ಕನಸೊಂದು ಕಣ್ಮರೆ

Author : ಯಲ್ಲಪ್ಪ ಎಂ. ಮರ್ಚೇಡ್

Pages 80

₹ 70.00




Year of Publication: 2018
Published by: ನಿವೇದಿತ ಪ್ರಕಾಶನ
Address: ನಂ. 3437, 1ನೇ ಮಹಡಿ, 4ನೇ ಮುಖ್ಯರಸ್ತೆ 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ, ಬನಶಂಕರಿ 2ನೇ ಹಂತ, ಬೆಂಗಳೂರು
Phone: 9448733323

Synopsys

ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ಅವರ ಕವನ ಸಂಕಲನ ’ಕನಸೊಂದು ಕಣ್ಮರೆ’. ಈ ಕೃತಿಗೆ ಮುನ್ನುಡಿ ಬರೆದ ವೆಂಕಟೇಶ ಬೇವಿನಬೆಂಚಿ, ’ ಕವನಗಳು ರಮ್ಯವಾಗಿವೆ ಹಾಗೂ ಭಾವಪೂರ್ಣವಾಗಿವೆ. ಸಾಹಿತ್ಯದ ಮೌಲ್ಯಗಳನ್ನು ಹೊಂದಿದ ಈ ಸಂಕಲನ ಓದುಗರ ಗಮನ ಸೆಳೆಯುತ್ತದೆ.’ ಎಂದು ಪ್ರಶಂಸಿಸಿದ್ದಾರೆ.  ಗೂಡಿಗೊಂದು ಕಾಡು, ಯುವಭಕ್ತಿ, ಹನಿ ಗವನಗಳು, ಭ್ರಮೆ, ಗೃಹಿಣಿ ಸೇರಿದಂತೆ ಈ ಸಂಕಲನವು ಒಟ್ಟು 58 ಕವನಗಳನ್ನು ಒಳಗೊಂಡಿದೆ. 

About the Author

ಯಲ್ಲಪ್ಪ ಎಂ. ಮರ್ಚೇಡ್
(01 June 1988)

ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ಅವರು ಮೂಲತಃ ರಾಯಚೂರು ತಾಲೂಕಿನ ಜಾಗೀರ್ ಮರ್ಚೇಡ್ ಗ್ರಾಮದವರು. ತಾಯಿ  ಹುಸೇನಮ್ಮ. ತಂದೆ ಅಂಜಿನಯ್ಯ ಮ್ಯಾತ್ರಿ. ಮರ್ಚೇಡ್ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ, ಜೇಗರಕಲ್ ಗ್ರಾಮದಲ್ಲಿ ಪ್ರೌಢಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಕಲಬುರಗಿಯಲ್ಲಿ ಡಿ.ಇಡಿ, ರಾಯಚೂರಿನಲ್ಲಿ ಬಿ.ಎ. ಪದವೀದವಿ ಪಡೆದರು.  2012ರಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಜೊತೆಗೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂ.ಎ. (2015) ಪೂರ್ಣಗೊಳಿಸಿದರು.   ಕೃತಿಗಳು: 2013ರಲ್ಲಿ ಅವರ ಚೊಚ್ಚಲ ಕವನ ಸಂಕಲನ- "ಮಡಿಲು", ಬಣ್ಣದ ಗುಬ್ಬಿ (ಶಿಶು ಗೀತೆಗಳ ಸಂಕಲನ), ’ವಚನ ಪ್ರಭೆ’ (ಆದುನಿಕ ವಚನಗಳ ಸಂಕಲನ),  ’ಕನಸೊಂದು ಕಣ್ಮರೆ’ (ಕವನ ಸಂಕಲನ) ಪ್ರಕಟವಾಗಿದೆ.  ...

READ MORE

Related Books