ಬೆಡಗಿನ ನವಿಲುಗರಿ

Author : ಆಶಾ ಶಿವಾನಂದ ಯಮಕನಮರಡಿ

Pages 84

₹ 80.00
Year of Publication: 2013
Published by: ಆದಿತ್ಯ ಪಬ್ಲಿಕೇಷನ್ಸ್,
Address: ಎಲ್ ಐಜಿ-49, ಮಹಾಂತೇಶನಗರ, ಬೆಳಗಾವಿ

Synopsys

ಬೆಡಗಿನ ನವಿಲುಗರಿ-ಲೇಖಕಿ ಆಶಾ ಶಿವಾನಂದ ಯಮಕನಮರಡಿ ಅವರ ಕವನ ಸಂಕಲನ. ಸಾಮಾಜಿಕ ವಿದ್ಯಮಾನಗಳು ಇಲ್ಲಿಯ ವಸ್ತು ವೈವಿಧ್ಯತೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಜಲತ್ಕುಮಾರ ಪುಣಜಗೌಡ ‘ತೀವ್ರ ಸಂವೇದನೆಯ ಕವಿತೆಗಳು ಕವಯಿತ್ರಿಯ ಅಂತಃಸತ್ವದ ಸಂಕೇತವಾಗಿದ್ದು, ಕಾವ್ಯಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ’ ಎಂದು ಪ್ರಶಂಸಿಸಿದ್ದರೆ, ಬೆನ್ನುಡಿ ಬರೆದ ಸಾಹಿತಿ ಎಲ್.ಎಸ್. ಶಾಸ್ತ್ರಿ ‘ಬೆಡಗಿನ ನವಿಲುಗರಿಯಂತೆ ಇಲ್ಲಿಯ ಕವಿತೆಗಳು ವಸ್ತು ವೈವಿಧ್ಯತೆಯಿಂದ ಕೂಡಿದ್ದು, ಹಲವು ಬಣ್ಣ ಹಾಗೂ ಆಕರ್ಷಣೆಯ ಒಳನೋಟವನ್ನು ಹೊಂದಿವೆ’ ಎಂದು ಶ್ಲಾಘಿಸಿದ್ದಾರೆ.

About the Author

ಆಶಾ ಶಿವಾನಂದ ಯಮಕನಮರಡಿ

ಆಶಾ ಶಿವಾನಂದ ಯಮಕನಮರಡಿ ಅವರು ಮೂಲತಃ ಬೆಳಗಾವಿಯವರು. ರಾಜ್ಯಶಾಸ್ತ್ರ ಪದವೀಧರೆ. ಭಾವಬಂಧ, ಬೆಡಗಿನ ನವಿಲುಗರಿ (ಕವನ ಸಂಕಲನಗಳು), ಚಿಂತನಬಂಧ (ಅಂಕಣ ಬರೆಹ), ಬೆಳಗಾವಿ ಜಿಲ್ಲೆಯ ಸಾಧಿಕಿಯರ ಪರಿಚಯ-‘ಬೆಳಗಾಗಿ ಜಿಲ್ಲಾ ವಿಶಿಷ್ಟ ಸಾಧಕಿಯರು’ಕೃತಿ ಪ್ರಕಟಗೊಂಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ, ಬೆಳಗಾವಿ, ಅಧ್ಯಕ್ಷತೆವಹಿಸಿದ್ದು, ಬೆಳಗಾವಿ ಜಿಲ್ಲಾ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಹಾಗೂ ಸಮಾಜ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದಾರೆ. ಉದಯ ಟಿ.ವಿ.ಯ ‘ಸಿರಿ’ಯಲ್ಲಿ ಊಲನ್ ಹೆಣಿಕೆ ಕುರಿತು ಕಾರ್ಯಕ್ರಮ, ಬೆಳಗಾವಿ ಆಕಾಶವಾಣಿಯಲ್ಲಿ ವೇಣುಧ್ವನಿಯಲ್ಲಿ ಹಲವು ...

READ MORE

Related Books