ಕೊನೆಯ ಪುಟದ ಸಾಲು

Author : ದುರುಗಪ್ಪ ಗುಡದೂರು

Pages 104

₹ 90.00
Year of Publication: 2021
Published by: ಶ್ರೀ ಶಾರದ ಪ್ರಕಾಶನ
Address: #6-1-122, ಶ್ರೀ ಶಿವ ನಿಲಯ, ಕೋಟೆ ನ್ಯೂ ಸಿಎಂಸಿ, ರಾಯಚೂರು ಜಿಲ್ಲೆ, ಸಿಂಧನೂರು-584128
Phone: 9686840266

Synopsys

’ಕೊನೆಯ ಪುಟದ ಸಾಲು’ ಕೃತಿಯು ದುರುಗಪ್ಪ ಗುಡದೂರು ಅವರ ಕವನಸಂಕಲನವಾಗಿದೆ. ಇಲ್ಲಿ ಹಳ್ಳಿಯು ಕಣ್ಣೀರಿಡುವ, ಅನ್ನದಾತನ ಅನಾಥ ಸ್ಥಿತಿ, ಅವ್ವನ ಆತಂತ್ರ ಬದುಕು, ಪ್ರಕೃತಿಯ ಮುನಿಸು, ರಾಜಕೀಯ ದೊಂಬರಾಟ, ಅಧಿಕಾರದ ದಾಹಕ್ಕಾಗಿ ನಡೆಯುವ ಅನಾಚಾರಗಳ ಬಗ್ಗೆ ಕವಿಯಲ್ಲಿ ಮರುಕವಿದೆ. ಸಿಟ್ಟಿದೆ, ಆಕ್ರೋಶದ ಜೊತೆ ಆಲೋಚನೆಯೂ ಇದೆ. ಕೊನೆಯ ಪುಟದ ಸಾಲಿನ ಕವಿತೆಯೊಂದು ಹೀಗಿದೆ. ಬದುಕಿರುವಷ್ಟು ದಿನ ನಿಸ್ವಾರ್ಥದಿ ಸಾಗಲಿ ಅರ್ಥದಲ್ಲಿ ಕೊನೆಯಾಗಲಿ ಕತೆ ಕೊನೆಯ ಪುಟ ಆಗದಿರಲಿ ವ್ಯಥೆ. ಈ ರೀತಿಯಾಗಿ ಕವಿಯು ಬದುಕಿನ ಮಜಲುಗಳನ್ನು ತೆರೆದಿಡುತ್ತಾರೆ.

About the Author

ದುರುಗಪ್ಪ ಗುಡದೂರು

ದುರುಗಪ್ಪ ಗುಡದೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಡದೂರಿನವರು. ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು ಗೋನಾಳದಲ್ಲಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುತ್ತಾರೆ. ಸಿಂಧನೂರಿನ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಕೊನೆಯ ಪುಟದ ಸಾಲು ...

READ MORE

Related Books