿವೆ. ಈ ಕವನಗಳನ್ನು ಸ್ನೇಹಗೀತೆಗಳು, ಪ್ರಕೃತಿಗೀತೆಗಳು, ಶಿಶುಗೀತೆಗಳು ಮತ್ತು ರಾಷ್ಟ್ರಗೀತೆಗಳೆಂದು ಐದು ಪಂಗಡಗಳಾಗಿ ವಿಂಗಡಿಸಬಹುದು. ಅನೇಕ ಕವಿತೆಗಳಲ್ಲಿ ದಿನದ ಬಳಕೆಯ ಮಾತಿನಲ್ಲಿ ಉದಾತ್ತ ಭಾವನೆಗಳು ರಮ್ಯವಾಗಿ ವರ್ಣಿತವಾಗಿರುವ ಈ ಕವನ ಮಾಲೆ ಎಲ್ಲರಿಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಕವಿತೆಗಳು ಎಷ್ಟಿದ್ದರೂ ಬೇಕು.  ಕೆಲವು ಸುಂದರವಾದ ಸೂಕ್ತಿಗಳನ್ನಿಲ್ಲಿ ಉದಾಹರಿಸಬಹುದು.

“ಎಷ್ಟು ಫಲನಿರಲೇನು? ನಿಧಿಬಂದವುಂತಿದರೆ
ಕೆಟ್ಟ ನರ, ಹರಹರಾ, ಹೇಳಲೇನು !

ದೇವ ಧರ್ಮವಿಚಾರ ಸತ್ಯತೆ ಸದಾಚಾರ.
ಯಾವುದಿದ್ದರು ಉಂಡ ಹೊಟ್ಟೆಗೆಲ್ಲ.

 ಮಧುರ ಮಧುರ ಮಧುರ ಮಧುರ ಮೈತ್ರಿಯೊಂದೆ ಮಧುರ
 ಆದರ ನುಡಿಯ ಸನಿಯದನನು ಕಿವಿಯದ್ದೂ ಬಧಿರ

ಆಪ್ತ ಜೀವದ ನೆಚ್ಚಿಗಿಂತಮೃತ ಬೇರಿಲ್ಲ;
ಆದನುಂಡು ತಣಿ ಜೀವಿ, ಹಾರಿಲ್ಲಡೊಡೆ;ಭಾವಿ,
ಆದೆ ಭುಕ್ತಿ ಅದೆ ಶಕ್ತಿ, ಆದೇ ಜೀವನಾಧಾರ,
ಮುದವೀವ ಮಂದಾರ ಕಮಲಿನೀಕಾಸಾರ
ಅದು ಲಭಿಸೆ ಬಾಳು ಹೊಂಬಾಳು; ಕಳೆದೊಡೆ ಹಾಳು!

ಕೊಂದು ತಿನ್ನು ನ ಹುಲಿಗೆ ದಯೆಯನುಪದೇಶಿಸಲಕಿ ಫಲನೇನು? ...
ದಂತವಳಿದರು ದರ್ಪನಳಿದೀತೆ ಸರ್ಪಕ್ಕೆ ?

ಆಳಿನಂಟು ಬೇಕೆಂದೊಡೆಲ್ಲಿಲ್ಲಿಯೂ ಉಂಟು,
ಉಳಿನಂಟು ದಿನಿಜರಿಗು ವಿರಳವೈ.

ಎವೆಯಿಕ್ಕದೆಳನೀರ ನೋಡೆ ರುಚಿ ತಿಳಿದೀತೆ?
ಕವಿಯಾದರನನ ಹೆಚ್ಚೇನು?
ನವನನೋನ್ಮೇಷಶಾಲಿಗಳಿಗೂ ಅನುಭವದ
ಕವನಕಾರರ ಮಾತೆ ಜೇನು!

ಬಲು ಹೆದರಿ ಹೆದರಿ ನಡೆವಾತ ಸಾವನಕ
ಹೆದರಿ ಸಾಯಬೇಕು.

ಈ ಪ್ರಕೃತಿಯನ್ನು ಗೆದ್ದಾಳ ಬಯಸುವಗೆ
ಪುರುಸಕಾರ ಬೇಕು;
ಸ್ವಪ್ರಕೃತಿಯಾದ ದುರ್ದಮ್ಕ, ತೇಜವನು
ಬೆಳಗಿ ತೋರ ಬೇಕು!

ಮೇಘನಾನದ ಮೊದಲ ಗೀತೆ “ಗುರುವಿನ ಅಡಿದಾನರೆಯಸಲ್ಲಿ ಎಂಬುದು, “ಅಂಧಕಾರದಲಿ ಮಿಂಚು ಮೂಡಿ ಬರುವಂತೆ ಬಂದ ಬಂಧು”ವಾದ ಗುರುವನ್ನು “ಹುರುಪೆ ಇಲ್ಲದೀ ತಿರುಪೆ ಬಾಳಿನಲ್ಲಿ” ಮರೆಹೊಕ್ಕು ಈ ಕವಿ “ಕವಿ ಕಮಲೋದ್ಭವ ಭಾಮಿನಿಗೆ ಆಹ್ವಾನವೀಯುತ್ತಾರೆ. ಆಕೆಗೆ ಭಾವನೆ ನಗೆ, ಮೇಣ್‌ ನವರಸನೆ ಒಳಬಗೆ, ಜೀವದುಸಿರು ಪ್ರತಿಭಾಶಕ್ತಿ, ಹಾವವೆ ಸುಂದರ ಶೈಲಿ, ವಿಭೂಷಣ ಭೂಷಣ, ಗುಣವರ್ಥವ್ಯಕ್ತಿ”. ಆಕೆ ಯೋಗಿಗಳು ಧ್ಯಾನದಿಂದ ಪಡೆಯುವ ಸುಖವನ್ನು ಸಹೃದಯರಿಗೆ ಸುಲಭವಾಗಿ ದೊರೆಕಿಸಿಕೊಡುವಳು. ಕವಿ ‘ಪುಟ್ಟದೊಂದು ಪಟ್ಟನದಲ್ಲಿ ತನ್ನ ಪುಟ್ಟ ಬಾಳ ಬೆಳಗಿ ದಿಟ್ಟತನದಿ ಸರಸವಾಡುತ” ಇದ್ದುವನ್ನೊಂದು ಪದ್ಯ ರಮ್ಯವಾಗಿ ವರ್ಣಿಸುತ್ತದೆ. ಬಾಳಿನಲ್ಲಿ ಏರಿಳಿತಗಳು ಸಹಜವೆಂದು ಸೋದಾಹರಣವಾಗಿ “ಎಷ್ಟು ಛಲನಿರಲೇನು . . ..” ಎಂಬ ಕವನ "ತಿಳಿಸುತ್ತದೆ. “ಜೀವ ಜೀವಕೂ ನಂಟನು ಬೆಸೆಯಲು ಬಾರ ಬಾ ಮನವೆ ದುಂಬಿಯೊಲು? ಎಂದು "ಮನದುಂಬಿ?ಗೆ ಕವಿ ಪ್ರಾರ್ಥಿಸುತ್ತಾರೆ. “ಹಳೆಯ ಜೀವನ ಸೂತ್ರ ಹರಿದು ಹಾಳಾಯ್ತು; ಹುಳಿತು ಹಳಸಿದ ಹಿಟ್ಟಿನಂತೆ ಬಾಳಾಯ್ತು. ತುಕ್ಕುಹಿಡಿದಿದೆ ಬುದ್ಧಿಯಲಗು, ಸಿಕ್ಕದಾಯ್ತು ತ್ಯಾಗಬಲೆಗು. ... .ಪ್ರಾಣನರೆಯಾಯ್ತು ; ಪುರುಷಾರ್ಥ ಸುಕ್ಳಾಯ್ತು ಕಾಲಾಣೆ ಔಲೆಗಿಳಿಯಿತೇ ಜೀವನದ ವರ್ತನೆಯು” ಎಂದು ಮರುಗಿ “ಫೆಲೆನಿಂತ ಕೊಳೆಸೀರ ತೊಳೆಬೀಸಿ” ಎಂದು ಬಿರುಗಾಳಿಗೆ ಕವಿ ಆಹ್ವಾನವೀಯುತ್ತಾರೆ. “ಕಟ್ಟು ಕಟ್ಟಳೆಯೆಲ್ಲ ಬೇಕು; ಆದರೂ ಗುಟ್ಟಿರಿದು ಬದಲಿಸಲು ಬೇಕು” ಎಂದು ಈ ಕವಿಗಳ ಸೂತ್ರ ನವಭಾರತದ ಪುನರುಜ್ಜೀವನದ ಝುಂಝಾವಾತದ ಸಂದೇಶವನ್ನು ಸಾರುತ್ತದೆ.

“ಎದೆಯ ರಾಣಿಗೆ?” ಎಂಬ ಕವಿಕೆ ವಿರಹದುರಿಯಿ೦ದ ಬೆಂದ ನಲ್ಲನ ಅಳಲನ್ನು ನೋಡಿದರೆ ಅದರ ಮುಂದಿನ “ದೀನ ಲಕ್ಷ್ಮಿಯೆ ಬಾರ? ಎಂಬ ಗೀತೆ ನಮ್ಮ ನಾಡಿನ ಬಡತನದ ಚಿತ್ರವನ್ನು ಕಣ್ಮುಂದೆ ನಿಲ್ಲಿಸಿ ಓದುಗರೆ ಮನವನ್ನು ಕರಗಿಸುತ್ತದೆ. “ಈ ಜಗದ ಬೆಳಕೆಂಬ ಕತ್ತಲೆಯ ಕಂಡು ಮನ ಸೋತು ಮುದನೆಂದು” ಕುಗ್ಗದೆ ಆಡಿದನೆರಿಗೆ ಅದು “ಮುದದ ನೆರಳೆಂದುನೊಂದು ಮಿಡುಕುವ ಪಾಡು ಬಂತು”. ಆಗ ಕವಿ ಹೀಗೆ ಹೇಳುತ್ತಾ ಮರುಗುತ್ತಾರೆ.

“ದೀನ ಲಕ್ಷ್ಮಿಯೆ ಬಾರ, ದಯೆಯ ಭಿಕ್ಷುಕ ಕರೆವ
ಕಾನನನೆ ಗತಿಯೆಮಗೆ ಪೋಪ ಬಾರ;
ಮಾನವಂತರ ಜಗವು ನಮಗಲ್ಲ; ನಮಗಿಲ್ಲ
ಹೀನತೆಯ ತಿರಿದುಂಬ ತಂಗಿ ಬಾರ!

 “ಅಯ್ಯೊ ನನ್ನ ಮೆಚ್ಚುಗಳಿರಾ! ನಿಮ್ಮೊಳೊಬ್ಬ ಗೆಳತಿಯನ್ನು ಬರುವನಂತೆ ನೋಡಲು ವರ. ಜೀವನದಲ್ಲಿ ಇದೇ ಮಧುರ ಬೇರೊಂದಿಲ್ಲ” ಎಂದು ಒಂದು ಗೀತೆಯಲ್ಲಿವರು ಪ್ರಿಯರ ಪ್ರಥಮಸಂದರ್ಶನದ ಸುದ್ದಿಯನ್ನು ಕೇಳಿ ಹಿಗ್ಗಿ ನುಡಿದಿರುವರು. “ಅಂಟಿಗೆ` ಅಂಟಾಗಿ ಹುದೀ ಮನವೆರಡರ' ಬೆಸುಗೆ” ಎಂದು ಹಾಡಿರುವ ಈ ಕವಿ ಮಿತ್ರರಸಿಕನಿಗೆ ಮರೆಯಲಾರದ ಮಾತುಗಳಲ್ಲಿ ಚೆಲುವಿನ ಬೀಡನ್ನು ಹೀಗೆ ವರ್ಣಿಸಿದ್ದಾರೆ.

“ಎಲ್ಲಿ ಹೃದಯಕೊಂದು ಹೃದಯರಾಗ ಬಂಧ ಬೆಸೆಯತಿಹುದೋ
ಅಲ್ಲಿ ತೆರಳು ರಸಿಕ, ಬರುವೆ ಇಲ್ಲಿಗೇತಕೆ?
ಸೊಗವ ಹಾಸಿ ಒಲವ ಬೀಸಿ ನಲವನುಣಿಸಿ ದಣಿವ ಹರಿಸಿ
ಮೊಗವ ಮಿಂಚಿ, ಹೊಂಚುಕಾಂಬ ಕಂಗಳಿರುವೆಡೆ
ಜಅಂತರಂಗಕುಂದಕುಸುಮವಂತು ಅರಳುತಿರುವುದೆಲ್ಲೊ,
ಹಳ್ಳಿಯೂರ ಮುಗಿಲು ತೆಳ್ಳತೆಳ್ಳಗಾಡೆ ಬರುವುದೆಲ್ಲೊ
ಒಳ್ಳಲಾಕೆಯಾತ ಸಕ್ಕರೆಯನು ಸನಿವನೆಲೊ;
ಅಲ್ಲಿ ತೆರಳು ರಸಿಕ, ಬರುನೆ ಇಲ್ಲಿಗೇತಕೆ?...

- ಆ.ನ.ಶ್ರೀ 

Related Books