ಮತ್ತೆ ಮತ್ತೆ ಗಾಂಧಿ

Author : ಹೆಬಸೂರ ರಂಜಾನ್Year of Publication: 2021
Published by: ಉತ್ತರ ಪ್ರಕಾಶನ
Address: ಕೃಷ್ಣಾ ನಗರ, ಎ.ಪಿ.ಎಂ.ಸಿ ಹತ್ತಿರ, ಜಕ್ಕನಕಟ್ಟಿ. ತಾಲೂಕು ಶಿಗ್ಗಾಂವ, ಜಿಲ್ಲೆ ಹಾವೇರಿ
Phone: 8951133981

Synopsys

’ಮತ್ತೆ ಮತ್ತೆ ಗಾಂಧಿ’ ಕೃತಿಯು ಹೆಬಸೂರ ರಂಜಾನ್ ಅವರು ಸಂಪಾದಿಸಿದ ಅಂಥಾಲಜಿ (ಕವಿತೆಗಳ ಸಂಗ್ರಹ) ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್. ಎಸ್. ಸತ್ಯನಾರಾಯಣ ಅವರು, ಪುರಾಣದ ಪಾತ್ರಗಳು ನಮ್ಮ ಸೃಜನಶೀಲರನ್ನು ಕಾಡಿದಂತೆ ಗಾಂಧಿ ಎಂಬ ಚೇತನವೂ ತನ್ನ ಆಯಸ್ಕಾಂತೀಯ ಚೈತನ್ಯ ಶಕ್ತಿಯಿಂದ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಆಧುನಿಕ ಕನ್ನಡ ಕಾವ್ಯ ಕಂಡಿರಿಸಿದ ಗಾಂಧಿ ಕುರಿತ ಕಾವ್ಯ ಸಂಖ್ಯೆಯಲ್ಲಿಯೂ ಗುಣಮಟ್ಟದಲ್ಲಿಯೂ ವಿಫುಲವಾಗಿಯೇ ಇದೆ. ಮೊದಲ ಮೂರು ತಲೆಮಾರಿನ ಗಾಂಧಿ ಕುರಿತು ರಚಿಸಿದ ಕವಿತೆಗಳನ್ನು ಈಗಾಗಲೇ ಪ್ರತ್ಯೇಕವಾದ ಕವಿತೆಗಳ ಸಂಗ್ರಹದಲ್ಲಿ (ಅಂಥಾಲಜಿ) ಕಂಡಿದ್ದೇನೆ. ಅನಂತರದ ತಲೆಮಾರಿನಲ್ಲಿಯೂ ಗಾಂಧಿ ಬಗೆಗಿನ ಪ್ರತಿಕ್ರಿಯೆಗಳು ಹೇಗಿರುತ್ತವೆಂಬ ಕುತೂಹಲವನ್ನು ತಣಿಸುವಂತೆಯೂ, ಅಭ್ಯಾಸಿಗಳಿಗೊಂದು ಉಪಯುಕ್ತ ಆಕರಗ್ರಂಥವಾಗಿಯೂ ಪ್ರಸ್ತುತ ರಂಜಾನ್ ಹೆಬಸೂರು ಅವರು ಶ್ರದ್ದೆಯಿಂದ ಸಿದ್ಧಪಡಿಸಿರುವ ಈ ಅಂಥಾಲಜಿ ಇದೆ. ನೂರೈವತ್ತಕ್ಕೂ ಹೆಚ್ಚು ಜನ ಪ್ರತಿಭಾಶಾಲಿ ಕವಿಗಳು ಗಾಂಧಿಯನ್ನು ಕುರಿತು ಬರೆದಿರುವ ರಚನೆಗಳನ್ನು ಹೀಗೆ ಒಂದೆಡೆ ನೋಡುವುದೇ ಆನಂದ. ವರ್ತಮಾನದ ಕಣ್ಣಲ್ಲಿ ಗಾಂಧಿಯನ್ನು ಅರಿಯುವ, ಒಳಗು ಮಾಡಿಕೊಳ್ಳುವ, ವಿಶ್ಲೇಷಿಸುವ, ವಿಮರ್ಶಿಸುವ ಮೂಲಕ ಹಿಂದಿನ ತಲೆಮಾರಿನವರ ಆರಾಧನಾ ಮನೋಭಾವದ ಚೌಕಟ್ಟಿನಿಂದ ಗಾಂಧಿ ಬಿಡುಗಡೆಗೊಂಡಿರುವುದು ಹೊಸಬರ ರಚನೆಯಲ್ಲಿ ಎದ್ದು ಕಾಣುವ ಸಮಾಧಾನದ ಸಂಗತಿ. ಇಂತಹದ್ದೊಂದು ಸಂಕಲನ ಖಂಡಿತವಾಗಿಯೂ ಮುಂದಿನ ಪೀಳಿಗೆಗೆ ಗಾಂಧಿಯನ್ನು ಸಮರ್ಥವಾಗಿ ಪ್ರಸ್ತುತವಾಗಿಸುವಲ್ಲಿ ಸಹಕಾರಿಗುತ್ತದೆ. ಮಾತ್ರವಲ್ಲದೇ ಆ ತಲೆಮಾರಿನ ಕವಿಗಳಿಗೂ ಹೊಸ ಬಗೆಯ ಅನುಸಂಧಾನಕ್ಕೆ, ಅಧ್ಯಯನಕ್ಕೆ ಹೊಸ ದಾರಿಗಳನ್ನು ತೆರೆಯಬಹುದೆಂಬುದರಲ್ಲಿ ಸಂಶಯವಿಲ್ಲ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಹೆಬಸೂರ ರಂಜಾನ್
(22 July 1981)

ಕವಿ ಹೆಬಸೂರ ರಂಜಾನ್ ಅವರು (ಜನನ: 1981 ಜುಲೈ 22) ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರಿನವರು. ಹುಟ್ಟೂರಿನಲ್ಲಿ ಪ್ರಾಥಮಿಕ ದಿಂದ ಪ.ಪೂ. ಶಿಕ್ಷಣ ನಂತರ ಹುಬ್ಬಳ್ಳಿಯ  ಶ್ರೀ ಕಾಡಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ, ಕ.ವಿ.ವಿ.ದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಶಿಗ್ಗಾಂವ್ ಪ.ಪೂ.ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ‘ನೆನಪು ತಂತಿ ಮೀಟುತ್ತಿತ್ತು’ ಅವರ ಮೊದಲ (2006) ಕವನ ಸಂಕಲನ. ‘ಅಂತರಂಗದ ಮೃದಂಗ’ ಅವರ ಎರಡನೇ ಕವನ ಸಂಕಲನ. ಹಾವೇರಿ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ‘ಮಂಜಿನೊಳಗಣ ಕೆಂಡ’ ಅವರ ಇತ್ತಿಚಿನ ಕೃತಿ. ...

READ MORE

Related Books