ಅರಿವು

Author : ಕುಂಸಿ ಯೋಗೇಶ್

Pages 180

₹ 150.00
Year of Publication: 2017
Published by: ಜಾಗೃತಿ ಪ್ರಿಂಟರ್‍ಸ್‌
Address: ನರಸಿಂಹಯ್ಯ ಗಾರ್ಡನ್‌, ಕೋಟಿಗೆ ಪಾಳ್ಯ, ಬೆಂಗಳೂರು 560061
Phone: 9740066842

Synopsys

”ಅರಿವು’ ಕುಂಸಿ ಯೋಗೇಶ್‌ ಅವರ ಕವನ ಸಂಕಲವಾಗಿದೆ. ಈ ಸಂಕಲನದಲ್ಲಿ ಒಟ್ಟು 101 ಕವನಗಳಿವೆ. ಯೋಗೇಶ್ ಅವರ ಕವಿತೆಗಳು ಸಾಮಾಜಿಕ ಬದ್ಧತೆಯ ಹಿನ್ನೆಲೆಯ ಅನುಭವಗಳ ಆಧಾರದಿಂದಲೇ ರಚಿತಗೊಂಡಿವೆ. ಯೋಗೇಶ್ ಅವರ ಕವಿತೆಗಳನ್ನು ಓದಿ ಮುಗಿಸಿದ ಮೇಲೆ ಇವರ ಮುಂದಿನ ಹೆಜ್ಜೆಗಳು ಎತ್ತ ಸಾಗುತ್ತವೆ ಎಂಬ ಕುತೂಹಲ ಮೂಡದೇ ಇರುವುದಿಲ್ಲ. ಯೋಗೇಶ್ ಆದರ ಕೆಲವು ಕವಿತೆಗಳಿಗೆ ರಾಗ ಮಾಡಿದರೆ, ಒಳ್ಳೆಯ ಭಾವಗೀತೆಗಳಾಗಿ ಹಾಡಿಸಿಕೊಳ್ಳುತ್ತವೆ. ಯೋಗೇಶ್ ಮುಂದಿನ ದಿನಗಳಲ್ಲಿ ಒಳ್ಳೆ ಕವಿತೆಗಳನ್ನು ರಚಿಸುವುದರ ಜೊತೆಗೆ ಇತರೆ ಸಾಹಿತ್ಯ ಪ್ರಕಾರಗಳಲ್ಲೂ ಕೈ ಆಡಿಸಿ ಯಶಸ್ವಿಯಾಗಲಿ ಡಾ. ಎಂ.ವೆಂಕಟಸ್ವಾಮಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕುಂಸಿ ಯೋಗೇಶ್

ಕುಂಸಿ ಯೋಗೇಶ್ ಅವರು ಶಿವಮೊಗ್ಗ ತಾಲ್ಲೂಕಿನ ಕುಂಸಿಯವರು. ಅವರು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಲ್ಲಿ ಸಹಾಯಕ ಸರ್ವೇಕ್ಷಣಾ ಅಧಿಕಾರಿಯಾಗಿದ್ದಾರೆ. ಕೃತಿ: ಅರಿವು ...

READ MORE

Related Books