ಭಾವಲಹರಿ

Author : ಡಿ. ಪದ್ಮನಾಭ

Pages 94

₹ 110.00




Year of Publication: 2018
Published by: ಹೆಚ್. ಎಸ್. ಆರ್. ಎ ಪ್ರಕಾಶನ
Address: ಬೆಂಗಳೂರು
Phone: 9741731582

Synopsys

ಡಿ ಪದ್ಮನಾಭ ಅವರ ಕವನ ಸಂಕಲನ ‘ಭಾವಲಹರಿ’. ಎಲ್ಲ ವಯೋಮಾನದವರೂ ಮೆಚ್ಚಿಕೊಂಡ ಕವನಸಂಕಲನ ಇದು.ಕೇವಲ ಮನರಂಜನೆಯನ್ನೇ ಗುರಿಯಾಗಿಟ್ಟುಕೊಳ್ಳದೆ ಸಾಂಸ್ಕೃತಿಕ ಹಿರಿಮೆಯ ಬಗ್ಗೆಯೂ ಸರಳಶಬ್ದಗಳಲ್ಲಿ ತಿಳಿಸಬೇಕೆಂಬ ಉದ್ದೇಶದಿಂದ ಬರೆದ ಕವನಗಳು ಇಲ್ಲಿವೆ. ಸರ್ಪಯಾಗ, ಮಹಾಭಾರತದ ಕಿರುನೋಟ, ರಾಜಸೂಯ ಯಾಗ, ನಳದಮಯಂತಿ, ಶ್ರೀರಾಮನ ಬಾಲ್ಯಲೀಲೆ, ಶಕ್ತಿಪೀಠಗಳ ಹಿನ್ನೆಲೆಯ ಕಥೆ, ರಾಧೆಯ ನಂಬಿಕೆ, ಊರ್ಮಿಳಾ ಸ್ವಗತ, ದಾನವೀರ ಕರ್ಣ, ಏಕಲವ್ಯ ಇನ್ನೂ ಅನೇಕ ಕವನಗಳು ನಮ್ಮ ಪೌರಾಣಿಕ ಕಥೆಗಳನ್ನು ಸರಳ ಶಬ್ದಗಳಲ್ಲಿ ಕಣ್ಣ ಮುಂದೆ ಇರಿಸಿವೆ. ದೀಪ ಹಚ್ಚು ಬಾ ಗೆಳತಿ, ಪ್ರೇಮದೇವಿಯ ಮಾತು, ನೀಲಿಬಾನಲಿ , ಹೇಳು ಗೆಳತಿ, ವಧುವ ನೋಡಲು ಈ ರೀತಿಯ ಕವನಗಳು ಯುವಮನದ ತುಡಿತಗಳು. ಹಲವು ಚುಟುಕುಗಳು ಹಾಸ್ಯ ಪ್ರಿಯರಿಗಾಗಿ, ನೀತಿಬೋಧಕ ರಂಜನೀಯ ಹಾಡಲು ಯೋಗ್ಯವಾದ69 ಕವನಗಳು ಇಲ್ಲಿವೆ.

About the Author

ಡಿ. ಪದ್ಮನಾಭ
(06 February 1966)

ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...

READ MORE

Related Books